ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಯಜಮಾನ ಚಿತ್ರದ ಟ್ರೈಲರ್ ನೆನ್ನೆ ರಿಲೀಸ್ ಆಗಿದ್ದು ಈ ಟ್ರೈಲರ್ ಡಿ ಬಾಸ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ಪಕ್ಕಾ ಪೈಸಾ ವಸೂಲ್ ಎಲಿಮೆಂಟ್ಸ್ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಯಜಮಾನ ಚಿತ್ರದ ಟ್ರೈಲರ್ ನಲ್ಲಿ ಕಾಣುತ್ತಿವೆ. ಆನೆ ನಡೆದದ್ದೇ ದಾರಿ ತಾಕತ್ತಿದ್ರೆ ಕಟ್ಟಾಕಿ ಎನ್ನುವ ಸಂಭಾಷಣೆ ಮತ್ತೊಮ್ಮೆ ದರ್ಶನ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಕಳೆದ ಒಂದೂವರೆ  ವರ್ಷದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಾವ ಚಿತ್ರವೂ ಸಹ ತೆರೆಗೆ ಬಂದಿರಲಿಲ್ಲ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಒಂದೂ ವರೆ ವರ್ಷಗಳ ವನವಾಸವನ್ನು‌ ಯಜಮಾನ ಮೂಲಕ ತೀರಿಸಲು‌ ಡಿ ಬಾಸ್ ಸಜ್ಜಾಗಿದ್ದಾರೆ.ಯಜಮಾನ ಚಿತ್ರದ ಟ್ರೈಲರ್ ಜೊತೆಗೇ ಸಿನಿಮಾ ರಿಲೀಸ್ ದಿನಾಂಕವನ್ನು ಸಹ ಚಿತ್ರತಂಡ ನಿಗದಿಪಡಿಸಿದೆ.ಮಾರ್ಚ್ ಒಂದರಂದು ಯಜಮಾನ ಚಿತ್ರ ಅದ್ದೂರಿಯಾಗಿ ವಿಶ್ವದ ಅನೇಕ ಭಾಗಗಳಲ್ಲಿ ತೆರೆಗೆ ಬರುತ್ತಿದೆ.

ಈಗಾಗಲೇ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಯೂಟ್ಯೂಬ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಇದೀಗ ಯಜಮಾನ ಚಿತ್ರದ ಟ್ರೈಲರ್ ಸಹ ಸಖತ್ ಸದ್ದು ಮಾಡುತ್ತಿದೆ. ನೆನ್ನೆ ಬೆಳಿಗ್ಗೆ 10  ಹತ್ತು ಗಂಟೆಗೆ ರಿಲೀಸ್ ಆಗಿದ್ದ ಯಜಮಾನ ಚಿತ್ರದ ಟ್ರೈಲರ್ ಗೆ 24 ಗಂಟೆಯೊಳಗೆ ಸಿಕ್ಕ ವೀವ್ಸ್ ಎಷ್ಟು ಗೊತ್ತಾ ?  ಬರೋಬ್ಬರಿ ಹತ್ತು ಮಿಲಿಯನ್. ಅಂದರೆ ಒಂದು ಕೋಟಿ ಜನರಿಂದ ಯಜಮಾನ ಟ್ರೈಲರ್ ವೀಕ್ಷಣೆಯಾಗಿದ್ದು ಭಾರತದಾದ್ಯಂತ ಯಜಮಾನ ಟ್ರೈಲರ್ ಟ್ರೆಂಡಿಂಗ್ ನಂಬರ್ ಒನ್ ಆಗಿದೆ‌. ಇದು ಇಲ್ಲಿಯ ತನಕ ಯಾವೊಂದು ಕನ್ನಡ ಚಿತ್ರಕ್ಕೂ ಸಿಕ್ಕಿರದ ದಾಖಲೆಯಾಗಿದ್ದು ಯೂಟ್ಯೂಬ್‌ನಲ್ಲಿ ಡಿ ಬಾಸ್ ಹವಾ ಕ್ರಿಯೇಟ್ ಆಗಿದೆ‌‌ ಯಜಮಾನ ಸೃಷ್ಟಿಸಿದ ಈ ರೆಕಾರ್ಡ್ಸ್ ಗೆ ಈ ಹಿಂದಿನ ಎಲ್ಲಾ ಚಿತ್ರಗಳ ರೆಕಾರ್ಡ್ ಪುಡಿ ಪುಡಿ ಆಗಿದೆ.

ವಿ. ಹರಿಕೃಷ್ಣ ಅವರು ಯಜಮಾನ ಚಿತ್ರಕ್ಕೆ ಅದ್ಭುತವಾದ ಸಂಗೀತ ನೀಡುವ ಜೊತೆಗೆ ಕಥೆ ಚಿತ್ರಕಥೆಯಲ್ಲೂ ತೊಡಗಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಟಗರು ಚಿತ್ರದ ಮೂಲಕ ಖಡಕ್ ವಿಲನ್ ಪಟ್ಟ ಪಡೆದಿದ್ದ ಡಾಲಿ ಧನಂಜಯ್ ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಆಗಿದ್ದಾರೆ. ರಷ್ಮಿಕಾ ಮಂದಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೋಡಿಯಾಗಿದ್ದಾರೆ. ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರು ಯಜಮಾನ ಚಿತ್ರಕ್ಕೆ ಬಂಡವಾಳ ಹೂಡಿದ್ದು ಇದೇ ಮಾರ್ಚ್ ಒಂದರಿಂದ ಡಿ ಬಾಸ್ ಅಭಿಮಾನಿಗಳಿಗೆ ಯಜಮಾನನ ದರ್ಶನವಾಗಲಿದೆ‌.ಇಲ್ಲಿದೆ ನೋಡಿ ಯಜಮಾನ ಚಿತ್ರದ ಅಫಿಷಿಯಲ್ ಟ್ರೈಲರ್………

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here