ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಆಗಮಿಸುವ ಪ್ರವಾಸಿಗರ ಗಮನಕ್ಕೆ :-

1. ಶಿರಾಡಿ ಘಾಟ್‌ ರಸ್ತೆ ಸಂಚಾರ ಮತ್ತೆ ಶುರು :
2. ಸಂಪಾಜೆ ಘಾಟ್‌ ಸಹ ಸಂಚಾರಕ್ಕೆ ಮುಕ್ತ :
3. ಚಾರ್ಮಾಡಿ ಘಾಟ್‌ ಮಾತ್ರ ಇನ್ನೂ ಬಂದ್ :
4. ತಾತ್ಕಾಲಿಕವಾಗಿ (ಸುಬ್ರಹ್ಮಣ್ಯ – ಬೆಂಗಳೂರು) ರೈಲು ಓಡಾಟವನ್ನು ತಡೆ ಹಿಡಿಯಲಾಗಿದೆ.

ಭೂಕುಸಿತದಿಂದ ಬಂದ್ ಆಗಿದ್ದ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಜೆ 6ರ ತನಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯ ದೋಣಿಗಾಲ್‌ ಚೆಕ್‌ಪೋಸ್ಟ್‌ನಿಂದ ಸಂಜೆ 6ರ ನಂತರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸತತ ಮಳೆಯಿಂದ ಹಲವು ಕಡೆ ಭೂಕುಸಿತ, ಗುಡ್ಡ ಕುಸಿದಿದ್ದು ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗಿತ್ತು.

ಮೈಸೂರು – ಮಡಿಕೇರಿ – ಸುಬ್ರಹ್ಮಣ್ಯ ಹೆದ್ದಾರಿ ಓಪನ್

ಇದೇ ಸಂದರ್ಭ ಸಂಪಾಜೆ ಘಾಟಿ ಮೂಲಕ ಲಘು ವಾಹನಗಳು ಹಾಗೂ ಬಸ್ಸುಗಳು ಮತ್ತು ಪ್ರಯಾಣಿಕ ವಾಹನಗಳ ಓಡಾಟಕ್ಕೆ ಮುಕ್ತವಾಗಿದೆ. ಚಾರ್ಮಾಡಿ ಘಾಟಿ ಸಂಚಾರ ನಿಷೇಧವಿದೆ ಎಂದು ದಕ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here