ಕನ್ನಡ ಚಿತ್ರರಂಗಕ್ಕೆ ಪ್ರತಿದಿನ ಹೊಸ ಪ್ರತಿಭೆಗಳು ಕಾಲಿಡುತ್ತಲೇ ಇರುತ್ತವೆ ಆದರೆ ಕಾಲಿಡುವ ಎಲ್ಲಾ ಪ್ರತಿಭೆಗಳು ಜನಮಾನಸದಲ್ಲಿ ಮಾತ್ರ ನೆಲೆಯೂರಲು ಸಾಧ್ಯವಿಲ್ಲ. ಆದರೆ ತಾನು ಅಭಿನಯಿಸಿದ ಮೊದಲ ಸಿನಿಮಾದ ಮೂಲಕವೇ ಕನ್ನಡ ಚಿತ್ರರಂಗದ ಭವಿಷ್ಯದ ಸ್ಟಾರ್ ನಟನಾಗುವ ಭರವಸೆ ಮೂಡಿಸಿರುವ ಯುವ ನಾಯಕ ನಟ ಧನ್ವೀರ್ . ಬಜಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಧನ್ವೀರ್ ಮೊದಲ ಚಿತ್ರದಲ್ಲೇ ಯಶಸ್ಸು ಪಡೆಯುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇದೀಗ ಧನ್ವೀರ್ ಅಭಿನಯದ ಬಂಪರ್  ಚಿತ್ರದ  ಚಿತ್ರೀಕರಣ ಆರಂಭವಾಗಿದ್ದು  ಕನ್ನಡ ಚಿತ್ರರಂಗದಲ್ಲಿ ಅಲೆಮಾರಿ,

ಕಾಲೇಜ್ ಕುಮಾರ್, ಬಿಚ್ಚುಗತ್ತಿ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಸಂತೋಷ್ ಕುಮಾರ್ (ಅಲೆಮಾರಿ ಸಂತು ) ಬಂಪರ್  ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಸುಪ್ರೀತ್ ನಿರ್ಮಾಣದ ಬಂಪರ್ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು ಬಂಪರ್  ಸಿನಿಮಾದಲ್ಲಿ ಧನ್ವೀರ್  ಎದುರು ಖಳನಟನಾಗಿ    ಅಬ್ಬರಿಸಲು KGF ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಗರುಡ ರಾಮ್ ಎಂಟ್ರಿ ಆಗಿದ್ದಾರೆ. ಕೆಜಿಎಫ್ ಚಿತ್ರದ ಬಳಿಕ ಗರುಡ ರಾಮ್ ಅವರು ಯಾವ ಚಿತ್ರದಲ್ಲಿಯೂ ಸಹ ಅಭಿನಯಿಸಿರಲಿಲ್ಲ.

ಆದರೆ ಬಂಪರ್ ಚಿತ್ರದಲ್ಲಿ ಅದ್ಭುತ ಪಾತ್ರ ಇರುವ ಕಾರಣ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ಬಂಪರ್ ಚಿತ್ರವು ಚಿತ್ರೀಕರಣ ಆರಂಭಿಸಿದ್ದು ಕನ್ನಡ ಚಿತ್ರರಂಗದಲ್ಲಿ ಬಂಪರ್ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಬಂಪರ್ ಚಿತ್ರದ ಉಳಿದ ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಸಿಗಲಿದ್ದು ಬಂಪರ್ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ ಎಂಬ ಮಾಹಿತಿ ದೊರೆತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here