ನಮ್ಮ ದೇಶಕ್ಕೆ ಕೊರೊನಾ ವೈರಸ್​ನಿಂದ ಆಗಬಹುದಾದ ತೊಂದರೆಯ ಪ್ರಮಾಣವನ್ನು ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಧಾರ್ಮಿಕ ಸಭೆ ತಲೆಕೆಳಗಾಗಿಸಿದೆ. ಈ ಸಭೆಯಲ್ಲಿ ಪಾಲ್ಗೊಂಡಿದ್ದವರನ್ನ ಹುಡುಕುವ ಪ್ರಯತ್ನ ಆಯಾ ರಾಜ್ಯಗಳಲ್ಲಿ ಇನ್ನೂ ನಡೆಯುತ್ತಿದೆ. ಪತ್ತೆಗಾಗಿ ಮಸೀದಿ ಬಳಿಗೆ ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ಹಾಗೂ ಗುಂಡು ಹಾರಿಸುವ ಪ್ರಕರಣಗಳು ಗುಜರಾತ್ ಹಾಗೂ ಬಿಹಾರ ಮತ್ತು ಮದ್ಯ ಪ್ರದೇಶದಲ್ಲಿ ನಡೆದಿವೆ. ಇದರ ನಡುವೆ ಈಗಾಗಲೇ ಪತ್ತೆ ಹಚ್ಚಲಾಗಿರುವವರೂ ವೈದ್ಯರಿಗೆ ಸರಿಯಾದ ಸಹಕಾರ ನೀಡುತ್ತಿಲ್ಲವಂತೆ.

ಹೌದು, ತಬ್ಲಿಗಿ ಜಮಾತ್​ನಲ್ಲಿ ಭಾಗಿಯಾಗಿದ್ದ 167 ಜನರನ್ನು ಪತ್ತೆ ಹಚ್ಚಿ ಆಗ್ನೇಯ ದೆಹಲಿಯ ತುಘಲಕ್​ಬಾದ್​ನಲ್ಲಿ ಮಾರ್ಪಾಡು ಮಾಡಲಾದ ರೈಲಿನಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಈ ವೇಳೆ ಚಿಕಿತ್ಸೆ ನೀಡಲು ಬರುವ ವೈದ್ಯರೊಂದಿಗೆ ಹಾಗೂ ಆರೋಗ್ಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡ್ತಿದ್ದಾರೆ. ಅಲ್ಲದೇ ಅವರ ಮೇಲೆ ಉಗುಳುತ್ತಿದ್ದಾರೆ ಅಂತ ಆಗ್ನೇಯ ರೈಲ್ವೇ ವಕ್ತಾರರಾದ ದೀಪಕ್ ಕುಮಾರ್ ಹೇಳಿದ್ದಾರೆ.

ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಅಲ್ಲಿನ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಅವರಿಗೆ ನೀಡಲಾಗ್ತಿರುವ ಆಹಾರ ಚೆನ್ನಾಗಿಲ್ಲ ಅಂತ ಹೇಳ್ತಿದ್ದಾರೆ, ಅಲ್ಲದೇ ಚಿಕಿತ್ಸೆ ನೀಡಲು ಬರುವ ವೈದ್ಯರ ಮೇಲೆ ಉಗುಳುತ್ತಿದ್ದಾರೆ. ಕ್ವಾರಂಟೈನ್​ನಲ್ಲಿರುವಾಗ ನೀಡಲಾಗ್ತಿರುವ ಸೌಲಭ್ಯಗಳನ್ನು ನಿರಾಕರಿಸ್ತಿದ್ದಾರೆ. ಇವರನ್ನ ಕಂಟ್ರೋಲ್ ಮಾಡಲು ಆಗ್ನೇಯ ದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್​​ಗೆ ಮಾಹಿತಿ ನೀಡಿ ಅವಶ್ಯಕ ಭದ್ರತೆ ನೀಡುವಂತೆ ಕೋರಿದ್ದೇವೆ. ಅಥವಾ ಅವರನ್ನು ಇಲ್ಲಿಂದ ಬೇರೆಡೆಗೆ ಶಿಫ್ಟ್ ಮಾಡುವಂತೆ ಕೋರಿದ್ದೆವು. ಸಂಜೆ 5: 30 ರ ನಂತರ ಹೆಚ್ಚುವರಿಯಾಗಿ 4 ದೆಹಲಿ ಪೊಲೀಸ್ ಕಾನ್‌ಸ್ಟೇಬಲ್‌ಗಳು 6 ಸಿಆರ್‌ಪಿಎಫ್ ಯೋಧರು ಹಾಗೂ ಒಂದು ಪಿಸಿಆರ್ ವ್ಯಾನನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ’

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here