ನವದೆಹಲಿಯಲ್ಲಿ ನಿನ್ನೆ ರಕ್ಷಾ ಬಂಧನದ ದಿನದಂದು ಅಂದರೆ ಗುರುವಾರ ಆಮ್‌ಆದ್ಮಿ ಸರ್ಕಾರವು ದೆಹಲಿಯ ಮಹಿಳೆಯರಿಗಾಗಿ ಒಂದು ಭರ್ಜರಿ ಉಡುಗೊರೆಯನ್ನು ಪ್ರಕಟಿಸಿದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಎರಡೂ ನಿನ್ನೆಯ ದಿನ ಇದ್ದುದ್ದು ವಿಶೇಷವಾಗಿದ್ದು, ಈ ಸಂಭ್ರಮದ ದಿನದಂದು ಆಮ್ ಆದ್ಮಿ ಪಕ್ಷ ದೆಹಲಿ ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆಯನ್ನು ನೀಡಿದೆ. ಅದೇನೆಂದರೆ ಅಕ್ಟೋಬರ್. 29ರಿಂದ ಜಾರಿಗೆ ಬರುವಂತೆ ದೆಹಲಿಯಾದ್ಯಂತ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಣೆಯೊಂದನ್ನು ಮಾಡಿದ್ದಾರೆ.

ನಿನ್ನೆ ದೆಹಲಿಯ ಛತ್ರಾಸಾಲ್‌ ಸ್ಟೇಡಿಯಂನಲ್ಲಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ಕೇಜ್ರಿವಾಲ್‌ ಅವರು ಮಹಿಳೆಯರಿಗೆ ಈ ಭರ್ಜರಿ ಕೊಡುಗೆಯ ವಿಷಯವನ್ನು ಪ್ರಕಟಿಸಿದ್ದಾರೆ. ಈ ಹಿಂದೆ ಕೂಡಾ ಅವರು ದೆಹಲಿಯಲ್ಲಿ ಬಸ್‌ ಮತ್ತು ಮೆಟ್ರೋ ಎರಡರಲ್ಲೂ ಸಹಾ ಮಹಿಳೆಯರಿಗೆ ಉಚಿತ ಪ್ರಯಾಣದ ಆಫರ್‌ ಅನ್ನು ಪ್ರಕಟಣೆ ಮಾಡಿದ್ದರು. ಮೆಟ್ರೋದಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ವಿಷಯ ಇನ್ನೂ ನಿರ್ಧರಿತವಾಗಿಲ್ಲ.. ಏಕೆಂದರೆ ಅದಕ್ಕೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ.

ಮಹಿಳೆಯರ ಸುರಕ್ಷತೆಯೇ ಆಮ್ ಆದ್ಮಿ ಪಕ್ಷದ ಪ್ರಥಮ ಆದ್ಯತೆ ಎಂದು ತಿಳಿಸಿರುವ ಅವರು ದೆಹಲಿಯ ಬಹುತೇಕ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಶೀಘ್ರದಲ್ಲೇ ಅಳವಡಿಸಲಾಗುವುದು ಎಂದು ಕೂಡಾ ಈ ಸಂದರ್ಭದಲ್ಲಿ ಹೇಳಿದ್ದಾರೆ. ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಲು ನಮಗೆ ಕೇಂದ್ರದ ಅನುಮತಿಯ ಅಗತ್ಯವಿಲ್ಲ ಎನ್ನುವ ಮೂಲಕ ಮೆಟ್ರೋ ದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಬೇಡಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದಿರುವುದಕ್ಕೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here