ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರ. ಸದ್ಯಕ್ಕೆ ಎಲ್ಲರ ಗಮನ ಮಂಡ್ಯದಲ್ಲಿ ಏನು ನಡೆಯುತ್ತಿದೆ? ಅಲ್ಲಿನ ಬೆಳವಣಿಗೆಗಳು ಏನು? ಸ್ಪರ್ಧಿಗಳು ಯಾವ ರೀತಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ? ಯಾರ ಬೆಂಬಲಿಗರು ಯಾರ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಮಂಡ್ಯವನ್ನು ಚುನಾವಣೆಯ ಕೇಂದ್ರ ಬಿಂದುವನ್ನಾಗಿ ಮಾಡಿ ಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯುವ ಕಾಯಕ ಬಹಳ ಅಬ್ಬರದಿಂದ ನಡೆದಿದ್ದು, ವಿರೋಧಿ ಬಣಗಳ ಪಡೆಯು ಒಬ್ಬರು ಇನ್ನೊಬ್ಬರ ಮೇಲೆ ಬಿರುಸಾಗಿ ಟ್ರೋಲಿಂಗ್ ನಡೆಸುತ್ತಾ ನೆಟ್ಟಿಗರಿಗೆ ಭರ್ಜರಿ ಎಂಟರ್ಟೈನ್ಮೆಂಟ್ ಕೊಡುತ್ತಿದೆ.

ಈಗ ಟ್ರೋಲಿಂಗ್ ಗೆ ಗುರಿಯಾಗಿರುವುದು ನಟ ಯಶ್ ಹಾಗೂ ದರ್ಶನ್ ಅವರು. ಸುಮಲತ ಅವರು ನಾಮಪತ್ರವನ್ನು ಸಲ್ಲಿಸಲು ಹೋದಾಗ ಅವರ ಜೊತೆಗಿದ್ದ ಈ ಇಬ್ಬರೂ ನಟರು, ತಮ್ಮ ಬೆಂಬಲವನ್ನು ಸುಮಲತ ಅವರಿಗೆ ಸೂಚಿಸಿದ್ದರು. ಆದರೆ ಅನಂತರ ಪ್ರಚಾರ ಕಾರ್ಯದಲ್ಲಿ ಅವರು ಇಬ್ಬರೂ ಕಾಣಿಸುತ್ತಿಲ್ಲ. ಆದ ಕಾರಣ ಅವರ ವಿರುದ್ಧ ಭಿನ್ನ-ವಿಭಿನ್ನವಾದ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಮಲತ ಅವರ ಜೊತೆ ಅವರು ಪ್ರಚಾರದಲ್ಲಿ ಕಾಣುತ್ತಿಲ್ಲ, ಆದ್ದರಿಂದ ಮಂಡ್ಯದಲ್ಲಿ ಜೋಡೆತ್ತುಗಳು ಮಿಸ್ಸಿಂಗ್ , ಎಂದು ದರ್ಶನ್ ಹಾಗೂ ಯಶ್ ಅವರ ಫೋಟೋ ಹಾಕಿ ಸಂಭ್ರಮಿಸಿದ್ದಾರೆ.

ಇದು ಸಾಲದೆಂಬಂತೆ ಶನಿವಾರ ಬೆಳಗಿನ ಜಾವ ಮೂರು ಗಂಟೆಗೆ ನಟ ದರ್ಶನ್ ಅವರ ಮನೆ ಹಾಗೂ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು. ಅದಾದ ನಂತರ ನಟ ದರ್ಶನ್ , ಯಶ್ ಹಾಗೂ ಸುಮಲತ ಅವರಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಒಟ್ಟಾರೆ ಮಂಡ್ಯ ಚುನಾವಣೆ ಕಣದ ಕಾವು ಬೇಸಿಗೆಯ ತಾಪಮಾನದಂತೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಮೇ 25 ರ ವರೆಗೆ ಈ ಕಾವು ಇಳಿಯುವ ಸಾಧ್ಯತೆಗಳಿಲ್ಲ ಎನ್ನುವಂತಿದೆ ಪರಿಸ್ಥಿತಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here