ಈ ವರ್ಷದ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಸಿನಿಮಾ ಟಗರು ಚಿತ್ರದಲ್ಲಿ ಡಾ.ಶಿವರಾಜಕುಮಾರ್ ಎದುರು ಖಡಕ್ ಖಳನಾಯಕ ನಟನಾಗಿ ಅಬ್ಬರಿಸಿ ಕನ್ನಡ ಚಿತ್ರ ಪ್ರೇಮಿಗಳ ಮನದಲ್ಲಿ ಡಾಲಿ ಧನಂಜಯ್ ಆಗಿ ಸ್ಥಾನ ಪಡೆದ ಧನಂಜಯ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ ಜನ್ಮದಿನದ ಅಂಗವಾಗಿ ಡಾಲಿ ಧನಂಜಯ್ ಅವರ ಹೊಸ ಚಿತ್ರದ ಫೋಟೋ ಶೂಟ್ ಇಂದು ನಡೆದಿದೆ.ಡಾ.ಶಿವರಾಜಕುಮಾರ್ ಅವರ ಆಶೀರ್ವಾದದಿಂದ ಆರಂಭವಾಗಿರುವ ಈ ಹೊಸ ಚಿತ್ರದ ಹೆಸರು ಪಾಪ್ ಕಾರ್ನ್ ಮಂಕಿ ಟೈಗರ್‌ . ಟಗರು ಚಿತ್ರದ ಬ್ಲಾಕ್‌ಬಸ್ಟರ್ ಜೋಡಿಗಳಾದ ನಿರ್ದೇಶಕ ಸೂರಿ ,ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಮತ್ತು ಧನಂಜಯ್ ಮತ್ತೆ ಒಂದಾಗುತ್ತಿರುವ ಚಿತ್ರ ಇದಾಗಿರುವುದರಿಂದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.

ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ವಿಭಿನ್ನ ಮಾಸ್ ಟೈಟಲ್ ಒಳಗೊಂಡ ಈ ಸಿನಿಮಾದ ಚಿತ್ರೀಕರಣ ಬೆಂಗಳೂರು ಮತ್ತು ಅತಿ ಹೆಚ್ಚಿನ ಭಾಗ ಮುಂಬೈನಲ್ಲೆ ಚಿತ್ರೀಕರಣ ಆಗಲಿದೆ. ಸುಕ್ಕಾ  ಸೂರಿ ನಿರ್ದೇಶನದ ಈ ಚಿತ್ರಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂದು ವಿಭಿನ್ನ ಹೆಸರು ಇಟ್ಟಿರುವ ಚಿತ್ರತಂಡ ಪ್ರೇಕ್ಷಕರಿಗೆ ಶೀರ್ಷಿಕೆ ಮೂಲಕವೇ ಕುತೂಹಲ ಹುಟ್ಟು ಹಾಕಲಾಗಿದೆ ಈ ಟೀಂ.ಇದೊಂದು ಪಕ್ಕಾ ಅಂಡರ್ ವರ್ಲ್ಡ್ ಮಾಫಿಯಾ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿವೆ. ಮಾಸ್ ಸಿನಿಮಾಗಳನ್ನು ವಿಭಿನ್ನವಾದ ನಿರೂಪಣೆ ಮಾಡುವುದರಲ್ಲಿ ಎತ್ತಿದ ಕೈ ಆಗಿರುವ ಸೂರಿ ಅವರು ಈ ಬಾರಿ ಸಹ ಕನ್ನಡ ಸಿನಿಮಾ ರಸಿಕರಿಗೆ ವಿಭಿನ್ನ

ನಿರೂಪಣೆ ಮೂಲಕವೇ ಮನರಂಜನೆ ಒದಗಿಸಲಿದ್ದಾರೆ ಎಂಬ ಮಾತುಗಳು ಈಗಾಗಲೇ ಈ ಚಿತ್ರದ ಬಗ್ಗೆ ಕೇಳಿ ಬರುತ್ತಿವೆ. ಇಂದು ಡಾಲಿ ಡೇ ಆಚರಿಸಬೇಕಿದ್ದ ಧನಂಜಯ್ ಅವರು ಕೊಡಗಿನ ಪ್ರಕೃತಿ ವಿಕೋಪದಿಂದ ನೊಂದು ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಈ ವಿಷಯವಾಗಿ ಜನ್ಮದಿನಕ್ಕೆ ಖರ್ಚು ಮಾಡುವ ಹಣವನ್ನು ಕೊಡಗಿನ ಸಂತ್ರಸ್ತರಿಗೆ ನೆರವು ನೀಡುವಂತೆ ಧನಂಜಯ ಅವರು ಕೇಳಿಕೊಂಡಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ತಮ್ಮ ಸಂಸ್ಥೆಯ ಎರಡನೇ ಸಿನಿಮಾ ನಿರ್ಮಾಣ ಮಾಡುತ್ತಿರುವ ಕೆ ಪಿ ಶ್ರೀಕಾಂತ್ ಅವರಿಗೆ ಈ ಚಿತ್ರವೂ ದೊಡ್ಡ ಯಶಸ್ಸು ಕೊಡುವುದು ಗ್ಯಾರಂಟಿ ಎನ್ನುವ ಮಾತುಗಳು ಈಗ ಗಾಂಧಿನಗರದ ತುಂಬ ಜೋರಾಗಿಯೇ ಕೇಳಿಬರುತ್ತಿದೆ.

ಇನ್ನು  ಈ ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ನಿವೇದಿತಾ (ಸ್ಮಿತಾ) ಕಾಣಿಸಿಕೊಳ್ಳಲಿದ್ದಾರೆ. ಸ್ಮಿತಾ ಈ ಹಿಂದೆ ಅವ್ವ ,ಡಿಸೆಂಬರ್ 1 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಿವೇದಿತಾ ಅವರು ಈ ಹಿಂದೆ ಪುನೀತ್ ರಾಜ್‍ಕುಮಾರ್ ಅಭಿನಯದ ಯಾರೇ ಕೂಗಾಡಲಿ ಚಿತ್ರದಲ್ಲಿ ಸಹ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು.ಇನ್ನು ಟಗರು ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್ , ಸಂಭಾಷಣೆ ಬರೆದಿದ್ದ ಮಾಸ್ತಿ ಅವರೇ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here