ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರು ಇದೀಗ ಸಾಕಷ್ಟು ಚರ್ಚೆಯ ವಿಷಯವಾಗಿದ್ದಾರೆ. ಕೆಲವು ದಿನಗಳಿಂದ ಅವರ ಬಹು ನಿರೀಕ್ಷಿತ ಸಿನಿಮಾ ಚಪಕ್ ಬಗ್ಗೆ ಸಾಕಷ್ಟು ಸುದ್ದಿಗಳು ಹಾಗೂ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಕೂಡಾ ಹುಟ್ಟಿಕೊಂಡಿದ್ದವು‌. ಆದರೆ ಈಗ ದೀಪಿಕಾ ಅವರು ಸುದ್ದಿಯಾಗಿರುವುದು ತಮ್ಮ ಹೊಸ ಸಿನಿಮಾಗಾಗಿ ಅಲ್ಲ. ಬದಲಾಗಿ ಅವರ ಇತ್ತೀಚಿನ ಜೆ.ಎನ್.ಯು ಭೇಟಿಗಾಗಿ. ಹೌದು ದೀಪಿಕಾ ಪಡುಕೋಣೆ ಅವರು ಜೆ.ಎನ್.ಯು. ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ದೀಪಿಕಾ ಪಾಲ್ಗೊಂಡು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದಾರೆ.

ದೀಪಿಕಾ ಅವರ ದಿಢೀರ್ ಭೇಟಿ ಕೂಡಾ ಇದೀಗ ಕುತೂಹಲವನ್ನು ಹುಟ್ಟು ಹಾಕಿದೆ. ಇನ್ನು ದೀಪಿಕಾ ಅವರ ಈ ಭೇಟಿ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡ ಪರಿಣಾಮ ಈಗ ಅವರ ಬಹು ನಿರೀಕ್ಷಿತ ಸಿನಿಮಾ ಚಪಕ್ ಮೇಲೆ ಆಗತೊಡಗಿದೆ. ನೆಟ್ಟಿಗರು ದೀಪಿಕಾ ಅವರು ಚಪಕ್ ಸಿನಿಮಾವನ್ನು ಬಹಿಷ್ಕರಿಸಿ, ಸಿನಿಮಾಕ್ಕಾಗಿ ಬುಕ್ಕಿಂಗ್ ಮಾಡಿದ್ದ ಟಿಕೆಟ್ ಗಳನ್ನು ರದ್ದು ಮಾಡಿ, ಅದರ ಸ್ಕ್ರೀನ್ ಶಾಟ್ ಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಸಾಗುವ ಮೂಲಕ, ದೀಪಿಕಾ ನಡೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಜೆ.ಎನ್.ಯು ಗೆ ದೀಪಿಕಾ ಅವರ ಭೇಟಿಯು ಈಗ ಅವರ ಸಿನಿಮಾಕ್ಕೆ ದೊಡ್ಡ ಹೊಡೆತ ನೀಡಿದೆ.

ಇದು ಮಾತ್ರವಲ್ಲದೇ ದೀಪಿಕಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದ ಅವರು ಹಿಂಬಾಲಕರು ಈಗ ಅನ್ ಫಾಲೋ ಮಾಡಲು ಆರಂಭಿಸಿದ್ದಾರೆ. ಚಪಾಕ್ ಇದೇ ಡಿಸೆಂಬರ್ 10 ರಂದು ತೆರೆಗೆ ಬರುತ್ತಿದ್ದು, ಈ ಸಿನಿಮಾದಲ್ಲಿ ಆ್ಯಸಿಡ್ ಸಂತ್ರಸ್ತೆಯೊಬ್ಬರ ಜೀವನವನ್ನು ಚಿತ್ರಿಸಲಾಗಿದ್ದು, ದೀಪಿಕಾ ಅವರ ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವುದು ಮಾತ್ರ ನಿಜ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here