ದೇಶದಲ್ಲಿ ಲಾಕ್ ಡೌನ್ ನಿಂದ ಒಂದೆಡೆ ಬಡವರು, ನಿರ್ಗತಿಕರು ಹಾಗೂ ದಿನಗೂಲಿ ಕಾರ್ಮಿಕರು ನಿತ್ಯ ಜೀವನದ ಅಗತ್ಯ ವಸ್ತುಗಳು ದೊರೆಯುತ್ತಿಲ್ಲ ಎಂದು ಕಂಗಲಾಗಿದ್ದಾರೆ, ಇನ್ನೊಂದೆಡೆ ಕುಡಿತದ ಚಟಕ್ಕೆ ದಾಸರಾದವರಿಗೆ ತಮ್ಮ ಚಟವನ್ನು ನೀಗಿಸಿಕೊಳ್ಳಲು ಅಗತ್ಯವಿರುವ ಮದ್ಯಪಾನವು ದೊರೆಯುತ್ತಿಲ್ಲ ಎಂದು ಕಂಗಾಲಾಗಿದ್ದಾರೆ. ಕೆಲವು ಕಡೆ ಕುಡಿಯಲು ಮದ್ಯಪಾಮ ಸಿಗಲಿಲ್ಲ ಎಂಬ ಕಾರಣಕ್ಕೆ ಕೆಲವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಕೂಡಾ ಈಗಾಗಲೇ ಮಾದ್ಯಮಗಳ ಮೂಲಕ ಜನರ ಮುಂದೆ ಬಂದಿವೆ. ವಿಷಯ ಹೀಗಿರುವಾಗಲೇ ಮದ್ಯಪ್ರಿಯರು ಒಂದು ಕಡೆ ಮದ್ಯದ ಅಂಗಡಿಗೆ ಕನ್ನ ಹಾಕಿರುವ ವಿಲಕ್ಷಣ ಘಟನೆ ನಡೆದಿದೆ.

ಕೊರೊನಾ ವೈರಸ್​ ಹರಡದಿರಲಿ ಎನ್ನುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ರೋಗ ನಿಯಂತ್ರಣ ಉದ್ದೇಶದಿಂದ ಏಪ್ರಿಲ್ 14 ರವರೆಗೆ ದೇಶದಾದ್ಯಂತ ಲಾಕ್‌ಡೌನ್​ಗೆ ಜಾರಿಯಲ್ಲಿದೆ. ಇದರಿಂದ ಕಳೆದ ಕೆಲವು ದಿನಗಳಿಂದಲೂ ತಮ್ಮ ಚಟವನ್ನು ತೃಪ್ತಿ ಪಡಿಸಿಕೊಳ್ಳಲು ಎಣ್ಣೆ ಸಿಗದೆ ಮದ್ಯ ಪ್ರಿಯರು ಹುಚ್ಚರಂತಾಗಿದ್ದಾರೆ, ಅವರಲ್ಲಿನ ಚಡಪಡಿಕೆ ಹೆಚ್ಚಾಗಿದೆ. ಅದಕ್ಕಾಗಿಯೇ ತಮ್ಮ ಸಮಸ್ಯೆಗೆ ಒಂದು ಪರಿಹಾರಕ್ಕಾಗಿ ಕುಡುಕರು ಮದ್ಯ ಮಾರಾಟ ಮಾಡುವ ಅಂಗಡಿಗೇ ಖನ್ನ ಹಾಕಿರುವ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಸರಸತ್ವಪೂರ ಬಡಾವಣೆಯ ಹತ್ತಿರ ನರ್ತಕಿ ವೈನ್​ ಶಾಪ್​ ಇದ್ದು, ನಿನ್ನೆ ರಾತ್ರಿ ಈ ವೈನ್ ಶಾಪ್ ನ ಬಾಗಿಲನ್ನು ಹಾರೆಯಿಂದ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಒಳಗೆ ಇರಿಸಲಾಗಿದ್ದ ದೊಡ್ಡ ದೊಡ್ಡ ಬಾಟಲಿಗಳನ್ನ ಅಲ್ಲಿಂದ ಹೊತ್ತೊಯ್ದಿದ್ದಾರೆ. ವೈನ್ ಅಂಗಡಿಯಲ್ಲಿ ಒಟ್ಟು 80 ಸಾವಿರ ರೂಪಾಯಿ ಬೆಲೆಬಾಳುವ ಮದ್ಯದ ಬಾಟಲಿ ಗಳನ್ನು ಲೂಟಿ ಮಾಡಿದ್ದಾರೆ ಎನ್ನಲಾಗಿದ್ದು, ಈ ವಿಷಯವಾಗಿ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here