ಪುಲ್ವಾಮ ಬಳಿಯ ಭಯೋತ್ಪಾದಕ ಬಾಂಬ್ ದಾಳಿಗೆ ನಲವತ್ತಕ್ಕೂ ಹೆಚ್ಚು ವೀರ ಯೋಧರು ಮಡಿದು ಭಾರತೀಯರು ಕಣ್ಣೀರು ಮಿಡಿದಿದ್ದಾರೆ. ಪುಲ್ವಾಮ ದುರಂತ ಪ್ರತಿಯೊಬ್ಬ ಭಾರತೀಯರ ಎದೆಯ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಉಗ್ರರು ಸಿಕ್ಕರೆ ಅವರ ಎದೆ ಬಗೆಯಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಸಹ ತಮ್ಮ ಜೊತೆಯಲ್ಲಿ ಕೆಲಸ ಮಾಡುವ ವೀರ ಯೋಧರ ಸಹವರ್ತಿಗಳು ಸಹ ಪ್ರತಿದಿನ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ವೀರ ಯೋಧರನ್ಬು ಮೋಸವಾಗಿ ಬಾಂಬ್ ಹಾಕಿ ಬಲಿ ಪಡೆದ ಉಗ್ರಗಾಮಿ ಸಂಘಟನೆಗಳ ವಿರುದ್ಧ ಸಿಡಿದೆದ್ದಿರುವ ವೀರ ಯೋಧರು ತಮ್ಮ ಮೊಬೈಲ್ ಗಳಲ್ಲಿ ಸೆಲ್ಫೀ ವೀಡಿಯೋ ಮಾಡಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಅದೇ ರೀತಿಯಲ್ಲಿ ದಾವಣಗೆರೆಯ ಸಿ ಆರ್ ಪಿ ಎಫ್ ಯೋಧನೊಬ್ಬ ಉಗ್ರರ ಬಗ್ಗೆ ತಮ್ಮ ಅಸಮಾಧಾನ ,ಕೋಪ , ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆಯ ಈ ಸಿ ಆರ್ ಪಿ ಎಫ್ ಯೋಧರೊಬ್ಬರು ವೀಡಿಯೋ ಮಾಡಿ ಮೋದಿ ಜೀ ದಯವಿಟ್ಟು ನಮಗೆ ಆರ್ಡರ್ ಕೊಟ್ಟು ನೋಡಿ ನಲವತ್ತು ಯೋಧರ ಸಾವಿನ ಪ್ರತಿಫಲವಾಗಿ ನಲವತ್ತು ಸಾವಿರ ಪಾಪಿಗಳ ತಲೆ ತರುತ್ತೇವೆ ಅಷ್ಟು ತಾಕತ್ತು ನಮ್ಮ ಭಾರತೀಯ ಯೋಧರಿಗೆ ರಕ್ತದಲ್ಲೇ ಇದೆ.

ನಮಗೊಂದು ಅವಕಾಶ ಕೊಟ್ಟು ನೋಡಿ.ನಮ್ಮಿಂದ ಆಗದಿದ್ದರೆ ಇಂದೇ ಸೇನೆಗೆ ರಾಜೀನಾಮೆ ಕೊಟ್ಟು ಬರುತ್ತೇವೆ ಎಂದು ವೀರ ಯೋಧ ಹೇಳಿರುವ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ‌. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಈ ಯೋಧ ದಾವಣಗೆರ ಮೂಲದವರು ಎಂದು ತಿಳಿದುಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here