ಮಂಡ್ಯದಲ್ಲಿ ಪ್ರಚಾರದ ಕೊನೆಯ ಹಂತವಾಗಿ ಪಕ್ಷೇತರ ಅಭ್ಯರ್ಥಿ ಸುಮಲತ ಅಂಬರೀಶ್ ಅವರು ನಡೆಸಿದ ಬೃಹತ್ ಸಮಾವೇಶದಲ್ಲಿ ಚಾಲೆಂಜಿಂಗ್ ಸ್ಟಾರ್ ಯಶ್ ಅವರು ಮಾತನಾಡಿ ವಿರೋಧಿ ಗಳಿಗೆ ಮುಟ್ಟಿ ನೋಡಿಕೊಳ್ಳುವಂತ ಖಡಕ್ ಮಾತುಗಳನ್ನು ಹೇಳಿದ್ದಾರೆ. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಎಳನೀರು ತಂದು ಕೊಟ್ಟ ರೈತರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು. ಮಾತು ಆರಂಭಿಸಿದ ಕೂಡಲೇ ನನ್ನಂತಹ ಕಚಡ ನನ್ಮಗಾ ಬೇರೆ ಯಾರಿಲ್ಲ ಎಂದ ಅವರು ನನಗೆ ಎರಡು ಮುಖ ಇಲ್ಲ. ಇರೋದು ಒಂದೇ. ಇಷ್ಟು ದಿನ ಎಲ್ಲರೂ ಮಾತಾಡಿ ಮಾತಾಡಿ ಅಂದರು. ಆದರೆ ನಾನು ಸುಮ್ಮನಿದ್ದೆ, ಆದರೆ ಇವತ್ತು ಮಾತಾಡ್ತೀನಿ ಅಂತ ಅವರು ಮಾತಿನಲ್ಲಿ ವಿರೋಧಿಗಳ ಮೇಲೆ ಧಾಳಿ ನಡೆಸಿದರು.

ಐಟಿ ರೇಡ್ ಬಗ್ಗೆ ಮಾತನಾಡಿದ ಅವರು ಹೌದು ಅದು ಆಗಿದ್ದು ನಿಜ ಅಲ್ಲಿ ಒಂದು ಡೈರಿ ಸಿಕ್ತು ಅಂತ ಹೇಳಿದ್ದು ಕೂಡಾ ನಿಜ. ಆ ಡೈರಿಯಲ್ಲಿ ಡೈಲಿ ಹಸು ಹಾಲು ಎಷ್ಟು ಲೀಟರ್, ಅವುಗಳ ಇಂಜೆಕ್ಷನ್ , ಇತರೆ ಮಾಹಿತಿಗಳಷ್ಟೇ ಇರೋದು ಎಂದು ಹೇಳಿದರು. ಪ್ರಚಾರಕ್ಕೆ ಬಂದಾಗ ನಮ್ಮ ಮೇಲೆ ಐಡಿ ರೇಡ್ ಮಾಡಿಸ್ತೀವಿ ಅಂದೋರು , ಅವರ ಮೇಲೆ ಐಟಿ ರೇಡ್ ಆದ ತಕ್ಷಣ ಅದನ್ನು ಸುಮಲತ ಅವರು ಮಾಡಿಸಿದ್ದು ಅಂತಾರೆ ಎಂತಹ ಜನ ಇವರು ಎಂದು ಜರೆದಿದ್ದಾರೆ.
ಮಾತಿನಲ್ಲಿ ತಮ್ಮ ತಂದೆ ಇದ್ದಾಗ ಜೊತೆಗಿದ್ದು, ಕೊನೆಗೆ ಕಾಣದ ಸ್ನೇಹಿತರ ಬಗ್ಗೆ ಕೂಡಾ ಅವರು ನೆನಪಿಸಿಕೊಂಡರು.

ಆದರೆನಾವು ಅಂತಹವರಲ್ಲ, ಕಷ್ಟ ಸುಖ ಎರಡರಲ್ಲೂ ಜೊತೆ ಇರ್ತೀವಿ ಎಂದು ಸುಮಲತ ಅವರ ಬೆಂಬಲಕ್ಕೆ ಬಂದಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸುಮಲತ ಅವರು ಚುನಾವಣೆಗೆ ನಿಲ್ತೀನಿ ಅಂದಾಗ ನಾವು ಅವರ ಹಿಂದೆ ಇರ್ತೀವಿ ಅಂದ್ವಿ. ಜೋಡೆತ್ತಿನ ಹಾಗೆ ನಿಂತೆವು. ಅದರಲ್ಲೇನಿದೆ ತಪ್ಪು ಎಂದು ಅವರು ಪ್ರಶ್ನಿಸಿದರು. ನಾವೇನು ಕಳ್ಳತನ, ದರೋಡೆ ,ಮೋಸ ,ಮರ್ಡರ್ ಆಗಲಿ ಮಾಡಿಲ್ಲ ಭಯಪಡೋದಕ್ಕೆ ಎಂದು ನೇರವಾದ ನುಡಿಗಳಲ್ಲೇ ವಿರೋಧಿಗಳಿಗೆ ಗಟ್ಟಿ ಉತ್ತರವನ್ನು ‌ನೀಡಿದ್ದಾರೆ.

ಕಲಾವಿದರನ್ನು ನಂಬಬೇಡಿ ಅಂತ ಹೇಳ್ತಾರೆ ಮಾನ್ಯ ಮುಖ್ಯಮಂತ್ರಿ ಅವರು, ಹಾಗಾದರೆ ಅವರೇನು? ಅವರ ಅಭ್ಯರ್ಥಿ ಏನು? ಪ್ರಶ್ನೆ ಹಾಕಿದ್ದಾರೆ. ಅಲ್ಲದೆ ಐವತ್ತು ಅರವತ್ತು ಕೋಟಿ ಬಂಡವಾಳ ಹಾಕಿ ಸಿನಿಮಾ‌ ಮಾಡೋ ಬದಲು ಮಂಡ್ಯದಲ್ಲಿ ಒಂದು ವೃದ್ಧಾಶ್ರಮನೋ, ಇನ್ನೇನಾದರೂ ಮಾಡಿಸಿದ್ದರೆ ಇವತ್ತು ಅವರು ಪ್ರಚಾರಕ್ಕೆ ಬರೋ ಅವಶ್ಯಕತೆ ಇರಲಿಲ್ಲ.‌ ನಾವು ಅವರಂತೆ ಏರ್ ಕಂಡೀಷನ್ ಗಾಡಿಗಳಲ್ಲಿ ಬಂದು ಪ್ರಚಾರ ಮಾಡ್ತಿಲ್ಲ ಎಂದು ಹೇಳಿದ್ದಾರೆ ಅವರು.

ಅಲ್ಲದೆ ಪ್ರತಿವರ್ಷ ತಾನು ತನ್ನ ಸ್ವಂತ ಸಂಪಾದನೆಯಲ್ಲಿ ಸುಮಾರು ಎರಡೂವರೆ ಕೋಟಿ ಇತರರ ಸಹಾಯಕ್ಕೆ ಬಳಸುತ್ತೇನೆ, ಬೇರೆಯವರ ದುಡ್ಡನ್ನಲ್ಲ ಎನ್ನುತ್ತಾ ಒಂದು ಲೋಟ ಹಾಲು ಕರೆದು ತೋರಿಸಲಿ, ಹಸು ಕರು ಹಾಕಿದಾಗ ಅದಕ್ಕೆ ಹಾಕುವ ಮೇವಿನ ಬಗ್ಗೆ ಹೇಳಲಿ ಆಗ ನಿಜವಾದ ರೈತರು ಅಂತ ನಾನು ಒಪ್ಪಿಕೊಳ್ತೀನಿ ಎಂದ ಅವರು , ಮಾನ್ಯ ಮುಖ್ಯಮಂತ್ರಿ ಅವರು ನನ್ನ ಡಿ ಬಾಸ್ ಅನ್ನೋದನ್ನ ಇಡೀ ರಾಜ್ಯದ ಜನ ಕರೆಯೋ ತರ ಮಾಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

ಕೊನೆಗೆ ಸುಮಲತ ಅಂಬರೀಶ್ ಮಂಡ್ಯದ ಸೊಸೆ ಅವರಿಗೆ ಒಂದು ಅವಕಾಶ ನೀಡಿ ಎಂದ ಅವರು ಜನರಿಗೆ ಇವಿಎಂ ನಲ್ಲಿ ಸುಮಲತ ಅವರ ಹೆಸರು ಮರೆತರೂ ನಂಬರ್ ಇಪ್ಪತ್ತು ಮರೀಬೇಡಿ, ಇದು ಮಂಡ್ಯದ ಸ್ವಾಭಿಮಾನದ ಪ್ರಶ್ನೆ ಎಂದು ಜನರನ್ನು ಹುರಿದುಂಬಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here