ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಹೇಗಿದ್ದಾರೆ. ಅವರ ಸ್ಥಿತಿ ಈಗ ಹೇಗಿದೆ ಅವರ ಬಲಗೈ ಹೇಗಿದೆ ಎಂಬುದಕ್ಕೆ ಈಗ ಒಂದು ಸ್ಪಷ್ಠವಾದ ಉತ್ತರ ಸಿಕ್ಕಿದೆ. ದರ್ಶನ್ ತೂಗುದೀಪ್ ಅವರ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದಿನ ಚಿತ್ರ ಬಿಡುಗಡೆಯಾಗಿದೆ ಆ ದೃಶ್ಯಗಳನ್ನು ನೀವು ನೋಡಿ

ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಸ್ಪತ್ರೆಯ ಫೋಟೋ ಈಗ ಔಟ್ ಆಗಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಸ್ಪತ್ರೆಯಲ್ಲಿ ಚಿರುವ ಫೋಟೋ ಲೀಕ್ ಆಗಿದ್ದು ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈ ಸಂಪೂರ್ಣವಾಗಿ ಬ್ಯಾಂಡೇಜ್ ಸುತ್ತಿರುವುದು ಕಾಣಿಸುತ್ತಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈ ಗೆ ಹೆಚ್ಚಿನ ಪೆಟ್ಟಾಗಿರುವುದು ಈ ಫೋಟೋ ಮೂಲಕ ತಿಳಿಯುತ್ತದೆ‌


ದರ್ಶನ್​ ಕೈಗೆ ಹಾಕಿಕೊಂಡಿದ್ದ ಕಡಗ ಮುರಿದು ಮೊಣಕೈಗೆ ಚುಚ್ಚಿದ ಕಾರಣ ತೀವ್ರ ರಕ್ತಸ್ರಾವವಾಗಿತ್ತು. ದರ್ಶನ್​ ಅವರ ಬಲಗೈ ಮೂಳೆ ಮುರಿದುಹೋಗಿದ್ದರಿಂದ ಸತತ ಒಂದೂವರೆ ಗಂಟೆಗಳ ಕಾಲ ತುರ್ತು ಆಪರೇಷನ್​ ನಡೆಸಲಾಗಿದೆ. ಆಪರೇಷನ್​ ಯಶಸ್ವಿಯಾಗಿದ್ದು, ದರ್ಶನ್​ ಅವರನ್ನು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಆಸ್ಪತ್ರೆಗೆ ವಿಜಯಲಕ್ಷ್ಮೀ ದರ್ಶನ್​, ದಿನಕರ್​ ತೂಗುದೀಪ, ಸೃಜನ್​ ಲೋಕೇಶ್​ ಸೇರಿದಂತೆ ದೇವರಾಜ್​ ಕುಟುಂಬದವರು ಕೂಡ ಆಗಮಿಸಿದ್ದಾರೆ. ದರ್ಶನ್​ ಅವರ ಕೈಗೆ ರಾಡು ಹಾಕಲಾಗಿದೆ. ನಟ ದೇವರಾಜ್​ ಅವರ ಕೈಬೆರಳಿಗೂ ಚಿಕಿತ್ಸೆ ನೀಡಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here