ಡಿಸ್ಕೋ ಶಾಂತಿ ಈ ಹೆಸರು ಒಂದೊಮ್ಮೆ ಪಡ್ಡೆಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಡಿಸ್ಕೋ ಶಾಂತಿಯವರ ಒಂದು ಹಾಡು ಇದ್ದೇ ಇರುವಂತಹ ಬೇಡಿಕೆ ಇರುತ್ತಿತ್ತು. ಕ್ಯಾಬರೆ ನೃತ್ಯಗಳು ಸಿನಿಮಾಗಳ ಒಂದು ಭಾಗವೇ ಆಗಿದ್ದ ಅಂದಿನ ಬಹುತೇಕ ಚಿತ್ರಗಳಲ್ಲಿ ಡಿಸ್ಕೋ ಶಾಂತಿ ಅವರು ಕುಣಿದು, ಅದೆಷ್ಟೋ ಪುರುಷರ ನಿದ್ದೆಗೆಡಿಸಿದ್ದು ಉಂಟು. ದಕ್ಷಿಣದ ನಾಲ್ಕು ಭಾಷೆಗಳು ಮಾತ್ರವಲ್ಲದೇ, ಹಿಂದಿ ಹಾಗೂ ಇನ್ನಿತರೆ ಭಾಷೆಗಳ ಸಿನಿಮಾಗಳೆಲ್ಲಾ ಸೇರಿದರೆ ಸರಿ ಸುಮಾರು 900 ಸಿನಿಮಾಗಳಲ್ಲಿ ನಟಿಸಿದ ಪ್ರಖ್ಯಾತ ನಟಿ ಡಿಸ್ಕೋ ಶಾಂತಿ. ಆದರೆ ನಟನೆಗಿಂತ ಅವರಿಗೆ ಖ್ಯಾತಿ ಬಂದಿದ್ದು ಮಾತ್ರ ಒಬ್ಬ ಡಾನ್ಸರ್ ಆಗಿ.

ಮೂಲತಃ ತಮಿಳುನಾಡಿನ ಚೆನ್ನೈನಲ್ಲಿ ಹುಟ್ಟಿದ ಶಾಂತಿ ಅವರ ತಂದೆ ಕೂಡಾ ಒಬ್ಬ ನಟ ಅವರ ನಿಧನದ ನಂತರ ಶಾಂತಿ ಅವರಿಗೆ ಸಿನಿಮಾ ಬಿಟ್ಟು ಬೇರೆ ದಾರಿ ಇರಲಿಲ್ಲ. ಕುಟುಂಬ ನಿರ್ವಹಣೆಗಾಗಿ ಆವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಆ ಸಿನಿಮಾಗಳು ಬಿಡುಗಡೆ ಆಗಲಿಲ್ಲ, ಅಲ್ಲದೆ ಯಶಸ್ಸು ಪಡೆಯಲು ವಿಫಲವಾದಾಗ, ಡಾನ್ಸರ್ ಆಗಿ ಮತ್ತೊಂದು ಪ್ರಯತ್ನ ಮಾಡಿದ ಶಾಂತಿ ಕಡೆಗೆ ತನ್ನ ಮಾದಕ ನೃತ್ಯಗಳಿಗೆ ಪ್ರಸಿದ್ಧಿಯಾಗಿ ಡಿಸ್ಕೋ ಶಾಂತಿ ಎಂದೇ ಗುರುತಿಸಲ್ಪಟ್ಟರು. ಅನಂತರ ತೆಲುಗಿನ ರಿಯಲ್ ಸ್ಟಾರ್ ಎಂದು ಕರೆಯಲ್ಪಡುವ ಶ್ರೀ ಹರಿ ಅವರೊಡನೆ ಕುಟುಂಬ ಜೀವನಕ್ಕೆ ಕಾಲಿಟ್ಟ ಅವರು ಸಿನಿಮಾಗಳಿಂದ ದೂರಾದರು.

ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳ ತಾಯಾದರು. ಆದರೆ ಮೊದಲ ಹೆಣ್ಣು ಮಗು ಅನಾರೋಗ್ಯದ ಕಾರಣ ತೀರಿಕೊಂಡಾಗ, ಆ‌ ದುಃಖವನ್ನು ಮರೆಯಲು ಅಕ್ಷರ ಫೌಂಡೇಶನ್ ಸ್ಥಾಪಿಸಿದರು ಶ್ರೀ ಹರಿ ಮತ್ತು ಡಿಸ್ಕೋ ಶಾಂತಿ. ತಮ್ಮ ಫೌಂಡೇಶನ್ ಮೂಲಕ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವ ಮಹತ್ಕಾರ್ಯ ಆರಂಭಿಸಿದರು. ಅಲ್ಲದೆ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದು ಮಾತ್ರವೇ ಅಲ್ಲದೇ, ನಾಲ್ಕು ಹಳ್ಳಿಗಳನ್ನು ದತ್ತು ಪಡೆದರು. ಹೀಗೆ ಸಮಾಜ ಸೇವೆಯಲ್ಲೂ ಗುರ್ತಿಸಿಕೊಂಡ ಶಾಂತಿ ಅವರ ಪತಿ ಶ್ರೀಹರಿ ಆರೋಗ್ಯ ಸಮಸ್ಯೆಯಿಂದ ನಿಧನರಾದಾಗ ಡಿಸ್ಕೋ ಶಾಂತಿ ಡಿಪ್ರೆಶನ್ ಗೆ ಗುರಿಯಾದರು.

ಆಗ ಆರೋಗ್ಯ ಸಮಸ್ಯೆಯಿಂದ ಬಳಲಿದ ಡಿಸ್ಕೋ ಶಾಂತಿ ಅವರಿಗೆ ಆಪ್ತರು ನೀಡಿದ ನೆರವು, ಪ್ರೋತ್ಸಾಹ ಪ್ರೋತ್ಸಾಹ ಗಳಿಂದ ಈ ಆರೋಗ್ಯವಾಗಿದ್ದು. ಅವರ ಇಬ್ಬರು ಗಂಡು ಮಕ್ಕಳಲ್ಲಿ ಎರಡನೇ ಮಗ ಮೇಘಾಂಶ್ ಶ್ರೀ ಹರಿ ರಾಜಧೂತ್ ಎಂಬ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. ಮೊದಲನೇ ಮಗನ ಹೆಸರು ಶಶಾಂಕ್ ಶ್ರೀ ಹರಿ. ಒಂದೆರಡು ವರ್ಷದ ಹಿಂದೆ ತೆಲುಗಿನ ಶೋ ಒಂದರಲ್ಲಿ ಮಕ್ಕಳೊಟ್ಟಿಗೆ ಬಂದಿದ್ದ ಡಿಸ್ಕೋ ಶಾಂತಿ ತಮ್ಮ ಜೀವನದ ಏರಿಳಿತಗಳನ್ನು ಖ್ಯಾತ ಹಾಸ್ಯ ನಟ ಆಲಿ ಅವರೊಂದಿಗೆ ಹಂಚಿಕೊಂಡಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here