ಇಡಿ ಆರೋಪಕ್ಕೆ ಡಿ ಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿ ಮೂಲಕ ಕೇಂದ್ರ ಬಿಜೆಪಿ ವಕ್ತಾರ ಸಂದೀಪ್ ಪಾತ್ರಾ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇಂದು ಸಂಜೆ  ತಮ್ಮ ನಿವಾಸದಲ್ಲಿ ಆಸ್ಪತ್ರೆಯಿಂದ ಬರುತ್ತಿದ್ದಂತೇ ಸುದ್ದಿಗೋಷ್ಠಿ ಮಾಡಿದ ಡಿಕೆ ಶಿವಕುಮಾರ್ ಅವರು ನಾನು ಯಾವುದೇ ಇಡಿ ದಾಳಿಗೆ ಎದರಿ ಆಸ್ಪತ್ರೆಗೆ ದಾಖಲಾಗಿಲ್ಲ ನಾನು ಎದರಿಕೊಳ್ಳುವ ಜಾಯಮಾನದವನೂ ಅಲ್ಲ ಎಂದು ಮಾತು ಆರಂಭಿಸಿದ ಡಿ ಕೆ ಶಿವಕುಮಾರ್ ಅವರು ಬಿಜೆಪಿ ಅವರು ಮಾಡಿರುವ ಅಕ್ರಮಗಳ ದೊಡ್ಡ ಲಿಸ್ಟ್ ನನ್ನ ಬಳಿ ಇದೆ ಒಂದು ವೇಳೆ ನಾನು ಅವರ ಎಲ್ಲಾ ಅಕ್ರಮಗಳ ಬಗ್ಗೆ ಬಾಯಿ ತೆರೆದರೆ ದೇಶಾದ್ಯಂತ ಬಿಜೆಪಿ ನಾಯಕರ ಮಾನ ಹರಾಜಗಲಿದೆ.

ಸೂಕ್ತ ಸಮಯದಲ್ಲಿ ಬಿಜೆಪಿ ಪಕ್ಷದ ಅಕ್ರಮ ಬಯಲು ಮಾಡುತ್ತೇನೆ ಎಂದರು.ನನಗೆ ಕೇಂದ್ರದ ಐಟಿ ದಾಳಿ ಹೊಸದಲ್ಲ ಕಳೆದ ವರ್ಷದಲ್ಲಿ ಗುಜರಾತ್ ನ ಕಾಂಗ್ರೆಸ್ ನಾಯಕರಿಗೆ ನಾನು ರಕ್ಷಣ ಕೊಟ್ಟ ಸಮಯದಿಂದಲೆ ನನ್ನ ಮೇಲೆ ಬಿಜೆಪಿ ದಾಳಿ ನಡೆಸಲು ಶುರು ಮಾಡಿತ್ತು.ನನ್ನ ಮನೆ ಮೇಲೆ ನನ್ನ  ಕಛೇರಿ ಮೇಲೆ ನನ್ನ ಸಂಬಂಧಿಕರಿಗೆ ಕಿರುಕುಳ ಕೊಡುತ್ತಲೇ ಬಂದಿದ್ದಾರೆ. ಅವರಿಗೆ ಸೂಕ್ತ ದಾಖಲೆ ಒದಗಿಸಿದ್ದೇನೆ.ನಾನು ಜೈಲಿಗೆ ಹೋಗುತ್ತೇನೆ ಎಂದು ಬಿಜೆಪಿ ರಾಜ್ತಾದ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಕನಸು ಕಾಣುತ್ತಿದ್ದಾರೆ.ಇಂದು ನಡೆದ ಬಿಜೆಪಿ ಸಭೆಯಲ್ಲಿ ನನ್ನ ಬಂಧನವಾಗುತ್ತದೆ ನನ್ನ ಬಂಧನದ ಬಳಿಕ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿಜೆಪಿ ಅಧಿಕಾರಕ್ಕೆ

ಬರುತ್ತದೆ ಎಂಬ ಬಗ್ಗೆ ಮಾತುಗಳನ್ನಾಡಿದ್ದಾರೆ ಆದರೆ ಅದು ಸಾಧ್ಯವಾಗದ ಮಾತು‌ ಬಿಜೆಪಿ ಯವರು ಕಾಂಗ್ರೆಸ್ ಶಾಸಕರಿಗೆ ಎಷ್ಟು ಕೋಟಿ ಆಫರ್ ಮಾಡಿದ್ದಾರೆಂದು ನನಗೆ ತಿಳಿದಿದೆ.ಸಮಯ ಬಂದಾಗ ಅದೆಲ್ಲವನ್ನು ರಾಷ್ಟ್ರದ ಜನತೆ ಮುಂದೆ ತೆರೆದಿಡುತ್ತೇನೆ ಎಂದು ಡಿ ಕೆ ಶಿವಕುಮಾರ್ ಅವರು ತಿಳಿಸಿದರು.ನಾನು ಒಂದು ಮಾತು ಸ್ಪಷ್ಟವಾಗಿ ತಿಳಿಸುತ್ತೇನೆ ನನಗೆ ಇಲ್ಲಿಯವರೆಗೂ ಯಾವುದೇ ಇಡಿ ಅಧಿಕಾರಿಗಳು ಸಂಪರ್ಕಿಸಿಲ್ಲ ನಮ್ಮ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದರು.ನನ್ಮ ಮೇಲೆ ಕಾಂಗ್ರೆಸ್  ಹೈಕಮಾಂಡ್ ಗೆ ಹಣ ನೀಡಿದ್ದೇನೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಅದೆಲ್ಲಾ ಸುಳ್ಳು ನಾನು ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ಸಿದ್ದ ಎಂದು ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.ದೇಶದ ಕಾನೂನು ಎಲ್ಲರಿಗೂ ಒಂದೇ ನಾನು ಕಾನೂನು ಹೋರಾಟವನ್ನು ಮುಂದುವರಿಸುತ್ತೇನೆ ಯಾರಿಗೂ ಹೆದರಿ ಕೂರಲ್ಲ ಎಂದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here