ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಳಿಯ ನವೀನ್ ಮಾಡಿದ್ದ ಒಂದು ಫೇಸ್ ಬುಕ್ ಪೋಸ್ಟ್ ನಿಂದ ಗಲಾಟೆಯಾಯ್ತು ಎನ್ನುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆ ನಡೆಯುವಾಗಲೇ ನವೀನ್ ಮಾತನಾಡಿ ನಾನು ಯಾವುದೇ ಪೋಸ್ಟ್ ಮಾಡಿಲ್ಲ, ಬದಲಿಗೆ ಅವರು ಮಾಡಿದ್ದ ಪೋಸ್ಟ್ ಗೆ ಕಾಮೆಂಟ್ ಅಷ್ಟೇ ಮಾಡಿದ್ದಾಗಿ ಹೇಳಿದ್ದಾರೆ. ವಿಚಾರಣೆ ವೇಳೆ ಈ ವಿಷಯವನ್ನು ಹೇಳಿರುವ ನವೀನ್ ನಾನಗಿಯೇ ಬೇಕು ಎಂದು ಯಾವುದೇ ಪೋಸ್ಟ್ ಮಾಡಿಲ್ಲ. ಅವರು ಮಾಡಿದ್ದ ಪೋಸ್ಟ್ ಗೆ ನಾನು ಕಾಮೆಂಟ್ ಮಾಡಿದ್ದೆ ಎಂದಿದ್ದಾರೆ. ಅವರು ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಒಂದನ್ನು ಹಾಕಿದ್ದರು, ಅದಕ್ಕೆ ಪ್ರತಿಕ್ರಿಯೆ ಅಷ್ಟೇ ನಾನು ನೀಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ ನವೀನ್.

ಗಲಭೆಯ ಮಾಸ್ಟರ್ ಮೈಂಡ್ ಫೈರೋಜ್ ಖಾನ್ ಒಂದು ಪೋಸ್ಟ್ ಮಾಡಿದ್ದ, ಅದಕ್ಕೆ ಕಾಮೆಂಟ್ ಹಾಕಲು ಗೂಗಲ್ ನಿಂದ ಒಂದು ಇಮೇಜ್ ಡೌನ್ಲೋಡ್ ಮಾಡಿ ಹಾಕಿದ್ದೆ, ಅನಂತರ ಅಖಂಡ ಶ್ರೀನಿವಾಸ ಮೂರ್ತಿ ಅವರು ಡಿಲೀಟ್ ಮಾಡು ಎಂದು ಹೇಳಿದ್ದಕ್ಕೆ ನಾನು ಅದನ್ನು ಡಿಲೀಟ್ ಮಾಡಿದ್ದೆ ಎಂದು ನವೀನ್ ಹೇಳಿದ್ದಾರೆ‌. ಅಲ್ಲದೇ ರಾಮ ಜನ್ಮಭೂಮಿ ಶಿಲಾನ್ಯಾಸದ ಹಿನ್ನಲೆಯಲ್ಲಿ ಅಂದು ತಮ್ಮ ಏರಿಯಾದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದ ನಂತರ ತನಗೆ ಬೆದರಿಕೆ ಕರೆಗಳು ಕೂಡಾ ಬರುತ್ತಿದ್ದವು ಎಂದಿದ್ದಾರೆ.

ಹೀಗೆ ಬೆದರಿಕೆ ಕರೆಗಳು ಬಂದರೂ ಕೂಡಾ ಅದಕ್ಕೆ ತಲೆ ಕೆಡಿಸಿಕೊಳ್ಳದೇ, ಭಯಪಡದೇ ನಾನು ನನ್ನ ಕೆಲಸಗಳನ್ನು ಮುಂದುವರೆಸಿದ್ದೆ ಎಂದು ನವೀನ್ ಪೋಲಿಸರಿಗೆ ವಿಚಾರಣೆ ವೇಳೆ ಹಲವು ವಿಚಾರಗಳನ್ನು ತಿಳಿಸಿದ್ದು, ಪೋಲಿಸರು ಅದನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here