ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ನ ಆ್ಯಕ್ಷನ್ ಪ್ರಿನ್ಸ್ ಎಂದೇ ಖ್ಯಾತರಾದ ಧೃವ ಸರ್ಜಾ ಅವರ ಪ್ರೇರಣಾ ಅವರ ಜೊತೆ ಮದುವೆಯ ಮೂಲಕ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಈ ಸಂತಸದ ಸಮಯದಲ್ಲಿ ಧೃವ ಅವರು ತಮ್ಮ ಪತ್ನಿ ಪ್ರೇರಣಾ ಅವರಿಗೆ ಮದುವೆಯ ಉಡುಗೊರೆಯನ್ನು ನೀಡಿದ್ದಾರೆ. ಧೃವ ಅವರು ತಮ್ಮ ಪತ್ನಿಗೆ ಒಂದು ದುಬಾರಿ ಮನೆಯನ್ನು ತಮ್ಮ ಕಡೆಯಿಂದ ಉಡುಗೊರೆಯಾಗಿ ನೀಡಿದ್ದಾರೆ. ಹಾರೋಹಳ್ಳಿ ರಸ್ತೆಯಲ್ಲಿ ಮನೆಯೊಂದನ್ನು ಖರೀದಿ ಮಾಡಿರುವ ಧೃವ ಅವರು ಆ ಮನೆಯನ್ನು ಮದುವೆ ಸವಿ ನೆನಪಾಗಿ ತಮ್ಮ ಪತ್ನಿಗೆ ಕಾಣಿಕೆ ನೀಡಿದ್ದಾರೆ.

ಇಂದು ಅವರ ಹೊಸ ಮನೆಯಲ್ಲಿ ಸತ್ಯ ನಾರಾಯಣ ಪೂಜೆಯನ್ನು ನೆರವೇರಿಸಿದ್ದಾರೆ. ಐದು ಎಕರೆ ಜಮೀನಿನಲ್ಲಿ ಈ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಧೃವ ಹಾಗೂ ಪ್ರೇರಣಾ ಅವರ ಮದುವೆ ಇದೇ ನವೆಂಬರ್ 24 ರಂದು ನಡೆದಿತ್ತು. ಮದುವೆಗೆ ‌ಸ್ಯಾಂಡಲ್ ವುಡ್ ನ ಖ್ಯಾತ ನಾಮರೆಲ್ಲರೂ ಹಾಜರಾಗಿದ್ದರು. ಮದುವೆ ಬಹಳ ವಿಜೃಂಭಣೆಯಿಂದ ನಡೆದು, ರಾಜ್ಯಾದ್ಯಂತ ಧೃವ ಅವರ ಮದುವೆಯ ಸುದ್ದಿ ಮತ್ತು ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು.

ಮದುವೆಯ ಮಾರನೆಯ ದಿನ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಕೂಡಾ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಕೂಡಾ ಆಯೋಜಿಸಲಾಗಿತ್ತು. ಅಲ್ಲದೆ ಧೃವ ಅವರ ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು ವರನಿಗೆ ಶುಭ ಹಾರೈಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here