ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬಹಳ ಮುಖ್ಯವಾದ ವಿಷಯವೊಂದನ್ನು ಶೇರ್ ಮಾಡಿದ್ದಾರೆ. ಅದು ಮಂಡ್ಯ ಲೋಕಸಭಾ ಚುನಾವಣೆಯ ಕುರಿತಾಗಿ ಇದೆ. ಹೌದು ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರವು ಅಕ್ಷರಶಃ ರಣ ಕಣವಾಗಿಯೇ ಹೊರಹೊಮ್ಮಿದೆ. ಹೈ ವೋಲ್ಟೇಜ್ ಕ್ಷೇತ್ರವೆಂದು ಹೆಸರಾಗಿದೆ. ಅದಕ್ಕೆ ಕಾರಣ ಚುನಾವಣಾ ಕಣದಲ್ಲಿ ಒಂದೆಡೆ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ರಾಜ್ಯದ ಮುಖ್ಯಮಂತ್ರಿಗಳ ಮಗನಿದ್ದರೆ, ಮತ್ತೊಂದೆಡೆ ಮಂಡ್ಯದ ಗಂಡು ಅಂಬರೀಶ್ ಅವರ ಪತ್ನಿ ಸುಮಲತ ಅವರು ಪಕ್ಷೇತರ ಅಭ್ಯರ್ಥಿಯಾಗಿ ಇರುವುದು. ಆದ್ದರಿಂದಲೇ ಇದೊಂದು ಪ್ರತಿಷ್ಠೆಯ ಕಣವಾಗಿ ಹೊರಹೊಮ್ಮಿದೆ.

 

ಈ ವಿಷಯವಾಗಿ ವಿಜಯಲಕ್ಷ್ಮಿ ಅವರು ಟ್ಟಿಟರ್ ನಲ್ಲಿ ಈ ರೀತಿ ಟ್ವೀಟ್ ಮಾಡಿದ್ದಾರೆ. ಮಂಡ್ಯ ಜನರೇನಾದರೂ ಸುಮಲತ ಅವರನ್ನು ಗೆಲ್ಲಿಸಿ ಬಿಟ್ಟರೆ ಅದು ಹೊಸ ದಾಖಲೆಗಳನ್ನು ಬರೆಯಲಿದೆ. ಮೊದಲನೆಯದಾಗಿ ಭಾರತದ ದೇಶದ ಇತಿಹಾಸದಲ್ಲೇ, ಮೊದಲ ಬಾರಿಗೆ ಪಕ್ಷೇತರವಾಗಿ ಲೋಕಸಭಾ ಚುನಾವಣೆಗೆ ಇಳಿಸಿ, ಗೆಲುವು ತಂದು ಕೊಟ್ಟು ಕೀರ್ತಿ ಮಂಡ್ಯದ ಜನರ ಪಾಲಿಗೆ ಸಿಗಲಿದೆ. ಇದೊಂದು ದೊಡ್ಡ ಐತಿಹಾಸಿಕ ವಿಜಯವಾಗಲಿದೆ. ಎರಡನೆಯದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪಕ್ಷದ ಎಂಟು ಮಂದಿ ಶಾಸಕರು ಮಂಡ್ಯ ಜಿಲ್ಲೆಯಲ್ಲಿ ಇದ್ದರೂ, ಅವರ ಪುತ್ರ ಚುನಾವಣಾ ಕಣದಲ್ಲಿದ್ದರೂ, ಅಲ್ಲಿನ ಜನರು ಹಣದ ಆಸೆಗೆ ಮರುಳಾಗದೆ ಮತದಾನ ಮಾಡಿದರೆಂಬ ಕೀರ್ತಿಯನ್ನು ಕೂಡಾ ತಮ್ಮದಾಗಿಸಿಕೊಳ್ಳಲಿದ್ದಾರೆ.

ಇನ್ನು ಮೂರನೆಯದಾಗಿ ಕರ್ನಾಟಕ ರಾಜ್ಯದಲ್ಲಿ ಒಬ್ಬ ಮಹಿಳೆಯನ್ನು, ಪಕ್ಷೇತರ ಅಭ್ಯರ್ಥಿ ಆಗಿರುವವರನ್ನು ಮತಗಳಿಂದ ಗೆಲ್ಲಿಸಿದ ಕೀರ್ತಿ ಕೂಡಾ ಮಂಡ್ಯ ಜನರ ಪಾಲಾಗಲಿದೆ. ಮಂಡ್ಯ ಕೇವಲ ಅಭ್ಯರ್ಥಿಗಳ ಪ್ರತಿಷ್ಠೆಯ ಕೇಂದ್ರವಾಗಿಲ್ಲ. ಬದಲಾಗಿ ಇದು ಅಲ್ಲಿನ ಮತದಾರರ ಪ್ರತಿಷ್ಠೆಯ ಕ್ಷೇತ್ರವೂ ಹೌದು. ಮಂಡ್ಯದ ಜನರ ತೀರ್ಮಾನ , ಅವರ ನಿರ್ಧಾರ ಹಾಗೂ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಈ ಬಾರಿಯ ಚುನಾವಣೆ ಅವರಿಗೊಂದು ಸುವರ್ಣಾವಕಾಶ ಒದಗಿಸಿಕೊಟ್ಟಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here