ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷ ಸೌರಮಾನ ಯುಗಾದಿಯ ಸಮಯದಲ್ಲಿ ನಡೆಸಲಾಗುವ ವಿಷು ಮಾಸದ ಜಾತ್ರೆಯನ್ನು ಈ ಬಾರಿ ರದ್ದು ಪಡಿಸಲಾಗಿದೆ ಎಂದು ಧರ್ಮಸ್ಥಳ ಶ್ರೀಕ್ಷೇತ್ರದ ಧರ್ಮಾಧಿಕಾರಿ ಮಾನ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಮಾಹಿತಿಯನ್ನು ನೀಡಿದ್ದಾರೆ. ಈ ವಿಚಾರವಾಗಿ ಅವರು ಸೂಚನೆಯೊಂದನ್ನು ಕೂಡಾ ಹೊರಡಿಸಿದ್ದಾರೆ. ಆ ಸೂಚನೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕವಾಗಿ ನಡೆಯುವ ವಿಷು ಮಾಸದ ಜಾತ್ರೆಯನ್ನು ಕುರಿತಾಗಿ ದೇವಪ್ರಶ್ನೆಯ ಮೂಲಕ ಪರಿಶೀಲಿಸಲಾಯಿತೆಂದು ಅವರು ತಿಳಿಸಿದ್ದಾರೆ.

ಈಗ ಅದಕ್ಕನುಗುಣವಾಗಿ ಸಾಂಪ್ರದಾಯಿಕವಾಗಿ ನಡೆದು ಬರುತ್ತಿದ್ದ ಇಲ್ಲಿನ ಶ್ರೀ ಧರ್ಮ ದೇವತೆಗಳ,
ಶ್ರೀ ಅಣ್ಣಪ್ಪಸ್ವಾಮಿಯ ನೇಮ ಮತ್ತು ಕೋಲಗಳು, ಹಾಗೂ ಐದು ದಿನಗಳ ಕಾಲ ನಡೆಯುವಚ ಶ್ರೀ ಮಂಜುನಾಥಸ್ವಾಮಿಯ ರಥೋತ್ಸವ ಮಹೋತ್ಸವವನ್ನು, ವಿವಿಧ ಕಟ್ಟೆಗಳಿಗೆ ವಿಹಾರ ಇನ್ನಿತರೆ ಆಚರಣೆಗಳೊಂದಿಗೆ ನೇತ್ರಾವತಿ ನದಿಗೆ ಅವಭೃತ ವಿಹಾರ ಮಾಡುವುದನ್ನು ಕೂಡಾ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಆಲಯಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಬರುತ್ತಿಲ್ಲ ಹಾಗೂ ಮುಂದೆ ಆಲಯ ಪ್ರವೇಶ ಹಾಗೂ ದರ್ಶನವನ್ನು ಕೂಡಾ ಮುಂದಿನ ಸೂಚನೆಯ ತನಕ ರದ್ದು ಪಡಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ನಿರ್ಣಯಗಳನ್ನು ಕೂಡಾ ಸ್ವಾಮಿಯವರಿಂದ ದೇವ ಪ್ರಶ್ನೆಯ ಮೂಲಕ ಒಪ್ಪಿಗೆ ಪಡೆದು ಮಾಡಿರುವ ಪರಿವರ್ತನೆಗಳಾಗಿದ್ದು, ಭಕ್ತರು ಯಾರೂ ಇದರ ಬಗ್ಗೆ ಸಂಕೋಚ ಪಡಬಾರದೆಂದು ಅವರು ಸೂಚನೆ ನೀಡಿದ್ದಾರೆ. ಅಲ್ಲದೆ ಕೊರೊನಾ ಸೋಂಕಿನ ಮುಕ್ತಿಗಾಗಿ ದೇವ ದೇವತೆಗಳ ಪ್ರಾರ್ಥನೆ ಮಾಡುತ್ತಾ, ಪರಿವರ್ತನೆಗಳಿಗೆ, ಸಾಂಕೇತಿಕ ಸೇವೆಗಳಿಗೆ ದೈವವು ಅನುಗ್ರಹಿಸಿರುವುದನ್ನು ಪರಿಗಣಿಸಿ ಭಕ್ತರು ಕೂಡಾ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ, ಮುಂದಿನ ಸುಭಿಕ್ಷ ದಿನಗಳಿಗಾಗಿ ಸಹಕರಿಸಬೇಕು ಎಂದು ಮನವಿಯನ್ನು ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here