ಒಂದೆಡೆ ದೇಶ ಮಾತ್ರವಲ್ಲ ಜಗತ್ತೇ ಕೊರೊನಾ ವಿರುದ್ಧ ಹೋರಾಟ ನಡೆಸುವ ಪರಿಸ್ಥಿತಿಯಲ್ಲೂ ಕೂಡಾ ಕೆಲವು ಕಡೆ ಕೆಲವರು ಇದನ್ನು ಪುಂಡಾಟಿಕೆಗಳಿಗೆ, ಜನರ ನಂಬಿಕೆಗಳ ಜೊತೆ ಆಟವಾಡುವ ಹಾಗೂ ಧಾರ್ಮಿಕ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಂತಹುದರಲ್ಲಿ ಒಂದು ವದಂತಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಂದಾ ದೀಪ ಆರಿ ಹೋಗಿದೆ ಎಂಬ ಸುದ್ದಿ ವಾಟ್ಸಾಪ್ ಹಾಗೂ ಫೇಸ್ ಬುಕ್ ನಲ್ಲಿ ಕೆಲವು ಕಿಡಿಗೇಡಿಗಳು ಹಬ್ಬಿಸಿದ್ದು, ಜನ ಕೂಡಾ ಇದರ ಬಗ್ಗೆ ಭಯಭೀತರಾಗಿರುವುದು ಕಂಡು ಬಂದಿದೆ.

ಇನ್ನು ನಂದಾದೀಪ ಆರಿ ಹೋಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿರುವುದು ಮಾತ್ರವಲ್ಲದೇ, ಅದಕ್ಕೆ ಪರಿಹಾರವಾಗಿ ಇದೇ ಕಿಡಿಗೇಡಿಗಳು ನಿಮ್ಮ ನಿಮ್ಮ ಮನೆಗಳ ಮುಂದೆ ದೀಪ ಹಚ್ಚಿಟ್ಟರೆ ಅದರಿಂದ ಶುಭವಾಗುತ್ತದೆ ಎಂಬ ಸಲಹೆ ನೀಡಿದ್ದಾರೆ. ಇದನ್ನೇ ನಿಜವೆಂದು ನಂಬಿದ ಚಿಕ್ಕಮಗಳೂರು ಕಡೆಯ ಕೆಲವು ಭಾಗಗಳಲ್ಲಿ ಜನರು ತಮ್ಮ ಮನೆಗಳ ಮುಂದೆ ದೀಪಗಳನ್ನು ಹೊತ್ತಿಸಿದ್ದಾರೆ, ಪೂಜೆ ಮಾಡಿದ್ದಾರೆ. ಈ ವದಂತಿ ದಾವಣಗೆರೆಯ ಭಾಗಗಳಲ್ಲಿ ಕೂಡಾ ಹರಡಿದೆ ಎನ್ನಲಾಗಿದೆ.

ನಂದಾ ದೀಪ ಆರಿರುವುದು ಅಪಶಕುನದ ಸಂಕೇತವೆಂದೂ, ಅದರ ಪರಿಹಾರವಾಗಿ ಮನೆ ಮನೆಗಳಲ್ಲಿ ದೀಪ ಹಚ್ಚಬೇಕು ಎಂದು ನೀಡಿದ ಪರಿಹಾರ ನಂಬಿ ಮಧ್ಯರಾತ್ರಿ ಸಮಯದಲ್ಲೇ ಜನರು ದೀಪಗಳನ್ನು ಹಚ್ಚಿದ್ದಾರೆ ಎನ್ನಲಾಗಿದೆ. ನಿಜಕ್ಕೂ ಪರಿಸ್ಥಿತಿಯನ್ನು ಎದುರಿಸಲು ಜನ ಜಾಗೃತಿ ಮೂಡಿಸುವ ಬದಲು ಇಂತಹ ವದಂತಿಗಳನ್ನು ಹರಡುವ ಮಂದಿಯ ಕೆಲಸಗಳು ನಿಜಕ್ಕೂ ನಾಚಿಕೆಗೇಡು ಎನ್ನಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here