Suddimane.com

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಧಾರವಾಡ ತಾಲೂಕು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಧಾರವಾಡ ಜಿಲ್ಲೆ. ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ 1206 ನೇ ಮದ್ಯವರ್ಜನ ಶಿಬಿರ ಹಾಗೂ ಪಾನ ಮುಕ್ತರಾಗಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಮಟ್ಟದಲ್ಲಿ ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪ್ರಶಸ್ತಿ ಪ್ರಧಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ, ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಜಾಗೃತಿ ಅಣ್ಣ ಪ್ರಶಸ್ತಿಯನ್ನು ಶ್ರೀ ಚೆನ್ನಪ್ಪ ರಾಯಾಪೂರ ಇವರಿಗೆ ಮತ್ತು ಜಾಗೃತಿ ಮಿತ್ರ ಪ್ರಶಸ್ತಿಯನ್ನು ಶ್ರೀ ಮಡಿವಾಳಪ್ಪ ಶಂಕ್ರಪ್ಪ ಬ್ಯಾಹಟ್ಟಿ, ಶ್ರೀ ಕರಿಗೌಡ ಶಿವನಗೌಡ ಶಿವನಗೌಡ್ರ, ಹಾಗೂ ಶ್ರೀ ನಿಜಗುಣಿ ಸುಭಾಷ್ ಕೊಟಬಾಗಿಲು, ಇವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಇದೇ ಸಂದರ್ಬದಲ್ಲಿ ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ (ಚನ್ನಬಸವೇಶ್ವರ ಜ್ಞಾನಪೀಠ ಕುಳವಿ/ಬೆಂಗಳೂರು) ಇವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ, ಶ್ರೀ ರಾಜಣ್ಣ ಕೊರವಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀಧರ ಶೆಟ್ಟಿ (ಕೋಶಾಧಿಕಾರಿ, ಹೊಟೆಲ್ ಅಸೋಸಯೇಷನ್, ಧಾರವಾಡ) ಇವರು ವಹಿಸಿದ್ದರು. ಇದೇ ಸಂದರ್ಬದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಎನ್ ಜಯಶಂಕರ ಶರ್ಮಾ, ಶ್ರೀ ಸೀತಾರಾಮ ಶೆಟ್ಟಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ಶ್ರೀ ವಿವೇಕ್ ವಿ ಪಾಯಸ್, ಶ್ರೀ ಕ್ಷೇ.ಧ,ಗ್ರಾ,ಯೋಜನೆ ಧಾರವಾಡ ಜಿಲ್ಲೆಯ ನಿರ್ದೇಶಕರಾದ, ಶ್ರೀ ದಿನೇಶ್ ಎಂ.ಹಾಗೂ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ, ಶ್ರೀ ಮಹಾವೀರ ತ. ಉಪಾದ್ಯೆ, ಹಾಗೂ ಧಾರವಾಡ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಉಲ್ಲಾಸ್ ಮೇಸ್ತ ರವರು ಉಪಸ್ಥಿತರಿದ್ದರು. ಮತ್ತು ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಿಬಿರದ ಮೂಲಕ ಪಾನ ಮುಕ್ತರಾದ 500 ನವಜೀವನ ಸದಸ್ಯರು ಮತ್ತು ಕುಟುಂಬಸ್ಥರು ಹಾಗೂ ಸಾವಿರಾರು ಮಂದಿ ಯೋಜನೆಯ ಸ್ವ ಸಹಾಯ ಸಂಘಗಳ ಪಾಲುದಾರರು ಭಾಗವಹಿಸಿದ್ದರು..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here