ದೇಶಾದ್ಯಂತ ಕೊರೋನ ವೈರಸ್ ನಿಂದಾಗಿ 21 ದಿನಗಳು ಲಾಕ್ ಡೌನ್ ಜಾರಿಯಾಗಿದೆ. ದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಹಲವಾರು ಜನರಿಗೆ ಈ ಲಾಕ್ ಡೌನ್ ಹಲವು ರೀತಿಯಲ್ಲಿ ಸಮಸ್ಯೆ ತಂದಿರುವುದು ಸತ್ಯ. ಹಲವಾರು ಜನರು ದಿನನಿತ್ಯದ ಅಗತ್ಯ ವಸ್ತುಗಳಿಂದ ಮತ್ತು ಹಸಿವಿನಿಂದ ಬಳಲುತ್ತಿದ್ದು ಹಲವಾರು ಜನರು ತಮ್ಮಿಂದ ಆಗುವ ಸಹಾಯ ಮಾಡುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ದಾಸ್ ಅವರು ಸಹ ಸದ್ದಿಲ್ಲದೆ ಇಂದು ಬೆಂಗಳೂರಿನ ಹಲವಾರು ಸ್ಲಂ ಗಳಿಗೆ ತೆರಳಿ ಜನರಿಗೆ ಅಗತ್ಯವಿರುವ ದಿನಸಿ ವಸ್ತುಗಳನ್ನು ನೀಡಿದ್ದಾರೆ.

ದೀಪಿಕ ದಾಸ್ ಅವರು ಮೊನ್ನೆಯಷ್ಟೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು ಐದು ಲಕ್ಷ ರೂಗಳನ್ನು ದೇಣಿಗೆ ನೀಡುವ ಮೂಲಕ ಎಲ್ಲರಿಂದ ಮೆಚ್ಚುಗೆ ಪಡೆದಿದ್ದರು. ಇಂದು ಮತ್ತೆ ಬೆಂಗಳೂರಿನ ಹಲವು ಸ್ಥಳಗಳಿಗೆ ತೆರಳಿ ತಮ್ಮ ಸಂಗಡಿಗರ ಜೊತೆ ಹಲವಾರು ಜನರಿಗೆ ದಿನನಿತ್ಯ ಬಳಸುವ ಅಕ್ಕಿ ಬೇಳೆ ಸೇರಿದಂತೆ ಹಲವಾರು ಅಗತ್ಯವಸ್ತುಗಳನ್ನು ಬಡಜನರಿಗೆ ವಿತರಣೆ ಮಾಡಿದ್ದಾರೆ. ನಾಗಿಣಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡ ದೀಪಿಕಾ ದಾಸ್ ಅವರು ನಂತರ ಕನ್ನಡದ ಅತಿದೊಡ್ಡ

ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಅದ್ಭುತ ಆಟ ಆಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಹೊರಗಡೆ ಜನ ಸೇವೆ ಮಾಡುವ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಂದ ಹಾಗೂ ಕನ್ನಡಿಗರಿಂದ ಸಹಬ್ಬಾಸ್ ಎನಿಸಿಕೊಂಡಿದ್ದಾರೆ. ದೀಪಿಕಾ ದಾಸ್ ಅವರ ಈ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆಗಳು ವ್ಯಕ್ತವಾಗಿದ್ದು ಇದೇ ರೀತಿ ಉತ್ತಮ ಕೆಲಸ ಮುಂದುವರೆಸುವಂತೆ ಅಭಿಮಾನಿಗಳು ಕಮೆಂಟ್ ಮೂಲಕ ಹೇಳಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here