ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಕೆಲವು ದಿನಗಳಿಂದ ಟ್ವಿಟ್ಟರ್ ಪೋಸ್ಟ್‌ಗಳಿಂದ ಸುದ್ದಿಯಾಗುತ್ತಿದ್ದಾರೆ. ವಿಜಯಲಕ್ಷ್ಮೀ ಅವರ ಟ್ವೀಟ್‌ಗಳು ಕೆಲವು ಚರ್ಚೆಗೆ ಒಳಪಡುತ್ತಿದ್ದವು. ಅವರ ಟ್ವೀಟ್‌ ಓದಿದವರಿಗೆ ಕೆಲವೊಂದು ಯೋಚನೆ, ಗೊಂದಲಗಳು ಮೂಡುತ್ತಿತ್ತು. ಆದರೆ ಯಾವುದಕ್ಕೂ ಸ್ಪಷ್ಟತೆ ಸಿಗುವಂತಿರಲಿಲ್ಲ. ಈಗ ಮತ್ತೊಂದು ಟ್ವೀಟ್ ಮೂಲಕ ಜನರ ತಲೆಗೆ ಹುಳ ಬಿಟ್ಟಿದ್ದಾರೆ ದಚ್ಚು ಪತ್ನಿ.ಟ್ವಿಟ್ಟರ್‌ನಲ್ಲಿ ವಿಜಯಲಕ್ಷ್ಮೀ ದರ್ಶನ್ ಅಂತಿದ್ದ ತಮ್ಮ ಹೆಸರನ್ನು ವಿಜಯಲಕ್ಷ್ಮೀ ಅಂತಷ್ಟೇ ಬದಲಾಯಿಸಿಕೊಂಡಿದ್ದರು. ಇದಕ್ಕೆ ಕಾರಣ ಏನು ಅನ್ನೋದು ಬಹಿರಂಗವಾಗಿರಲಿಲ್ಲ. ಜೊತೆಗೆ ಎಲ್ಲ ಸುದ್ದಿಗಳೂ ಕೇವಲ ಗಾಳಿಸುದ್ದಿಗಳು ಎಂಬರ್ಥದಲ್ಲಿ ಇನ್ನೊಮ್ಮೆ ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದರು. ಹೀಗಾಗಿ ಯಾವ ವಿಚಾರದ ಬಗ್ಗೆ ಡಿ ಬಾಸ್ ಪತ್ನಿ ಮಾತನಾಡುತ್ತಿದ್ದಾರೆ? ಅನ್ನೋದು ತಿಳಿಯದಂತಾಗಿತ್ತು.

ಹೀಗಾಗಿ ಕೆಲವರು ಅವರವರೇ ಏನೇನೋ ಊಹಿಸಿಕೊಂಡಿದ್ದರು. ಟ್ವಿಟ್ಟರ್‌ನಲ್ಲಿ ದರ್ಶನ್ ಅವರನ್ನು ಅನ್‌ಫಾಲೋ ಮಾಡಿದ್ದರು ದರ್ಶನ್ ಹೆಂಡತಿ.ಈ ಬಾರಿ ದರ್ಶನ್ ಪತ್ನಿ “ಕರ್ಮಕ್ಕೆ ದ್ವೇಷದ ಅವಶ್ಯಕತೆಯಿಲ್ಲ. ಸುಮ್ಮನೆ ಕಾಯುತ್ತಿರಿ. ನಿಮಗೆ ಯಾರು ನೋವು ನೀಡಿದ್ದಾರೋ ಅವರು ಅವರಾಗಿಯೇ ನೋವನ್ನು ಅನುಭವಿಸುತ್ತಾರೆ. ಒಂದು ವೇಳೆ ನೀವು ಅದೃಷ್ಟಶಾಲಿಗಳಾಗಿದ್ದರೆ, ಅದನ್ನು ನೋಡುವ ಅವಕಾಶವನ್ನು ದೇವರು ನಿಮಗೆ ನೀಡುತ್ತಾನೆ” ಅನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಸಂಡೇ ಕೋಟ್‌ ಅಂಥ ಕ್ಯಾಪ್ಶನ್ ನೀಡಿದ್ದಾರೆ.

ವಿಜಯಲಕ್ಷ್ಮೀ ಅಷ್ಟಕ್ಕೂ ಈ ಮಾತನ್ನು ಹೇಳಿದ್ದು ಯಾರಿಗೆ? ನಿಜಕ್ಕೂ ಅವರಿಗೆ ನೋವಾಗಿದೆಯಾ? ಅನುಭವದ ಆಧಾರದ ಮೇಲೆ ಈ ಮಾತನ್ನು ಹೇಳುತ್ತಿದ್ದಾರಾ? ಸುಮ್ಮನೆ ಮೋಟಿವೇಶನ್ ಆಧಾರದ ಮೇಲೆ ಟ್ವೀಟ್ ಮಾಡಿದ್ದಾರೋ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಚಾಲೆಂಜಿಂಗ್ ಸ್ಟಾರ್ ಪತ್ನಿ ಟ್ವೀಟ್ ಸುತ್ತಮುತ್ತ ಏಳುತ್ತಿವೆ. ಅದೇನೇ ಇರಲಿ. ಸ್ಪಷ್ಟತೆ ಇಲ್ಲದೆ ಏನೇನೋ ಅಂದುಕೊಳ್ಳುವುದು ಬೇಡ, ಏನಂತೀರಾ?

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here