ಕನ್ನಡ ಚಿತ್ರರಂಗದ ಕಲಿಯುಗ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು‌ ದೊಡ್ಡಣ್ಣ ಅವರಿಗೂ ವಿಶೇಷವಾದ ಸಂಬಂಧ ಇತ್ತು. ಅಂಬರೀಶ್ ಜೊತೆ ಸದಾ ಇರುತ್ತಿದ್ದ ವ್ಯಕ್ತಿಗಳು ಅಂದ್ರೆ ರಾಜ್ ಲೈನ್ ವೆಂಕಟೇಶ್ ,ದೊಡ್ಡಣ್ಣ ,ರಾಜೇಂದ್ರಸಿಂಗ್ ಬಾಬು. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಅಂಬರೀಶ್ ಜೊತೆ ಇವರೆಲ್ಲಾ ಸಂಪರ್ಕ ಹೊಂದಿದ್ದರು. ಅಂಬರೀಶ್ ಅಗಲಿಕೆ ಕರುನಾಡಿನ ಜನತೆಗೆ ಎಷ್ಟು ನೋವು ಕೊಟ್ಟಿತೋ ಅದಕ್ಕಿಂತ ಹೆಚ್ಚಿನ ನೋವನ್ನು ಅಂಬರೀಶ್ ಅವರ ಈ ಆಪ್ತ ಗೆಳೆಯರು ಅನುಭವಿಸಿದ್ದಾರೆ. ಅಂಬರೀಶ್ ಅವರ ನಿಧನದ ಬಳಿಕ ಅಂಬರೀಶ್ ಚೀತಾ ಭಸ್ಮ ವನ್ನು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗಿತ್ತು.ಅದರ ನಂತರದ ದಿನಗಳಲ್ಲಿ ಕಾಶಿಯ ಗಂಗಾನದಿಯಲ್ಲಿ ಅಂಬರೀಶ್ ಅವರ ಚಿತಾಭಸ್ಮ ವಿಸರ್ಜನೆ ಮಾಡಲಾಗಿತ್ತು.

ಕಾಶಿಯಲ್ಲಿ ಗಂಗಾನದಿಯಲ್ಲಿ ಅಂಬರೀಶ್ ಅವರ ಪುತ್ರ ಅಭಿಷೇಕ್  ಜೊತೆ ದೊಡ್ಡಣ್ಣ, ರಾಜೇಂದ್ರ ಸಿಂಗ್​ ಬಾಬು, ರಾಕ್ ಲೈನ್ ವೆಂಕಟೇಶ್ ಅವರು  ಕಾಶಿಯಲ್ಲಿ ಸಂಸ್ಕಾರ ಕ್ರಿಯೆ ಮಾಡಿದ್ದರು.. ಅಂಬರೀಶ್ ಅವರ ಚಿತಾ ಭಸ್ಮ  ವಿಸರ್ಜನೆ ಸಮಯದಲ್ಲಿ  ದೊಡ್ಡಣ್ಣ ಅವರಿಗೆ ಒಂದು ವಿಚಿತ್ರ ಅನುಭವ ಆಗಿತ್ತಂತೆ. ದೊಡ್ಡಣ್ಣ ಅವರು  ಅಲ್ಲಿಯೂ ಅಂಬಿ ಮಹಿಮೆ ಬಗ್ಗೆ ವಿಸ್ಮಿತರಾಗಿದ್ದರಂತೆ. ಕಾರಣ ಕಾಶಿಯಲ್ಲಿ ಇದ್ದ ಜಿಲ್ಲಾಧಿಕಾರಿ ಮಂಡ್ಯ ಮೂಲದ ವ್ಯಕ್ತಿ. ಅವರೇ ಅಂಬರೀಶ್​ ಚಿತಾ ಭಸ್ಮ ವಿಸರ್ಜನೆಗೆ ಎಲ್ಲ ವ್ಯವಸ್ಥೆ ಮಾಡಿದ್ದರಂತೆ. ಸಂಸ್ಕಾರಕ್ಕಾಗಿ ಇಬ್ಬರು ಪುರೋಹಿತರು ಅಲ್ಲಿ ಹಾಜರಿದ್ದರು.

ಅಲ್ಲಿನ ಪುರೋಹಿತರಿಗೆ ಜಿಲ್ಲಾಧಿಕಾರಿ ಫೋನ್ ಮಾಡಿ ಈ ಅಂತ್ಯ ಸಂಸ್ಕಾರ ನಡೆಸಿಕೊಡಿ ಎಂದು ಹೇಳಿದ್ದರಂತೆ. ಖ್ಯಾತ ನಟ ದೊಡ್ಡಣ್ಣ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರ ಭಸ್ಮ ಕುಂಡ ಹಿಡಿದು ಗಂಗಾ ನದಿಯ ಮಧ್ಯ ಭಾಗಕ್ಕೆ ಬಂದು ವಿಸರ್ಜನೆ ಮಾಡಿದಾಗ ಪಕ್ಕದಲ್ಲೇ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸಹ ಇದ್ದರಂತೆ. ಅಲ್ಲಿಂದ ಗಂಗಾ ನದಿಯಲ್ಲಿ ದೊಡ್ಡಣ್ಣ ಅವರು ಮುಳುಗಿ ಎದ್ದಾಗ ದೊಡ್ಡಣ್ಣ ಅವರ ಮೈ ಭಾರ ಕಳೆದು ಮನಸ್ಸು ನಿರ್ಮಲಗೊಂಡಂತೆ ಭಾಸವಾಯಿತಂತೆ.

ನನ್ನ ತಾಯಿ ಆಣೆಗೂ ಈ ರೀತಿಯ ಅನುಭವ ಹಿಂದೆಂದೂ ಆಗಿರಲಿಲ್ಲ ಎಂದು ತಮಗಾದ ಅನುಭವಗಳನ್ನು ಖಾಸಗಿ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ನಟ ದೊಡ್ಡಣ್ಣ.ಅಂಬರೀಶ್ ಹಾಗೂ ದೊಡ್ಡಣ್ಣ ಅವರು ಬಹಳ ಆತ್ಮೀಯ ರಾಗಿದ್ದರು. ದೊಡ್ಡಣ್ಣ ಅವರಿಗೆ ಅನಾರೋಗ್ಯ ಬಂದಾಗಲೂ ಸಹ ಅಂಬರೀಶ್ ಅವರು ತಳಮಳಗೊಂಡಿದ್ದು ಉಂಟು. ಅಂಬರೀಶ್ ಜೊತೆ ಹೆಚ್ಚಿನ ಆತ್ಮೀಯತೆ ಹೊಂದಿದ್ದ ದೊಡ್ಡಣ್ಣ ಅವರಿಗೆ ಅಂಬರೀಶ್ ಅವರು ಅಗಲಿದಾಗ ಸಾಕಷ್ಟು ನೋವು ಉಂಟಾಗಿತ್ತು. ಈ ಬಗ್ಗೆ ದೊಡ್ಡಣ್ಣ ಅವರೇ ತಮ್ಮ ನೋವನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದರು. ಅಂಬರೀಶ್ ಅವರ ಗೆಳೆಯರ ಬಳಗದಲ್ಲಿ ದೊಡ್ಡಣ್ಣ ಹಿರಿಯ ಹಾಗೂ ವಿಶೇಷ ಸ್ಥಾನ ಪಡೆದಿದ್ದರು.

ಇದು ಅಂಬರೀಷ್ ಅವರ ಚಿತಾ ಭಸ್ಮವನ್ನು ಕಾಶಿಯ ಗಂಗಾದಿಯಲ್ಲಿ ರಾಜೇಂದ್ರಸಿಂಗ್ ಬಾಬು ಜೊತೆ ದೊಡ್ಡಣ್ಣ ಅವರು ವಿಸರ್ಜನೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here