ದೇಶದ ರಾಜಧಾನಿ ದೆಹಲಿಯಲ್ಲಿ ವ್ಯಾಟ್ ದರವನ್ನು ಇಳಿಸಲು ಇಲ್ಲಿನ ಸರ್ಕಾರದ ಕ್ಯಾಬಿನೆಟ್ ನಿರ್ಧಾರವೊಂದನ್ನು ಮಾಡಿದ್ದು, ಈ ಹಿಂದೆ ವಿಧಿಸಲಾಗಿದ್ದ ಶೇ 30 ರ ವ್ಯಾಟನ್ನು ಶೇ16.75 ಕ್ಕೆ ತಗ್ಗಿಸಲಾಗುವುದು ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಳಿಸಿದ್ದಾರೆ.‌ ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ದೆಹಲಿ ಮಾತ್ರವೇ ಅಲ್ಲದೇ ದೇಶದ ಹಲವು ರಾಜ್ಯಗಳು ತಮ್ಮ ಆದಾಯದಲ್ಲಿ ಕೊರತೆಯನ್ನು ಎದುರಿಸಿವೆ‌. ಅದೇ ಹಿನ್ನೆಲೆಯಲ್ಲಿ ತೈಲದ ಬೆಲೆ ಮೇಲೆ ವ್ಯಾಟ್ ದರವನ್ನು ಏರಿಸಲಾಗಿತ್ತು. ಆಗ ದೆಹಲಿಯಲ್ಲಿ ಈ ವ್ಯಾಟ್ ದರವನ್ನು ಡೀಸೆಲ್ ಮೇಲೆ 30% ಏರಿಕೆ ಮಾಡಲಾಗಿತ್ತು.

ವ್ಯಾಟ್ ಮೇಲಿನ ಏರಿಕೆಯಿಂದಾಗಿ ದೆಹಲಿಯಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಗಿಂತ ಹೆಚ್ಚಾಗಿತ್ತು. ಈಗ ದೆಹಲಿ ಸರ್ಕಾರವು ವ್ಯಾಟ್ ದರವನ್ನು ಇಳಿಸಲು ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ, ದೆಹಲಿಯಲ್ಲಿ ಡೀಸೆಲ್ ಪ್ರತಿ ಲೀಟರ್‌ ಗೆ ಪ್ರಸ್ತುತ ಇರುವ 82 ರೂಪಾಯಿಗಳಿಂದ ಇನ್ನು ಮುಂದೆ 73.64 ರೂಪಾಯಿಗಳಿಗೆ ಕಡಿಮೆಯಾಗಲಿದೆ. ಅಂದರೆ ಡೀಸೆಲ್ ಪ್ರತಿ ಲೀಟರ್‌ಗೆ 8.36 ರೂಪಾಯಿ ಕಡಿಮೆಯಾಗಲಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here