ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಾ ಸಾಗಿದೆ. ಇದರ ನಡುವೆಯೇ ಹೈದರಾಬಾದ್‍ನಲ್ಲಿ ಬೀದರ್ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಅವರ ಅಂತ್ಯ ಕ್ರಿಯೆಯನ್ನು ಕೂಡಾ ರಾತ್ರೋ ರಾತ್ರಿ ನಡೆಸಲಾಗಿದೆ. ಬೀದರ್ ಮೂಲದ 62 ವಯಸ್ಸಿನ ವ್ಯಕ್ತಿಯೊಬ್ಬರು ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಈಗ ಮೃತರಾಗಿರುವ ವೃದ್ಧರು ದೆಹಲಿಯ ಜಮಾತ್ ನಿಂದ ಬೀದರ್ ಗೆ ವಾಪಸಾಗಿದ್ದರು ಎನ್ನಲಾಗಿದೆ. ದೆಹಲಿಯಿಂದ ಬಂದ ಮೇಲೆ ಅವರ ಆರೋಗ್ಯದಲ್ಲಿ ವ್ಯತ್ಯಯಗಳು ಉಂಟಾಗಿವೆ.

 

ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೆನ್ನಲಾಗಿದೆ. ಅಲ್ಲದೆ ಆಸ್ಪತ್ರೆಯ ಮೊದಲ ಎರಡು ವರದಿಗಳು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಆದರೆ ಮನೆಯಲ್ಲಿ ಮತ್ತೆ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಅವರನ್ನು ಹೈದರಾಬಾದಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆದರೆ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮರಣ ಹೊಂದಿದ್ದಾರೆ.

ಮೃತ ದೇಹವನ್ನು ಮತ್ತೆ ಬೀದರ್ ಗೆ ವಾಪಸ್ಸು ತಂದು ಕೊರೊನಾ ನಿಬಂಧನೆಗಳನ್ನು ಅನುಸರಿಸಿ ಬಹಳ ಬೇಗನೆ ಅಂತ್ಯಕ್ರಿಯೆಯನ್ನು ಕೂಡಾ ನೆರವೇರಿಸಲಾಗಿದೆ. ಅಂತ್ಯಕ್ರಿಯೆ ವೇಳೆ ಕೆಲವರು ಮಾತ್ರ ಹಾಜರಿದ್ದರು ಎನ್ನಲಾಗಿದೆ. ಇನ್ನು ಮೃತ ವ್ಯಕ್ತಿಯ ಪರೀಕ್ಷೆಯ ಮೂರನೇ ವರದಿ ಬರಬೇಕಾಗಿದ್ದು, ಜಿಲ್ಲಾಡಳಿತ ವರದಿಗಾಗಿ ಕಾಯುತ್ತಿದೆ ಎನ್ನಲಾಗಿದೆ. ಏಕೆಂದರೆ ಅದು ಬರುವವರೆಗೆ ಕೊರೊನಾ ಸೋಂಕು ಇತ್ತೋ ಇಲ್ಲವೋ ಎಂದು ದೃಢೀಕರಣ ಮಾಡುವುದು ಸಾಧ್ಯವಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here