ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ ಕನ್ನಡದ ಕೋಟ್ಯಾಧಿಪತಿ ಇಂದಿನಿಂದ ಮತ್ತೆ ಪುನಾರಂಭವಾಗಿದೆ. ಮೊದಲ ಎರಡು ಸೀಸನ್ ಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರೂಪಣೆಯಲ್ಲಿ ಬಾರೀ ಜನಪ್ರಿಯತೆ ಪಡೆದಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮೂರನೇ ಸೀಸನ್ನಿನಲ್ಲಿ ರಮೇಶ್ ಅರವಿಂದ್ ಅವರ ನಿರೂಪಣೆ ಮೂಲಕ ಮೂಡಿಬಂದಿತ್ತು. ಆದರೆ ಇದೀಗ ಮತ್ತೆ ನಾಲ್ಕನೇ ಸೀಸನ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪವರ್ ಫುಲ್ ನಿರೂಪಣೆಯಲ್ಲಿ ಇಂದಿನಿಂದ ಆರಂಭವಾಗಿದ್ದು ಮೊದಲ ದಿನವೇ ವೀಕ್ಷಕರ ಮೆಚ್ಚುಗೆ ಪಡೆದಿದೆ.

ಇಂದಿನ ಕಾರ್ಯಕ್ರಮ ಸಾಕಷ್ಟು ವಿಶೇಷವಾಗಿತ್ತು. ಮೊದಲ ಸ್ಪರ್ಧಿಯಾಗಿ ಹೊನ್ನಾವರ ತಾಲ್ಲೂಕಿನ ಕುಮಟಾದ ನಿವಾಸಿ ದೀಪಾ ಭಾಗವಹಿಸಿದ್ದರು. ಮೀನುಗಾರಿಕೆಯನ್ನೇ ಕೆಲಸವಾಗಿಸಿಕೊಂಡಿರುವ ದೀಪ ಅವರು ಜೀವನದಲ್ಲಿ ಸ್ವಂತ ಮನೆ ಹಾಗೂ ಜಾಗ ಹೊಂದಿಲ್ಲ. ಹಾಗಾಗಿ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೀಪ ಅವರು ಹನ್ನೆರಡು ಲಕ್ಷದ ಐವತ್ತು ಸಾವಿರ ಗೆಲ್ಲುವ ಮೂಲಕ ಕನಸನ್ನು ಸಾಕಾರಗೊಳಿಸಿಕೊಂಡರು.

ಇದೇ ಕಾರ್ಯಕ್ರಮದಲ್ಲಿ ದೀಪ ಅವರ ಆಸೆಯಂತೆ ರಾಘವೇಂದ್ರ ರಾಜಕುಮಾರ್ ಅವರು ಸಹ ಕಾಣಿಸಿಕೊಂಡರು. ಇನ್ನು ಗೆದ್ದ ಸಂಭ್ರಮದಲ್ಲಿ ದೀಪ ಅವರು ಪುನೀತ್ ಬಳಿ ಈ ಕಾರ್ಯಕ್ರಮದಲ್ಲಿ ಬಂದ ಹಣದಿಂದ ಕಟ್ಟುವ ಮನೆಯ ಗೃಹಪ್ರವೇಶಕ್ಕೆ ಬರುವಂತೆ ಮನವಿ ಮಾಡಿದರು. ಮೊದಲ ದಿನವೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಯಶಸ್ವಿಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here