ಖ್ಯಾತ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ‌ ಹೌದು ನಿನ್ನೆ  ದೆಹಲಿಯಲ್ಲಿ ನಡೆದ ಪದ್ಮಭೂಷಣ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದು ಜನಪ್ರಿಯ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ.!ಯಾಕಂತೀರ ರಾಷ್ಟ್ರಪತಿಗಳ ಕೈಯಲ್ಲಿ ಪ್ರಶಸ್ತಿ ಸ್ವೀಕರಿಸಲು ಧೋನಿ ಸೇನಾ ಸಮವಸ್ತ್ರ ಧರಿಸಿ ಬಂದಿದ್ದರು ಇದನ್ನು ಕಂಡ ಎಲ್ಲರೂ ವ್ಹಾವ್ ಎಂಬ ಉದ್ಗಾರ ತೆಗೆದು ಶಹಬ್ಬಾಶ್ ಧೋನಿ ಭಾಯ್ ಎಂದು ಬೆನ್ನು ತಟ್ಟಿದ್ದರು – ಈ exclusive video ನೋಡಿ.

ಅಷ್ಟೇ ಅಲ್ಲದೆ ಧೋನಿ ಈ ಮುಖ್ಯವಾದ ಕಾರ್ಯಕ್ರಮಕ್ಕೆ ತಮ್ಮ ಪ್ರೀತಿಯ ಪತ್ನಿ ಮತ್ತು ಮುದ್ದಿನ ಮಗಳನ್ನೂ ಕರೆತಂದಿದ್ದರು ಸೇನಾ ವಸ್ತ್ರದಲ್ಲಿ ಪ್ರೀತಿಯ ಮಗಳೊಂದಿಗೆ ಧೋನಿ ಮುದ್ದು ಮಾಡಿದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿವೆ.‌. 

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಹೇಂದ್ರ ಸಿಂಗ್ ಧೋನಿ ಮತ್ತು ಪತ್ನಿ ಸಾಕ್ಷಿ ಜೊತೆಯಾಗಿ ಫೋಟೋ ತೆಗೆಸಿಕೊಂಡಿರುವ ಧೋನಿ ಚಿತ್ರಗಳು ಎಲ್ಲೆಡೆ ಹರಿದಾಡುತ್ತಿದ್ದು ಜೈ ಹಿಂದ್ ಎಂಬ ಧೋನಿ ಘೋಷವಾಕ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಸೇನಾ ಸಮವಸ್ತ್ರದ ಬಗ್ಗೆ ಅಪಾರ ಗೌರವ ಹೊಂದಿರುವ ಧೋನಿ ಸಮಸ್ತ ಸೇನೆಗೆ ತಮ್ಮ ಪ್ರಶಸ್ತಿ ಅರ್ಪಿಸಿದ್ದಾರೆ. Xclusive photos ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here