ಮಂಡ್ಯದ ಕೆ.ಆರ್.ಪೇಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮಾವೇಶ ನಡೆದಿದ್ದು ಅಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಮಂಡ್ಯಕ್ಕೆ ಬಂದರೂ ಅದು ಫಲಕಾರಿ ಆಗುವುದಿಲ್ಲ. ನಿಖಿಲ್‌ನನ್ನು ಹೇಗೆ ಆಗಲಿ ಸೋಲಿಸಿ, ಕುಮಾರಸ್ವಾಮಿಗೆ ಮುಖಭಂಗ ಮಾಡಬೇಕೆಂದು ಈಗಾಗಲೇ ಕೆಲವರು ಪಣತೊಟ್ಟಿದ್ದಾರೆ ಅವರು ಯಾರ ಹೆಸರನ್ನು ಹೊರಗಿಡದೆ ಕಾಂಗ್ರೆಸ್ ನ ಅತೃಪ್ತ ಶಾಸಕರ ಬಗ್ಗೆ ತಮ್ಮ ಅಸಮಾಧಾನವನ್ನು ಅವರು ಹೊರಹಾಕಿದ್ದಾರೆ.

ಇದೇ ಸಮಯದಲ್ಲಿ ಮಾತನಾಡುತ್ತಾ ಅವರು ಯುವಕರಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ. ಅದೇನೆಂದರೆ ಸಿನಿಮಾ ನಟರಿಗೆ ಜನರನ್ನು ಆಕರ್ಣಿಸುವ ಶಕ್ತಿ ಇರುವುದು ನಿಜ. ಆದ್ದರಿಂದಲೇ ನಾನು ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಮಾತಿನ ನಡುವೆ ಅವರ ಡಾ.ರಾಜ್ ಅವರ ವಿಷಯವನ್ನು ಕೂಡಾ ಪ್ರಸ್ತಾಪಿಸಿದ್ದಾರೆ. ಅವರು ತಮಿಳುನಾಡಿನ ವಿರೋಧದ ನಡುವೆಯೂ ಡಾ.ರಾಜ್ ಕುಮಾರ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕಲ್ಪಿಸಿಕೊಟ್ಟೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ಭಾವಮಾತ್ಮಕ ವಿಷಯಗಳನ್ನು ಜನರ ಮುಂದೆ ಇಟ್ಟಿದ್ದಾರೆ.

ತಾನು ಅಧಿಕಾರದಲ್ಲಿರುವಾಗ ರಿಸರ್ವೇಷನ್ ಮಾಡಿ ಪ್ರತಿಯೊಂದು ಸಮಾಜದವರು ಅಧಿಕಾರವನ್ನು ಪಡೆಯುವಂತೆ ಮಾಡಿದೆ ಎಂದಿದ್ದಾರೆ. ಅನುಭವಿಸುವಂತೆ ಮಾಡಿದೆ. ನನ್ನ ಜೀವನದಲ್ಲಿ ನಾನು ಬಹಳ ನೋವು ಅನುಭವಿಸಿದ್ದೇನೆ ಎಂದು ಕೂಡಾ ಅವರು ಭಾವುಕರಾಗಿದ್ದಾರೆ. ಮಾತು ಮುಂದುವರೆದಂತೆ ಒಮ್ಮೆ ಇಂದಿರಾಗಾಂಧಿ ವಿರುದ್ದ ಡಾ.ರಾಜ್ ಅವರನ್ನು ಕೂಡಾ ಕಣಕ್ಕಿಳಿಸಲು ನಾನು ಪ್ರಯತ್ನ ಪಟ್ಟಿದ್ದೆ. ಅಲ್ಲದೆ ನಾನೇ ಸ್ವತಃ ರಾಜ್ ಮನೆಗೆ ಹೋಗಿ ರಾಜಕೀಯಕ್ಕೆ ಬರುವಂತೆ ಮನವಿ ಮಾಡಿದ್ದೂ ಇಂಟು. ನಿಮ್ಮ ಜನಪ್ರಿಯತೆಯಿಂದ ಇಂದಿರಾ ಸೋಲಿಸಬಹುದೆಂದು ಮನವಿ ಮಾಡಿದ್ದರಂತೆ. ಆದರೆ ಅಂದು ಮೇರು ಪರ್ವತದಂತೆ ಇದ್ದ ಡಾ.ರಾಜ್ ರಾಜಕೀಯಕ್ಕೆ ಬರಲಿಲ್ಲ. ಆದರೆ ಪ್ರಸ್ತುತ ಸಿನಿಮಾ ರಂಗದಲ್ಲಿ ಏನಾಗಿದೆ ಎಂದು ಪ್ರಶ್ನೆ ಹಾಕುವ ಮೂಲಕ ಪರೋಕ್ಷವಾಗಿ ದರ್ಶನ್, ಯಶ್ ವಿರುದ್ಧ ದೇವೆಗೌಡರು ವಾಗ್ದಾಳಿ ಮಾಡಿರುವುದನ್ನು ಗಮನಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here