ಬುಧವಾರ ಸ್ಯಾಂಡಲ್ ವುಡ್ ನ ಪ್ರೇಮ ಪಕ್ಷಿಗಳಾದ ದಿಗಂತ್ ಮತ್ತು ಐಂದ್ರಿತಾ ರೈ ಅವರು ವಿವಾಹ ಜೀವನಕ್ಕೆ ಕಾಲಿಟ್ಟರು ‌.ಮದುವೆಯಾದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿರುವ ಮಿಸ್ಟರ್​ ಆ್ಯಂಡ್​ ಮಿಸೆಸ್​ ದಿಗಂತ್​ ತಮ್ಮ ಮದುವೆಯ ಕುರಿತು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸರಳವಾಗಿ ಮದುವೆಯಾಗಬೇಕು ಎಂಬುದು ನಮ್ಮ ಉದ್ದೇಶವಾದ್ದರಿಂದ ಹೆಚ್ಚಿನ ಜನರನ್ನು ಆಹ್ವಾನಿಸಿರಲಿಲ್ಲ. ಮಾಧ್ಯಮಗಳಿಗೂ ಚಿತ್ರೀಕರಿಸಲು ಅವಕಾಶ ನೀಡಿರಲಿಲ್ಲ. ಸದ್ಯದಲ್ಲೇ ನಾವೇ ನಮ್ಮ ಮದುವೆಯ ಸಿಡಿ ನೀಡಲಿದ್ದೇವೆ ಎಂದು ಹೇಳಿದರು.2009ರಲ್ಲಿ ‘ಮನಸಾರೆ’ ಸಿನಿಮಾದ ಶೂಟಿಂಗ್​ ವೇಳೆ ತನ್ನ ಮತ್ತು ದಿಗಂತ್​ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಿಕೊಂಡ ಐಂದ್ರಿತಾ ರೇ, ಇಬ್ಬರಿಗೂ ಪರಿಸರ ಎಂದರೆ ಬಹಳ ಇಷ್ಟ.

ಆಗಾಗ ನಂದಿ ಬೆಟ್ಟಕ್ಕೆ ಹೋಗುತ್ತಿದ್ದೆವು. ಹಾಗಾಗಿ, ಅದರ ಬಳಿಯಲ್ಲೇ ಇರುವ ರೆಸಾರ್ಟ್​ನಲ್ಲಿ ಮದುವೆಯಾಗಿದ್ದೇವೆ. ಮದುವೆಯಲ್ಲಿ ಅನಗತ್ಯವಾಗಿ ಆಹಾರ ಪೋಲಾಗದಂತೆ ಜಾಗ್ರತೆ ವಹಿಸಿದ್ದೆವು. ಅಲ್ಲಿ ಬಳಸಿದ ಹೂಗಳನ್ನು ಗೊಬ್ಬರ ಮಾಡುವ ಸಂಸ್ಥೆಗೆ ನೀಡಿದ್ದೇವೆ. ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ವಸ್ತುಗಳನ್ನು ಬಳಸಿಲ್ಲ. ಸರಳವಾಗಿ ಆದರೆ, ನಮ್ಮಿಬ್ಬರ ಕನಸಿನಂತೆ ಮದುವೆಯಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾಗಿ ಹೇಳಿಕೊಂಡ ದಿಗಂತ್​, ಎರಡೂ ಸಂಪ್ರದಾಯದವರ ಪದ್ಧತಿಯಂತೆ ವಿವಾಹವಾಗಿದ್ದೇವೆ. ಹೆಚ್ಚಾಗಿ ಬೆಂಗಾಲಿ ಸಂಪ್ರದಾಯವನ್ನೂ ಅನುಸರಿಸಿದ್ದೇವೆ. ನನಗೂ ಆ ಸಂಸ್ಕೃತಿ ಬಹಳ ಹೊಸತಾದ್ದರಿಂದ ಎಂಜಾಯ್​ ಮಾಡಿದೆ. ಎರಡೂ ಕಡೆಯ ಮದುವೆಯ ಶಾಸ್ತ್ರಗಳನ್ನು ಅನುಸರಿಸಿ ಸಂಪ್ರದಾಯಬದ್ಧವಾಗಿ ಮದುವೆಯಾಗಿದ್ದೇವೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮನಸಾರೆ ಸಿನಿಮಾದ ಶೂಟಿಂಗ್​ ವೇಳೆಯಲ್ಲೇ ನನಗೆ ಐಂದ್ರಿತಾ ಎಷ್ಟು ಕೇರಿಂಗ್​ ಎಂಬುದು ಗೊತ್ತಾಗಿತ್ತು. ಆಕೆ ಬಹಳ ಮೃದು ಮನಸಿನ ಹುಡುಗಿ. ಆಕೆಯ ಕುಟುಂಬದವರು ಕೂಡ ನನ್ನನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ, ಪ್ರೀತಿ ತೋರಿಸುತ್ತಾರೆ ಎಂದು ದಿಗಂತ್​ ಹೇಳಿದರು.ಮನಸಾರೆ ಸಿನಿಮಾದ ಶೂಟಿಂಗ್​ ಮುಗಿದ ನಂತರ ಎಲ್ಲರೂ ಟ್ರಿಪ್​ ಹೋಗಿದ್ದೆವು. ಆಗ ದಿಗಂತ್​ ಒಂದು ರಿಂಗ್​ ನೀಡಿ ನನಗೆ ಪ್ರಪೋಸ್​ ಮಾಡಿದ್ದರು. ನನಗೂ ಅವರ ಮೇಲೆ ಇಷ್ಟವಿತ್ತು. ಹಾಗಾಗಿ, ಒಪ್ಪಿಕೊಂಡೆ. ಆಗಲೇ ನಾವಿಬ್ಬರೂ ಮದುವೆಯಾಗಬೇಕೆಂದು ನಿರ್ಧಾರವಾಗಿದ್ದರೂ ಇಲ್ಲಿಯವರೆಗೂ ಕೆರಿಯರ್​ ಬಗ್ಗೆ ಗಮನ ಹರಿಸಿದ್ದರಿಂದ ಈಗ ಮದುವೆಯಾಗಿದ್ದೇವೆ ಎಂದು ಐಂದ್ರಿತಾ ಹಳೆಯ ದಿನಗಳನ್ನು ನೆನಪಿಸಿಕೊಂಡರು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here