ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಪ್ರಸ್ತುತ ಬಿಜೆಪಿ ಸಂಸದರಾಗಿರುವ ಗೌತಮ್ ಗಂಭೀರ್ ಅವರ ವಿರುದ್ಧ ಅಸಮಾಧಾನವನ್ನು ವಿಭಿನ್ನವಾಗಿ ಹೊರಹಾಕಲಾಗಿದೆ. ಗೌತಮ್ ಗಂಭೀರ್ ಅವರು ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಗಳನ್ನು ನವದೆಹಲಿಯ ಐಟಿಒ ಇಲಾಖೆಯ ಗೋಡೆ ಹಾಗೂ ಮರಗಳ ಮೇಲೆ ಅಂಟಿಸಲಾಗಿದ್ದು, ಎಲ್ಲರ ಗಮನವನ್ನು ಇವು ಸೆಳೆದಿದೆ.‌ ಅಂಟಿಸಲಾಗಿರುವ ಪೋಸ್ಟರ್ ಗಳಲ್ಲಿ “ನೀವು ಇವರನ್ನು ನೋಡಿರುವಿರಾ? ಕಡೆಯ ಬಾರಿ‌ ಇವರನ್ನು ಇಂದೋರ್ ನಲ್ಲಿ ಜಿಲೇಬಿ ತಿನ್ನುವಾಗ ನೋಡಲಾಗಿತ್ತು. ಸಂಪೂರ್ಣ ದೆಹಲಿ ಇವರನ್ನು ಹುಡುಕುತ್ತಿದೆ.” ಎಂದು ಬರೆಯಲಾಗಿದೆ.

ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿರುವುದು ಎಲ್ಲರಿಗೂ ತಿಳಿದೇ ಇದೆ. ಈ ವಿಚಾರವಾಗಿ ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಬಗ್ಗೆ ಸಭೆಯೊಂದು ನಡೆದಿತ್ತು. ಈ ಸಭೆಯಲ್ಲಿ ಗೌತಮ್ ಗಂಭೀರ್ ಅವರು ಕೂಡಾ ಭಾಗವಹಿಸಬೇಕಾಗಿತ್ತು. ಆದರೆ ಗೌತಮ್ ಗಂಭೀರ್ ಅವರು ಅಂದು ಇಂದೋರ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನೀಡುತ್ತಿದ್ದರು. ಈ ಮಧ್ಯೆ ಅವರು ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಅವರ ಜೊತೆ ಜಿಲೇಬಿ ತಿನ್ನುತ್ತಿರುವ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಎಲ್ಲಾ ಬೆಳವಣಿಗೆಗಳ ನಂತರ ಆಮ್ ಆದ್ಮಿ ಪಕ್ಷ ಮಾಲಿನ್ಯಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಗೆ ಗೌತಮ್ ಗಂಭೀರ್ ಅವರು ಗೈರಾಗಿದ್ದಕ್ಕೆ ಅವರ ವಿರುದ್ಧ ಕಿಡಿಕಾರಿತ್ತು. ಮಾಲಿನ್ಯದ ವಿಚಾರವಾಗಿ ರಾಜಕೀಯವಾಗಿ ಗೌತಮ್ ಗಂಭೀರ್ ಸದಾ ಮುಂದೆ ಇರುತ್ತಾರೆ. ಆದರೆ ಅದೇ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಅದನ್ನು ಸಮರ್ಪಕವಾಗಿ ನಿಭಾಯಿಸುವ ಕ್ರಮಗಳ ಸಭೆಯಲ್ಲಿ, ಚರ್ಚೆಯಲ್ಲಿ ಅವರು ಭಾಗವಹಿಸುವುದಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ಗೌತಮ್ ಗಂಭೀರ್ ಅವರ ಮೇಲೆ ತನ್ನ ಅಸಮಾಧಾನವನ್ನು ಹೊರ ಹಾಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here