ಟಾಂಟಾನ್ ನಲ್ಲಿ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಗೆಲುವಿಗೆ ಮಹತ್ವದ ಕೊಡುಗೆಯನ್ನು ತನ್ನ ಆಟದ ಮೂಲಕ ನೀಡಿದ್ದಾರೆ. ಅವರು ಒಟ್ಟು 111 ಎಸೆತಗಳಲ್ಲಿ 107 ರನ್ ಗಳನ್ನು ಗಳಿಸುವ ಮೂಲಕ ಟೀಂ ನಲ್ಲಿ ಉತ್ತಮ ಆಟವನ್ನು ಪ್ರದರ್ಶನ ಮಾಡಿದ್ದರು. ಅವರ ಈ ಆಟದಿಂದಾಗಿಯೇ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಹಳ ಅನಾಯಾಸವಾಗಿ ದಕ್ಕಿದೆ. ಅದಾದ ನಂತರ ಅವರು ತಮ್ಮ ಅಭಿಮಾನಿಗಳು ಕಡೆ ಬಂದು ಅವರತ್ತ ಕೈ ಬೀಸುತ್ತಾ ಅವರ ಸಾಲಿನತ್ತಾ ನಡೆಯುತ್ತಾ ಬರುವಾಗ , ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದ್ದಾರೆ.

ಪಂದ್ಯ ಮುಗಿದ ಮೇಲೆ ಆಟಗಾರರು ಗ್ಯಾಲರಿಯಲ್ಲಿ ಕುಳಿತು ಕೊಂಡು ತಮ್ಮ ಬಳಿ ಬರುವ ಅಭಿಮಾನಿಗಳಿಗೆ ಹಸ್ತಾಕ್ಷರವನ್ನು ನೀಡುವುದು ಸಾಮಾನ್ಯ‌. ಆದರೆ ಡೇವಿಡ್ ವಾರ್ನರ್ ಅವರು ತಮಗೆ ದೊರೆತ ಪಂದ್ಯ ಶ್ರೇಷ್ಠ ಟ್ರೋಫಿಯನ್ನೇ ಅಭಿಮಾನಿಯ ಕೈಗೆ ನೀಡುವ ಮೂಲಕ ಗಮನವನ್ನು ಸೆಳೆದಿದ್ದಾರೆ. ವಾರ್ನರ್ ಅವರು ಕೊಟ್ಟ ಟ್ರೋಫಿಯನ್ನು ಹಿಡಿದ ಅವರ ಆ ಅಭಿಮಾನಿ ಬಾಲಕ ಬಹಳ ಸಂತಸವನ್ನು ಪಟ್ಟಿದ್ದಾನೆ. ನೆಚ್ಚಿನ ಆಟಗಾರ ತನ್ನ ಟ್ರೋಫಿಯನ್ನೇ ಅಭಿಮಾನಿಯ ಕೈ ಗೆ ನೀಡಿದ ಸಂಭ್ರಮ ಅಭಿಮಾನಿ ಯಲ್ಲಿ ಕಂಡಿದೆ.

ಆ ಅಭಿಮಾನಿ ಮಾತನಾಡುತ್ತಾ ವಾರ್ನರ್ ಅವರು ನನಗೆ ಟ್ರೋಫಿ ನೀಡಿದ್ದು ಬಹಳ ಸಂತಸವಾಗಿದೆ. ನಾವು ಸಂತಸದಿಂದ ಬಾವುಟ ಹಾರಿಸುತ್ತಿದ್ದೆವಷ್ಟೇ, ಅವರು ನಮ್ಮ ಬಳಿ ಬಂದು ಟ್ರೋಫಿ ನೀಡಿದರು. ನನಗೆ ಅವರೆಂದರೆ ತುಂಬಾ ಇಷ್ಟ ಎಂದು ಹೇಳಿದ್ದಾನೆ. ಆಸ್ಟ್ರೇಲಿಯಾ ತಂಡದ ಮಾದರಿಯ ಹಳದಿ ಜೆರ್ಸಿ ಧರಿಸಿ ಬಾವುಟ ಹಾರಿಸುತ್ತಿದ್ದ ಬಾಲಕನನ್ನು ನೋಡಿದ ಡೇವಿಡ್ ಅವರು ತಮ್ಮ ಟ್ರೋಫಿಯ ಮೇಲೆ ಆಟೋಗ್ರಾಫ್ ಹಾಕಿ , ಆ ಬಾಲಕನ ಕೈಗೆ ಕೊಟ್ಟಾಗ ನೆರೆದ ಅಭಿಮಾನಿಗಳು ರೋಮಾಂಚನದ ಅನುಭವ ಪಡೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here