ಕನ್ನಡ ಚಿತ್ರರಂಗದ  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸಬಾಳಿನ ಹೊಸಿಲಿನಲ್ಲಿ ನಿಂತಿದ್ದಾರೆ. ಬಹದ್ದೂರ್  ಹುಡುಗನ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಭಾನುವಾರದಂದು ಧ್ರುವ ಸರ್ಜಾ  ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬಾಲ್ಯದ ಗೆಳತಿ ಪ್ರೇರಣ ಶಂಕರ್ ಜೊತೆ ಧ್ರುವ ಹಸೆಮಣೆ ಏರುತ್ತಿದ್ದಾರೆ.ಇನ್ನು ಧ್ರುವ ಸರ್ಜಾ ಮತ್ತು ಪ್ರೇರಣಾ ಮದುವೆಗೆ ಕ್ಷಣಗಣನೆ ಆರಂಭವಾಗಿದ್ದು ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಮನೆಗಳಲ್ಲಿ ಶಾಸ್ತ್ರದ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರೇರಣಾ ಅವರ ಶಾಸ್ತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಗಳು ಮತ್ತು ಧ್ರುವ ಸರ್ಜಾ ಸೇರಿದಂತೆ ಎರಡೂ ಕುಟುಂಬದವರು ಮತ್ತು ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

 

ಧ್ರುವ ಮನೆ ಮುಂದೆ ಚಪ್ಪರ ಹಾಕಲಾಗಿದ್ದು ಸಾಕಷ್ಟು ಅಭಿಮಾನಿಗಳು ಧ್ರುವಸರ್ಜಾ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಧ್ರುವ ಸರ್ಜಾ ಮದುವೆ ಪತ್ರಿಕೆಯಲ್ಲಿ ಧ್ರವ ಮತ್ತು ಪ್ರೇರಣ ಅದ್ದೂರಿ ಫೋಟೋಶೂಟ್ ಇದೆ. ಐತಿಹಾಸಿಕ ಸ್ಥಳದಲ್ಲಿ ಫೋಟೋಶೂಟ್ ಮಾಡಿಸಿರುವ ನವ ಜೋಡಿಯ ಫೋಟೋಗಳು ಆಮಂತ್ರಣ ಪತ್ರಿಕೆಯಲ್ಲಿ ಕಾಣಸಿಗುತ್ತೆ. ಇನ್ನು ವಿಶೇಷ ಅಂದರೆ ಧ್ರುವ ಮದುವೆ ಪತ್ರಿಕೆ ಹಂಚುವ ಜೊತೆಗೆ ಹನುಮನ ವಿಗ್ರಹವನ್ನು ನೀಡಿ ಮದುವೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ.

ಧ್ರುವ ಸರ್ಜಾ ಮತ್ತು ಪ್ರೇರಣ ಮದುವೆ ಇದೆ ಭಾನುವಾರ ನಡೆಯಲಿದೆ. ಇಬ್ಬರ ಮದುವೆಗೆ ಬೆಂಗಳೂರಿನ ‘ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್’ ಸಜ್ಜಾಗಿದೆ. ಭಾನುವಾರ ಬೆಳಗ್ಗೆ 7.15 ರಿಂದ 7.45ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಮತ್ತು ಪ್ರೇರಣ ಶಂಕರ್ ಪತಿ-ಪತ್ನಿಯರಾಗಲಿದ್ದಾರೆ.

View this post on Instagram

😍😍😍😍

A post shared by dhruva_sarjaa_fc 🔵 (@dhruva_sarjaa__fc) on

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here