ಬಿಗ್ ಬಾಸ್ ಸೀಸನ್ 7 ಯಶಸ್ವಿ ಹತ್ತನೇ ವಾರದ ಅಂತ್ಯಕ್ಕೆ ಬಂದಿದೆ‌. ಈ ಬಾರಿ ಮನೆಯಲ್ಲಿ ಇರುವ ಸ್ಪರ್ಧಿಗಳೆಲ್ಲರೂ ಕೂಡಾ ಜನ ಮೆಚ್ಚುಗೆ ಪಡೆಯುತ್ತಿದ್ದಾರೆ. ಅದರಲ್ಲೂ ನಾಗಿಣಿ ದೀಪಿಕಾ ದಾಸ್ ಅಂತೂ ಒಬ್ಬ ಅದ್ಭುತ ಸ್ಪರ್ಧಿಯಾಗಿ ದಿನದಿಂದ ದಿನಕ್ಕೆ ಜನರ ಮೆಚ್ಚುಗೆ ಪಡೆಯುತ್ತಲೇ, ಅವರ ಹಾಗೂ ಶೈನ್ ಅವರ ಜೋಡಿ ಜನರಿಗೆ ಭರ್ಜರಿ ಮನರಂಜನೆಯನ್ನು ಕೂಡಾ ನೀಡುತ್ತಾ ಸಾಗಿರುವಾಗಲೇ, ದೀಪಿಕಾ ಅವರ ತಾಯಿ ಬಿಗ್ ಬಾಸ್ ಮನೆಯಲ್ಲಿ ಮಗಳ ಜರ್ನಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮ್ಮ ಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಲೇ ಕೆಲವು ಪ್ರಮುಖ ವಿಚಾರಗಳ ಮೇಲೆ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.

ದೀಪಿಕಾ ಅವರು ಮನೆಯೊಳಗೆ ಒಂದು ಸಂದರ್ಭದಲ್ಲಿ ತನಗೆ ಒಬ್ಬರಿಂದ ಮೋಸವಾದ ವಿಷಯದ ಬಗ್ಗೆ ಮಾತನಾಡಿದ್ದರು. ದೀಪಿಕಾ ಅವರ ತಾಯಿ ಇದರ ಬಗ್ಗೆ ನಮಗೆ ತಿಳಿದಿರಲಿಲ್ಲ, ಮಗಳು ಮನೆಗೆ ಬಂದ ಮೇಲೆ ಆ ವಿಷಯವನ್ನು ಕೇಳಿ ತಿಳಿಯಬೇಕು ಎಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಶೈನ್ ಹಾಗೂ ದೀಪಿಕಾ ಅವರ ಜೋಡಿಯ ಬಗ್ಗೆ ಮಾತನಾಡುತ್ತಾ ಅದೆಲ್ಲಾ ಮನೆಯೊಳಗೆ ಅಷ್ಟೇ, ಅವರು ಹೊರಗೆ ಬಂದ ಮೇಲೆ ಸರಿ ಹೋಗ್ತಾರೆ ಬಿಡಿ ಎಂದು ಹೇಳಿದ್ದಾರೆ. ಮಗಳು ಬಿಗ್ ಹೌಸ್ ನಲ್ಲಿ ದಿನದಿಂದ ದಿನಕ್ಕೆ ಸ್ಟ್ರಾಂಗ್ ಆಗುತ್ತಿರುವುದು ಅವರಿಗೆ ಖುಷಿ ನೀಡಿದೆ.

ಬಿಗ್ ಹೌಸ್ ನಲ್ಲಿ ಕುರಿ ಪ್ರತಾಪ್, ಶೈನ್, ಪ್ರಿಯಾಂಕ, ಚಂದನಾ ಇವರೆಲ್ಲಾ ತಮ್ಮ ಫೇವರಿಟ್ ಎಂದಿರುವ ದೀಪಿಕಾ ಅವರ ತಾಯಿ, ಶೈನ್ ಸ್ಪರ್ಧಿಯಾಗಿ ಅಷ್ಟೇ ಫೇವರಿಟ್ ಅಂತ ನಾನು ಹೇಳ್ತಾ ಇರೋದು ಎಂದಿದ್ದಾರೆ. ಅಲ್ಲದೆ ಶೈನ್ ಮತ್ತು ದೀಪಿಕಾ ಜೋಡಿಯ ಬಗ್ಗೆ ಸೀರಿಯಸ್ ಆಗಿ ಆಲೋಚಿಸುವ ಅಗತ್ಯ ಇಲ್ಲ ಎಂದಿರುವ ಅವರಿಗೆ ಮೊದಲು ಮಗಳು ಎರಡೇ ವಾರಗಳಲ್ಲಿ ವಾಪಸ್ಸು ಬಂದು ಬಿಡುವಳು ಎನಿಸಿತ್ತಂತೆ. ಆದರೆ ಈಗ ದೀಪಿಕಾ ಫಿನಾಲೇ ಕಂಟೆಸ್ಟಂಟ್ ಆದರೂ ಆಶ್ಚರ್ಯ ಪಡುವಂತಿಲ್ಲ ಎನ್ನುವ ಮಟ್ಟಕ್ಕೆ ಮನೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here