ಬಾಹುಬಲಿ ಗಿಂತ ಕಮ್ಮಿ ಇಲ್ಲ ದರ್ಶನ್ ಅಭಿನಯದ ಕುರುಕ್ಷೇತ್ರ !ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸ್ಯಾಂಡಲ್ ವುಡ್ ನ ಹೆವಿ ಬಜೆಟ್ ಚಿತ್ರ ಎಂದು ಹೇಳಲಾಗುತ್ತಿರುವ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಕೊನೆಯ ಹಂತ ತಲುಪಿದೆ.ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಸಾಗಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಇಂಟ್ರೊಡಕ್ಸನ್ ದೃಶ್ಯದ ಚಿತ್ರೀಕರಣವನ್ನು ನಿರ್ದೇಶಕ ನಾಗಣ್ಣ ಚಿತ್ರೀಕರಿಸುತ್ತಿದ್ದಾರೆ.ಈ ಅದ್ದೂರಿ ಚಿತ್ರೀಕರಣದಲ್ಲಿ ಸುಮಾರು 60 ಕುದುರೆಗಳು ಹಾಗೂ ಎಂಟು ಆನೆಗಳು ಭಾಗವಹಿಸಿದ್ದು ಜೊತೆಗೆ ಆರುನೂರು ಸಹಕಲಾವಿದರು ಈ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ.ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಈ ಥರದ ಅದ್ದೂರಿ ಚಿತ್ರ ಬಂದಿಲ್ಲ ಎಂದು ನಿರ್ಮಾಪಕ ಮುನಿರತ್ನ ತಿಳಿಸಿದ್ದು ಕನ್ನಡದ ಬಾಹುಬಲಿ ಇದಾಗಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.ಇನ್ನು ಚಿತ್ರದಲ್ಲಿ ಬಹುದೊಡ್ಡ ತಾರಾಬಳಗದೇ ದಂಡು ಇದ್ದು ಚಾಲೆಂಜಿಂಗ್ ಸ್ಟಾರ್ ಗೆ ಅಂಬರೀಶ್ ,ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್ ಗೌಡ , ಮೇಘನಾ ರಾಜ್ ಮುಂತಾದವರು ಸಾಥ್ ನೀಡಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ತೆರೆ ಮೇಲೆ ಅಬ್ಬರಿಸಲಿದ್ದಾರೆ.ಚಿತ್ರಕ್ಕಾಗಿ ಸುಮಾರು 75 ಕೋಟಿ ಬಂಡವಾಳ ಹೂಡಲಾಗಿದೆ ಎಂದು ಚಿತ್ರತಂಡ ಹೇಳುತ್ತಿದೆ.ಸಂಪೂರ್ಣ 3D ಎಫೆಕ್ಟ್ ಹೊಂದಿರುವ ಕುರುಕ್ಷೇತ್ರ ಫೆಬ್ರುವರಿ ತಿಂಗಳಲ್ಲಿ ತೆರೆಗೆ ಬರುವ ಸಂಭವವಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here