ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಲೋಕಸಭೆ ಕ್ಷೇತ್ರ ಮಂಡ್ಯ. ಉಳಿದೆಲ್ಲ ಕ್ಷೇತ್ರಗಳ ಚುನಾವಣಾ ಭರಾಟೆ ಒಂದೆಡೆಯಾದ್ರೆ ಮಂಡ್ಯದ ಚುನಾವಣೆ ಅಖಾಡ ಮತ್ತೊಂದೆಡೆ ಅಬ್ಬರದ ಪ್ರಚಾರ. ಮಂಡ್ಯ ರಾಜಕೀಯ ಅಖಾಡವನ್ನ ಮತ್ತಷ್ಟು ರಂಗೇರಿಸಿದ್ದು ಸ್ಯಾಂಡಲ್ ವುಡ್ ನಟರ ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರು ಮಂಡ್ಯದಲ್ಲಿ ಬೀಡು ಬಿಟ್ಟಿದ್ದಾರೆ. ದರ್ಶನ್, ಯಶ್ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವ ಮೂಲಕ ಮಂಡ್ಯ ಜನರಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷ, ಅಥವಾ ವ್ಯಕ್ತಿ ವಿರುದ್ಧ ಮಾತನಾಡದೆ, ವಿರೋಧಿಗಳಿಂದ ಎದುರಾಗುತ್ತಿರುವ ಟೀಕೆ ಟಿಪ್ಪಣಿಗಳನ್ನು ಸವಾಲಾಗಿ ಸ್ವೀಕರಿಸಿ ಮತ ಭೇಟೆಯಾಡುತ್ತಿದ್ದಾರೆ.

ಚಿತ್ರನಟರ ಪ್ರಚಾರದಿಂದ ಜನಬೆಂಬಲ ವೋಟುಗಳಾಗಿ ಪರಿವರ್ತನೆಗೊಳ್ಳುವ ಬಗ್ಗೆ ಜನರು ತೀರ್ಮಾನಿಸುತ್ತಾರೆ ಎಂದು ಹೇಳುವ ಮೂಲಕ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಚಿತ್ರನಟರಾದ ದರ್ಶನ್​ ಮತ್ತು ಯಶ್​ ಅವರ ಕ್ರಮವನ್ನು ಕಾಂಗ್ರೆಸ್​ ಶಾಸಕ ಬಿ.ಸಿ. ಪಾಟೀಲ್​ ಸಮರ್ಥಿಸಿಕೊಂಡಿದ್ದಾರೆ.ಹಾವೇರಿಯಲ್ಲಿ ಮಾತನಾಡಿದ ಅವರು, ಚಿತ್ರನಟರ ಪ್ರಚಾರದಿಂದ ಅಭ್ಯರ್ಥಿಗೆ ಮತವಾಗಿ ಪರಿವರ್ತನೆಗೊಳ್ಳುವುದಿಲ್ಲ ಎಂಬ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಸಚಿವ ಜಿ.ಟಿ. ದೇವೇಗೌಡ ಸೇರಿ ಹಲವು ನಾಯಕರ ಹೇಳಿಕೆಗಳನ್ನು ಅಲ್ಲಗಳೆದರು.

ನಾನು ಹಿರೇಕೆರೂರಿನಿಂದ ವಿಧಾನಸಭೆಗೆ ಸ್ಪರ್ಧಿಸಿದಾಗ 5 ಸಾವಿರ ವೋಟುಗಳೂ ಬೀಳಲ್ಲ ಎಂದು ಲೇವಡಿ ಮಾಡಿದ್ದರು. ಆದರೆ, ಜನರೊಂದಿಗಿನ ನಿರಂತರ ಸಂಪರ್ಕ ಮತ್ತು ಒಡನಾಟ ಎಲ್ಲವನ್ನೂ ಬದಲಾಯಿಸುತ್ತದೆ. ಚಲನಚಿತ್ರ ನಟನಾಗಿದ್ದ ನಾನು ಹೆಚ್ಚಿನ ಮತ ಪಡೆದುಕೊಂಡು ಶಾಸಕನಾಗಿ ಆಯ್ಕೆಯಾದೆ. ಅದರಂತೆ ದರ್ಶನ್​ ಮತ್ತು ಯಶ್​ ಅವರು ನಿರಂತರವಾಗಿ ಜನರೊಂದಿಗೆ ಸಂಪರ್ಕ ಮತ್ತು ಒಡನಾಟ ಹೊಂದಿದ್ದಾರೆ. ಇದು ಮತಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here