ಕಳೆದ ಒಂದು ವಾರದಿಂದ ಧಾರ್ಮಿಕ ನಗರ, ಕಾಶಿಯಲ್ಲಿ ವಾಯುಮಾಲಿನ್ಯದ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ವಾತಾವರಣ ತೀವ್ರವಾಗಿ ಹದಗೆಟ್ಟಿದೆ. ಈ ಕಾರಣದಿಂದಾಗಿ, ಸಿಗ್ರಾ ಪ್ರದೇಶ ಮತ್ತು ತಾರಕೇಶ್ವರ ದೇವಸ್ಥಾನದಲ್ಲಿನ ದೇವತೆಗಳ ಪ್ರತಿಮೆಗಳ ಮುಖಕ್ಕೂ ಕೂಡಾ ಮಾಸ್ಕ್ ಹಾಕಲಾಗಿದೆ. ಈ ದೇವಾಲಯಗಳ ಪುರೋಹಿತರು ದೇವರ ವಿಗ್ರಹಗಳಿಗೆ ಬೇಸಿಗೆಯಲ್ಲಿ ಶ್ರೀಗಂಧ ಮತ್ತು ಶೀತದಲ್ಲಿ ಕಂಬಳಿ ನೀಡಲಾಗುತ್ತದೆ. ಹಬ್ಬಗಳಿಗೆ ಹೊಸ ವಸ್ತ್ರ ಅಲಂಕರಿಸಲಾಗುತ್ತದೆ. ಅದರಂತೆ ಈಗ ಉಂಟಾಗಿರುವ ಮಾಲಿನ್ಯದಿಂದ ರಕ್ಷಿಸಲು ದೇವರುಗಳ ಮುಖಕ್ಕೆ ಮುಖವಾಡಗಳನ್ನು(ಮಾಸ್ಕ್ ಗಳನ್ನು) ಅಲಂಕರಿಸುವುದು ಕೂಡಾ ಅನಿವಾರ್ಯ ಆಗಿದೆ ಎನ್ನುತ್ತಾರೆ.

ವಾರಣಾಸಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಕಳೆದ ಕೆಲವು ದಿನಗಳಿಂದ 400 ಕ್ಕೆ ಹತ್ತಿರದಲ್ಲಿದೆ. ಸೋಮವಾರ, ವಾಯು ಗುಣಮಟ್ಟದ ಸೂಚ್ಯಂಕವು 354 ಮತ್ತು 364 ರ ನಡುವೆ ಇತ್ತು. ಇದು ಸ್ವಲ್ಪ ಮಟ್ಟಿಗೆ ಸುಧಾರಣೆಗೊಂಡು ಮಂಗಳವಾರ 292 ಕ್ಕೆ ಇಳಿದಿತ್ತು. ಬುಧವಾರ ಕೂಡಾ ಇದೇ ರೀತಿ ಮುಂದುವರೆದಿತ್ತು. ಜನರು ವಾಯುಮಾಲಿನ್ಯದಿಂದ ಬಹಳವಾಗಿ ನರಳುವ ಪರಿಸ್ಥಿತಿ ಅಲ್ಲಿ ಉದ್ಭವಿಸಿದೆ. ದೇವಿ ಕಾಳಿಯ ಮುಖವನ್ನು ಮುಚ್ಚುವುದು ಹೆಚ್ಚು ಬೇಸರದ ಸಂಗತಿಯಾಗಿದೆ. “ಆಕೆ ಕ್ರೋಧದ ದೇವತೆ ಮತ್ತು ಅವಳ ಬಾಯಿಂದ ಹೊರ ಬಂದಿರುವ ನಾಲಿಗೆಯನ್ನು ಮುಚ್ಚಬಾರದು ಎಂದು ನಂಬಲಾಗಿದೆ” ಎಂದು ಅರ್ಚಕರು ಹೇಳಿದ್ದಾರೆ.

ಇನ್ನು ದೇವತೆಗಳ ವಿಗ್ರಹಕ್ಕೆ ಮಾಸ್ಕ್ ಹಾಕಿರುವುದನ್ನು ನೋಡಿ ಅನೇಕ ಭಕ್ತರು ಕೂಡಾ ಮಾಸ್ಕ್ ಧರಿಸಲು ಸ್ಪೂರ್ತಿ ಪಡೆದಿದ್ದಾರೆ. ವಾಯುಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಜಿಲ್ಲಾಡಳಿತವು ನಗರದ ಹಲವಾರು ಪ್ರದೇಶಗಳಲ್ಲಿ ಬುಧವಾರ ನೀರನ್ನು ಸಿಂಪಡಿಸಿದೆ. ನರಿಯಾ, ಡೆರೆಕಾ ಮತ್ತು ಕಚಾರಿ ಪ್ರದೇಶಗಳಲ್ಲಿ ನೀರನ್ನು ಸಿಂಪಡಿಸಲಾಗಿತ್ತು. ಒಟ್ಟಾರೆ ಉತ್ತರ ಭಾರದಲ್ಲಿ ವಾಯು ಮಾಲಿನ್ಯ ಭೀಕರವಾಗುತ್ತಾ ಸಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here