ನಾಗಿಣಿ ಅಮೃತ ಆಗಿ ಜನರ ಮನ ಮನಸ್ಸಲ್ಲಿ ಸ್ಥಾನ ಪಡೆದವರು ದೀಪಿಕಾ ದಾಸ್. ಬಿಗ್ ಬಾಸ್ ಸೀಸನ್ 7 ಕ್ಕೆ ಅವರ ಎಂಟ್ರಿ ಆದ ಮೇಲೆ ಅವರು ಬಿಗ್ ಹೌಸ್ ನ ಒಬ್ಬ ಪ್ರಬಲ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ. ಮನೆಯ ಕೆಲಸಗಳು ಯಾವುದೇ ಆಗಿರಲಿ, ಟಾಸ್ಕ್ ಗಳಾಗಿರಲಿ ಬಹಳ ಚಟುವಟಿಕೆಯಿಂದ ಅದನ್ನು ನಿರ್ವಹಿಸಿ ತಾನು ಗಟ್ಟಿಗಿತ್ತಿ ಎಂದು ಸಾಬೀತು ಮಾಡಿದ್ದಾರೆ. ಇದೇ ದೀಪಿಕಾ ದಾಸ್ ಅವರು ಬಿಗ್ ಹೌಸ್ ನಲ್ಲಿ ತಮ್ಮ ಅಪೂರ್ಣ ಪ್ರೇಮ ಕಥೆಯನ್ನು ಹೇಳುವ ಮೂಲಕ, ಇದುವರೆವಿಗೂ ಯಾರಿಗೂ ತಿಳಿಯದ ತಮ್ಮ ಲವ್ ಫೈಲ್ಯೂರ್ ಕಥೆಯನ್ನು ಹಂಚಿಕೊಂಡಿದ್ದಾರೆ.

ದೀಪಿಕಾ ಅವರು ಒಬ್ಬ ಹುಡುಗನನ್ನು ಲವ್ ಮಾಡಿದ್ರಂತೆ. ಆತನೂ ಕೂಡಾ ಇವರನ್ನು ಇಷ್ಟಪಟ್ಟಿದ್ದನಂತೆ. ಹೀಗೆ ಹಲವು ದಿನಗಳು ಕಳೆದ ಮೇಲೆ ದೀಪಿಕಾ ಅವರಿಗೆ ಒಂದು ಕಟು ಸತ್ಯ ತಿಳಿಯಿತಂತೆ. ಅದೇನೆಂದರೆ ಆತ ಇನ್ನೊಬ್ಬ ಹುಡುಗಿಯನ್ನು ಕೂಡಾ ಪ್ರೀತಿಸುತ್ತಿದ್ದಾನೆ ಎಂದು. ಅದಾದ ಮೇಲೆ ಈ ವಿಷಯವಾಗಿ ದೀಪಿಕಾ ಅವರಿಗೆ ಆತ ತನಗೆ ಇನ್ನೊಬ್ಬ ಹುಡುಗಿಯ ಬಗ್ಗೆ ಕನ್ಸರ್ನ್ ಇದೆ. ನಿನ್ನ ಬಗ್ಗೆ ಪ್ರೀತಿ ಇದೆ ಎಂದಾಗ, ದೀಪಿಕಾ ಅದನ್ನು ಒಪ್ಪದೆ ಅವನೊಡನೆ ಬ್ರೇಕ್ ಅಪ್ ಮಾಡಿಕೊಂಡರಂತೆ.

ಆತನೊಡನೆ ಇಂದಿಗೂ ಕಾಂಟಾಕ್ಟ್ ಇದೆಯಾದರೂ ಅವನ ಬಗ್ಗೆ ಯಾವುದೇ ಫೀಲಿಂಗ್ಸ್ ಇಲ್ಲ ಎಂದಿದ್ದಾರೆ ದೀಪಿಕಾ. ಹೀಗೆ ತಮ್ಮ ಮನಸ್ಸಲ್ಲಿ ವರ್ಷಗಳಿಂದ ಯಾರಿಗೂ ಹೇಳದೆ ಇಟ್ಟುಕೊಂಡಿದ್ದ ತಮ್ಮ ಈ ಕಥೆಯನ್ನು ದೀಪಿಕಾ ಲೆವಿಸ್ಟಾ ಫಸ್ಟ್ ಲವ್ ಸ್ಟೋರಿ ಟಾಸ್ಕ್ ನ ಮೂಲಕ ಎಲ್ಲರೊಡನೆ ಹಂಚಿ ಕೊಂಡಿದ್ದಾರೆ. ಬಹುಶಃ ಜೀವನದಲ್ಲಿ ಎದುರಾದ ಇಂತಹ ಕಹಿ ಅನುಭವವೇ ದೀಪಿಕಾ ಅವರನ್ನು ಒಬ್ಬ ದಿಟ್ಟ ಯುವತಿಯನ್ನಾಗಿ ಮಾಡಿರಬಹುದು ಎಂದು ಈಗ ಎಲ್ಲರಿಗೂ ಅನಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here