ಬಜೆಟ್ ಮಂಡನೆಯಾದ ನಂತರ ಹಲವರು ಹಲವು ರೀತಿಯಲ್ಲಿ ಕೊಟ್ಟ ಹೇಳಿಕೆಗಳನ್ನು‌ ನಾವು ಈಗಾಗಲೇ ಕೇಳಿ, ನೋಡಿ ಅದರ ಬಗ್ಗೆ ಅಭಿಪ್ರಾಯಪಟ್ಟಿದ್ದಾಗಿದೆ. ಈಗ ಅದೇ ಸಾಲಿನಲ್ಲಿ ಮತ್ತೊಂದು ಹೇಳಿಕೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಗೆ ಕಾರಣವಾಗಿದೆ. ಆ ರೀತಿ ಹೇಳಿಕೆ ಕೊಟ್ಟಿರುವವರು ಬೇರಾರೂ ಅಲ್ಲ, ಜೆಡಿಎಸ್ ವರಿಷ್ಠ ರಾದ ಮಾಜಿ ಪ್ರಧಾನಿ ದೇವೇಗೌಡ ಅವರು.ಬಜೆಟ್ ಬಗ್ಗೆ ಅನಗತ್ಯ ಟೀಕೆಗೆ ಉತ್ತರಿಸಿದ ದೇವೇಗೌಡರು, ಬಜೆಟ್ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ, ಅದರ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ನಡೆಯುತ್ತದೆ,

ಅದರ ಬಗ್ಗೆ ಮುಖ್ಯಮಂತ್ರಿ ಸ್ಥಾನದಲ್ಲಿರುವ ಕುಮಾರಸ್ವಾಮಿಯವರು ಉತ್ತರಿಸಿರುವರು ಎಂದು ದೇವೇಗೌಡರು ತುಸು ಜೋರಾಗಿಯೇ ಟೀಕಿಸಿದವರಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.ಒಕ್ಕಲಿಗರಿಗೆ ಈ ಬಾರಿಯ ಬಜೆಟ್ ನಲ್ಲಿ ಶೇ.30 ಕ್ಕಿಂತ ಹೆಚ್ಚಿನ ಪ್ರಮಾಣದ ಲಾಭ ಸಿಕ್ಕಿದೆ ಎಂಬ ಟೀಕೆಗೆ ಉತ್ತರಿಸುತ್ತಾ, ದೇವೇಗೌಡರು ಹಳೇ ಮೈಸೂರು ಭಾಗದಲ್ಲಿ ಕೇವಲ ನಾಲ್ಕೈದು ಜಿಲ್ಲೆಗಳು ಮಾತ್ರ. ಮಂಗಳೂರು, ಬೀದರ್ ಜಿಲ್ಲೆಗಳಲ್ಲಿ ಕೂಡಾ ವಕ್ಕಲಿಗರು ಇದ್ದಾರೆ, ಹಾಗಾದರೆ ಅದರ ಬಗ್ಗೆ ಏಕೆ ಟೀಕೆ ಮಾಡಲಿಲ್ಲ ಎಂದ ಅವರು,

ಯಾವ ಆಧಾರದ ಮೇಲೆ ಯಾರು ಈ ರೀತಿ ವಕ್ಕಲಿಗರಿಗೆ ಲಾಭವಾಗಿದೆ ಎಂದು ಹೇಳಿರುವುದು. ಇವೆಲ್ಲಾ ಸೆನ್ಸ್ ಲೆಸ್ ವರದಿಗಳೆಂದು ಹೇಳಿದ್ದಾರೆ.ಈ ಹಿಂದೆ ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಯಾಗಿ ಬಜೆಟ್ ಮಂಡಿಸಿದ್ದ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಜೆಟ್ ನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಉತ್ತರ ಕರ್ನಾಟಕದ ಬಗ್ಗೆ ನನಗೂ ಮಾಹಿತಿಯಿದೆ. ವಿರೋಧಿಗಳು ಉತ್ತರ ಕರ್ನಾಟಕಕ್ಕೆ ಮೋಸವಾಗಿದೆ ಎಂದು ಟೀಕಿಸುತ್ತಿರುವುದು ಸರಿಯಲ್ಲ. ಅದರ ಬಗ್ಗೆ ವಿಧಾನ ಸಭೆಯಲ್ಲಿ ಮುಖ್ಯ ಮಂತ್ರಿಯವರು ಸೂಕ್ತ‌ ಉತ್ತರ ನೀಡುವವರೆಗೂ ತಾಳ್ಮೆ ಯಿಂದರಿ ಎಂದು‌ ಟೀಕಾಕಾರರಿಗೆ ಹೇಳಿದ್ದಾರೆ.

Photos credit :- Facebook HD Devegowda Page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here