ನಿರ್ಭಯಾ ಅತ್ಯಾಚಾರಿ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರೂ ನೇಣು ಕುಣಿಕೆಯಿಂದ ತಪ್ಪಿಸಿಕೊಂಡು ಬರುತ್ತಿದ್ದ ಅಪರಾಧಿಗಳಿಗೆ ಇದೀಗ ಸಾವಿನ ಭಯ ಶುರುವಾಗಿದ್ದು ಜೈಲಿನಲ್ಲಿ ರಂಪಾಟ ಶುರು ಮಾಡಿದ್ದಾರೆ. ತಿಹಾರ್​ ಜೈಲಿನಲ್ಲಿರುವ ನಿರ್ಭಯಾ ಅಪರಾಧಿಗಳ ಕೊನೆ ಆಸೆ ಈಡೇರಿಸಲು ಜೈಲಿನ ಆಡಳಿತ ಮಂಡಳಿ ಮುಂದಾಗಿದೆ. ಈ ಹಿನ್ನೆಲೆ ನಿನ್ನೆ ನಾಲ್ಕೂ ಅಪರಾಧಿಗಳ ಬಳಿ ಅವರ ಕೊನೆ ಆಸೆ ಏನು ಅನ್ನೋದನ್ನ ತಿಹಾರ್​ ಜೈಲಿನ ಅಧಿಕಾರಿಗಳು ಕೇಳಿದ್ದಾರೆ. ಆದ್ರೆ ಜೈಲು ಮೂಲಗಳ ಪ್ರಕಾರ ಯಾವುದೇ ಅಪರಾಧಿಯೂ ತನ್ನ ಕೊನೆ ಆಸೆ ಹೇಳದೆ ಮೌನವಾಗಿ ಕೂತಿದ್ದರಂತೆ. ಅಲ್ಲದೇ ಕುಟುಂಬದವರ ಭೇಟಿ ಮಾಡಬೇಕಾ ಅಂತ ಕೇಳಿದಕ್ಕೂ ಯಾವುದೇ ಪ್ರತಿಕ್ರಿಯೆ ನೀಡದೆ ಎಲ್ಲಾ ಅಪರಾಧಿಗಳು ಸೈಲೆಂಟ್​ ಆಗಿ ಕುಳಿತ್ತಿದ್ದರಂತೆ.

ನಿರ್ಭಯಾ ಅತ್ಯಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಮುಖೇಶ್​ ಸಿಂಗ್​, ವಿನಯ್​ ಶರ್ಮಾ, ಅಕ್ಷಯ್​ ಸಿಂಗ್​ ಹಾಗೂ ಪವನ್​ ಗುಪ್ತಾ ಸದ್ಯ ತಿಹಾರ್​ ಜೈಲಿನಲ್ಲಿದ್ದಾರೆ. ಫೆಬ್ರವರಿ 1 ರಂದು ಈ ನಾಲ್ವರಿಗೂ ಗಲ್ಲು ಶಿಕ್ಷೆಯಾಗಲಿದೆ. ಆದ್ರೆ, ಈ ಮಧ್ಯೆ ಮರಣ ದಂಡನೆ ಸಂಬಂಧ ಸುಪ್ರೀಂಕೋರ್ಟ್​ನಲ್ಲಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದ್ದು, ಮರಣದಂಡನೆಯನ್ನ ಶೀಘ್ರವೇ ಕಾರ್ಯಗತ ಮಾಡುವಂತೆ ಕೇಳಿಕೊಂಡಿತ್ತು. ಅಪರಾಧಿಗಳು ಸುಖಾಸುಮ್ಮನೆ ಕಾನೂನು ಹೋರಾಟದ ಮೂಲಕ ದಿನ ತಳ್ಳುತ್ತಿದ್ದಾರೆ ಎಂದು ಆರೋಪಿಸಿತ್ತು. ಈ ವೇಳೆ ನ್ಯಾಯಮೂರ್ತಿಗಳೇ ಬುಧವಾರ ಮುಂಜಾನೆ 7 ಗಂಟೆಯಿಂದ ಎಲ್ಲಾ ಪ್ರಕ್ರಿಕೆಯಗಳು ಆರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಜೈಲಿನಧಿಕಾರಿಗಳು ನಿಯಮದ ಪ್ರಕಾರ ಕೊನೆ ಆಸೆ ಕೇಳಲು ಮುಂದಾಗಿದ್ದರು. ಆದ್ರೆ ಯಾವುದೇ ಉತ್ತರ ಅಪರಾಧಿಗಳಿಂದ ಸಿಕ್ಕಿರಲಿಲ್ಲ.

ಇನ್ನು, ಜೈಲಿನ ಮೂಲಗಳ ಪ್ರಕಾರ ಈ ನಾಲ್ವರು ಮೌನವಾಗಿರೋದನ್ನ ಗಮನಿಸಿದ್ರೆ ಇನ್ನಷ್ಟು ದಿನ ಗಲ್ಲು ಶಿಕ್ಷೆಯಿಂದ ಹೇಗೆ ಪಾರಾಗುವುದು ಎಂಬ ಬಗ್ಗೆ ಪ್ಲಾನ್​ ರೂಪಿಸುತ್ತಿದ್ದಾರೆ ಎನ್ನಲಾಗಿದೆ. 2012ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಯಾರಾ ಮೆಡಿಕಲ್​ ವಿದ್ಯಾರ್ಥಿಯನ್ನ ಚಲಿಸುತ್ತಿದ್ದ ಬಸ್​ನಲ್ಲಿ ಅತ್ಯಚಾರವೆಸಗಲಾಗಿತ್ತು. ಬಳಿಕ ಆಕೆಯನ್ನ ಬಸ್​​ನಿಂದ ಎಸೆದು ಕ್ರೌರ್ಯ ಮೆರೆದಿದ್ದರು. ನಂತರ ಕೀಚಕರ ಅಟ್ಟಹಾಸದ ಭೀಕರತೆ ಕೇಳಿದ ಭಾರತ ವಿದ್ಯಾರ್ಥಿಯನ್ನ ನಿರ್ಭಯಾ ಎಂದು ಕರೆದಿತ್ತು. ಈ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here