ಟಾಲಿವುಡ್ ನ ಜನಪ್ರಿಯ ನಿರ್ದೇಶಕ, ಬಾಹುಬಲಿ ಮೂಲಕ ಜಗತ್ತಿನ ಗಮನವನ್ನು ಸೆಳೆದ ನಿರ್ದೇಶಕ ರಾಜಮೌಳಿ ಅವರು ಕುಟುಂಬದ ಸದಸ್ಯರಿಗೆ ಕೂಡಾ ಕೊರೊನಾ ಪಾಸಿಟಿವ್ ಆಗಿದೆ ಎನ್ನಲಾಗಿದೆ. ಇನ್ನು ಈ ವಿಚಾರವನ್ನು ನಿರ್ದೇಶಕ ರಾಜಮೌಳಿ ಅವರು ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ರಾಜಮೌಳಿ ಅವರು ತಮ್ಮ ಟ್ವೀಟ್ ನಲ್ಲಿ, ನಾನು ಮತ್ತು ನಮ್ಮ ಕುಟುಂಬದವರಿಗೆ ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಜ್ವರ ಅದಾಗಿಯೇ ಕಡಿಮೆ ಆಗಿದೆ. ಆದರೂ ಕೂಡ ನಾವು ಕೊರೊನಾ ತಪಾಸಣೆಗೆ ಒಳಗಾದ್ವಿ ಎಂದಿದ್ದಾರೆ.

ಹೀಗೆ ಪರೀಕ್ಷೆಗೆ ಒಳಪಟ್ಟು ಅದರ ವರದಿ ಇಂದು ಬಂದಿದ್ದು, ಪಾಸಿಟಿವ್ ಆಗಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ಅವರು ನಾವು ಈಗ ವೈದ್ಯರ ಸಲಹೆಯಂತೆ ಹೋಂ ಕ್ವಾರಂಟೀನ್​​ನಲ್ಲಿ ಇದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ರಾಜಮೌಳಿ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಕೂಡಾ ರಾಜಮೌಳಿ ಅವರು ಬೇಗ ಸಂಪೂರ್ಣ ಗುಣಮುಖರಾಗಲಿ ಎಂದು ಪ್ರತಿಕ್ರಿಯೆ ನೀಡುತ್ತಾ ಅವರಿಗೆ ಹಾರೈಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here