ಇಂದು ಎಸ್.ಎಸ್.ಎಲ್. ಸಿ. ಫಲಿತಾಂಶ ಪ್ರಕಟಣೆಯಾಗಿದೆ. ಕಷ್ಟ ಪಟ್ಟು ಓದಿ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂಭ್ರಮ ಹಾಗೂ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಅವರ ಪೋಷಕರಿಗೂ ಕೂಡಾ ತಮ್ಮ ಮಕ್ಕಳ ಸಾಧನೆಯನ್ನು ನೋಡಿ ಅತೀವ ಆನಂದ ಹಾಗೂ ಸಾರ್ಥಕತೆಯ ಅನುಭವವಾಗಿದೆ. ವರ್ಷಪೂರ್ತಿ ಪಟ್ಟ ಶ್ರಮಕ್ಕೆ ತಕ್ಕುದಾದ ಪ್ರತಿಫಲ ಇಂದು ವಿದ್ಯಾರ್ಥಿಗಳಿಗೆ ಹಾಗೂ ಅವರ ಅಧ್ಯಯನಕ್ಕೆ ನೆರವಾದ ಪೋಷಕರು ಹಾಗೂ ಶಿಕ್ಷಕರು ಎಲ್ಲರಿಗೂ ಸಂತಸವಾಗಿದೆ. ಇದು ಸೆಲೆಬ್ರಿಟಿಗಳು ವಿಷಯದಲ್ಲೂ ಸಾಮಾನ್ಯ. ಅದರಂತೆ ಕನ್ನಡದ ಚಿತ್ರ ನಿರ್ದೇಶಕರೊಬ್ಬರು ತಮ್ಮ ಮಗಳ ಎಸ್.ಎಸ್.ಎಲ್. ಸಿ ಸಾಧನೆಯನ್ನು ಟ್ವೀಟ್ ಮಾಡಿದ್ದಾರೆ.

ಮಿಸ್ಸಿಂಗ್ ಬಾಯ್ ಚಿತ್ರದ ನಿರ್ದೇಶಕ ರಘುರಾಮ್ ಅವರು ತಮ್ಮ ಮಗಳು ನನಸು ಎಸ್ ಎಸ್ ಎಲ್ ಸಿ ಅತ್ಯತ್ತಮ ದರ್ಜೆಯಲ್ಲಿ ಉತ್ತೀರ್ಣಳಾಗಿರುವ ಸಂಭ್ರಮವನ್ನು ಟ್ವಿಟರ್ ನಲ್ಲಿ ಹಾಕಿ ಮಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ತಮ್ಮ ಮಗಳೊಂದಿಗೆ ಇರುವ ಫೋಟೋವ‌ನ್ನು ಹಾಕಿ ಅವರು ಬಹಳ ಪ್ರೀತಿಯಿಂದ ಮಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರು ಟ್ವೀಟ್ ನಲ್ಲಿ ಸಮೀಕ್ಷೆ ಅನ್ನೋ ವಿದ್ಯಾರ್ಹತೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನನ್ನ ಮಗಳು ನನಸು 92 %ನಲ್ಲಿ ಉತ್ತೀರ್ಣ ಹೊಂದಿದ್ದಾಳೆ ಎಂದು ತಿಳಿಯ ಪಡಿಸಲು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

ಅವರ ಟ್ವೀಟ್ ಗೆ ಹಲವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ ಹಾಗೂ ಅವರ ಮಗಳ ಸಾಧನೆಗೆ ಮೆಚ್ಚಿ ಟ್ವೀಟ್ ಗಳ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಮಗಳ ಸಂತಸದಲ್ಲಿ ತಾನು ಸಂಭ್ರಮ ಪಡುತ್ತಿದ್ದಾರೆ ನಿರ್ದೇಶಕ ರಘುರಾಮ್. ತಂದೆ ತಾಯಿಯರಿಗೆ ನಿಜಕ್ಕೂ ಮಕ್ಕಳ‌ ಸಾಧನೆಯನ್ನು ಕಂಡಾಗ ಬಹಳ ಸಂತೋಷವಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here