ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ನಮ್ಮಲ್ಲಿ ಪೂಜಾ ಸ್ಥಳಗಳಿಗೆ ಕೇಸರಿ ಬಣ್ಣವನ್ನು ಹಾಕಿರುತ್ತಾರೆ. ಉದಾಹರಣೆಗೆ ದೇವಾಲಯದ ಗೋಡೆಗಳು, ಕಂಬಗಳು ಇಂತಹುವಕ್ಕೆ ಕೇಸರಿ ಬಣ್ಣ ಹಾಕುವುದು ಸಾಮಾನ್ಯ. ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಒಂದು ಕಟ್ಟಡದ ಹೊರ ಭಾಗದಲ್ಲಿ ಕೇಸರಿ ಬಣ್ಣವನ್ನು ಹಾಕಲಾಗಿದ್ದು, ಈ ಕಟ್ಟಡದ ದ್ವಾರ ಮುಚ್ಚಿದೆ. ಇಲ್ಲಿನ ಜನರು ಕಳೆದ ಒಂದು ವರ್ಷದಿಂದಲೂ ಬಾಗಿಲು ಹಾಕಿರುವ ಕಟ್ಟಡದ ಹೊರ ಭಾಗದಲ್ಲಿ ಪೂಜೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಜನರ ಪ್ರಕಾರ ಧಾರ್ಮಿಕ ಸ್ಥಳವಾಗಿ ಪೂಜೆಗೊಂಡ ಮುಚ್ಚಿದ ಬಾಗಿಲಿನ ಕಟ್ಟಡ ವಾಸ್ತವವಾಗಿ ಏನೆಂದು ತಿಳಿದ ಮೇಲೆ ಎಲ್ಲರೂ ದಂಗಾಗಿದ್ದಾರೆ.

ಹಮೀರ್‌ಪುರ ಜಿಲ್ಲೆಯ ಮೌಧಾ ನಿವಾಸಿಗಳು ಕಟ್ಟಡದ ಮುಚ್ಚಿದ ಬಾಗಿಲುಗಳ ಹೊರಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಪೂಜೆ ಸಲ್ಲಿಸುತ್ತಿದ್ದರೆಂಬುದು ನಿಜ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಕಟ್ಟಡದ ಒಳಗೆ ಯಾವುದಾದರೂ ದೇವಿ ಅಥವಾ ದೇವನ ಮೂರ್ತಿ ಸ್ಥಾಪಿಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ತಿಳಿಯುವ ಗೋಜಿಗೆ ಯಾರೂ ಹೋಗಿಲ್ಲ. ಈ ಕಟ್ಟಡವು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿದೆ, ಇದನ್ನು ಕೇಸರಿಯ ಬಣ್ಣದಿಂದ ಸಿಂಗರಿಸಿದ್ದು, ಕಟ್ಟಡ ದೇವಾಲಯದ ಆಕಾರದಲ್ಲಿದೆ. ಆದ್ದರಿಂದ ಇಲ್ಲಿನ ಜನರು ಇದನ್ನು ದೇವಾಲಯವೆಂದು ಪರಿಗಣಿಸಿದ್ದಾರೆ
ಒಳಗೆ ಏನಿದೆ ಎನ್ನುವುದನ್ನು ಅವರು ಪರಿಗಣಿಸಲೇ ಇಲ್ಲ.

ಆದರೆ ಇತ್ತೀಚಿಗೆ ಅಧಿಕಾರಿಯೊಬ್ಬರು ಈ ಕಟ್ಟಡದ ಬಗ್ಗೆ ಮಾಹಿತಿ ನೀಡುವವರೆಗೂ ಅದು ದೇವಾಲಯವೆಂದೇ ತಿಳಿದಿದ್ದವರಿಗೆ ಶಾಕ್ ಆಗಿದ್ದು ನಿಜ. ಏಕೆಂದರೆ ಹೊರ ಭಾಗದಿಂದ ದೇವಾಲಯದಂತೆ ಕಂಡ ಆ ಕಟ್ಟಡವು ವಾಸ್ತವವಾಗಿ ಶೌಚಾಲಯ ಎಂದು ತಿಳಿದು ಬಂದಿದೆ. ಅಲ್ಲದೆ ಕೇಸರಿ ಬಣ್ಣ ನೋಡಿ ದೇವಾಲಯ ಎಂದು ಭ್ರಮಿಸಿದ ಜನರು ಮತ್ತೆ ಹಾಗೆ ಊಹಿಸುವುದು ಬೇಡ ಎಂದು, ಇದೀಗ ಕಟ್ಟಡಕ್ಕೆ ಗುಲಾಬಿ ಬಣ್ಣ ಹಾಕಿಸುವ ನಿರ್ಧಾರವನ್ನು ಮಾಡಲಾಗಿದೆಯಂತೆ. ಅಲ್ಲದೆ ಆದಷ್ಟು ಬೇಗ ಶೌಚಾಲಯ ಕಟ್ಟಡವನ್ನು ತೆರೆಯುವ ನಿರ್ಧಾರ ಕೂಡಾ ಮಾಡಲಾಗಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here