ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ತನ್ನ ಕಸ್ಟಡಿಗೆ ತೆಗೆದುಕೊಂಡಿರುವುದನ್ನು ವಿರೋಧಿಸಿ ಇಂದು ಒಕ್ಕಲಿಗ ಸಮುದಾಯವು ತನ್ನ ಶಕ್ತಿ ಪ್ರದರ್ಶನವನ್ನು ಮಾಡಿದೆ. ಡಿಕೆಶಿ ಬಂಧನದಿಂದ ಒಕ್ಕಲಿಗ ಸಮುದಾಯವು ತೀವ್ರ ಅಸಮಾಧಾನ‌ಗೊಂಡಿದ್ದು, ತಮ್ಮವರ ಬಂಧನವನ್ನು ವಿರೋಧಿಸಿ ಸಿಟ್ಟಿಗೆದ್ದು, ಇಂದು ಒಂದು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಮಾಡಿ  ಒಕ್ಕಲಿಗ ಸಮುದಾಯ ಬಲ ತೋರಿಸಿದೆ. ಕನಕಪುರದ ಬಂಡೆ ಎಂದೇ ಖ್ಯಾತರಾದ ಡಿಕೆಶಿ ಅವರ ಬಂಧನ ಅಕ್ರಮ ಎಂಬುದು ಒಕ್ಕಲಿಗ ಸಮುದಾಯದ ಕೂಗಾಗಿದೆ.

ಬೆಂಗಳೂರಿನ ಬಸವನ ಗುಡಿಯ ನ್ಯಾಷನಲ್ ಕಾಲೇಜಿನ ಗ್ರೌಂಡ್ ನಿಂದ ಈ ರ್ಯಾಲಿ ಆರಂಭವಾಗಿದೆ . ಅಲ್ಲಿಂದ ಆರಂಭವಾದ  ರ್ಯಾಲಿ ಫ್ರೀಡಂ ಪಾರ್ಕ ವರೆಗೂ ನಡೆದು, ಅಲ್ಲಿ ಮುಕ್ತಾಯಗೊಳ್ಳ ಲಿದೆ. ಈ ಸಂಬಂಧ ಸುಮಾರು 10,000 ಕ್ಕಿಂತ ಅಧಿಕ ಬೆಂಬಲಿಗರು ಈ ರ್ಯಾಲಿಯಲ್ಲಿ ಪಾಲ್ಗೊನಡರು  ಎನ್ನಲಾಗಿದೆ. ಇನ್ನು ಇಂದು ರ್ಯಾಲಿ ನಡೆಯುವ ಸಂದರ್ಭದಲ್ಲಿ ಇದರ ನೇರ ಪರಿಣಾಮ ರಸ್ತೆ ಸಂಚಾರ ಮತ್ತು ವಾಹನ ಚಾಲಕರ ಮೇಲೆ ಆಗಲಿದೆ ಎನ್ನುವ ಕಾರಣಕ್ಕೆ ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರತಿಭಟನಾ ರ್ಯಾಲಿಯು ಸಾಗುವ ಮಾರ್ಗದಲ್ಲಿ ಮತ್ತು ಅಕ್ಕಪಕ್ಕದ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಸುಮಾರು 13 ಮಾರ್ಗ ಬದಲಾವಣೆಯನ್ನು ಮಾಡಲಾಗಿತ್ತು. . ಇದು ಮಾತ್ರವೇ ಅಲ್ಲದೇ 19 ಕಡೆ ಮಾರ್ಗ ಬದಲಾವಣೆ ಪಾಯಿಂಟ್‍ಗಳನ್ನು ಸಹಾ ಮಾಡಲಾಗಿದ್ದು, ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಪ್ರಯತ್ನವನ್ನು ಕೂಡಾ ಮಾಡಲಾಗಿದೆ. ಅಲ್ಲದೆ ಹೊರಗಿನಿಂದ ಪ್ರತಿಭಟನೆಗೆ ಬರುವ ವಾಹನಗಳಿಗೆ 9 ಕಡೆ ಪಾರ್ಕಿಂಗ್ ಮಾಡುವ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ.

ಪ್ರತಿಭಟನೆಗೆ ಕುಮಾರಸ್ವಾಮಿ ಗೈರು… 

ಬೆಂಗಳೂರಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಪರ ನಡೆಯುತ್ತಿರುವ ಪ್ರತಿಭಟನೆಗೆ ನನಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.ನಮ್ಮವರಿಗೆ ಪ್ರತಿಭಟನೆ ರ‍್ಯಾಲಿಗೆ ಬೆಂಬಲ ಕೊಡಲು ಹೇಳಿದ್ದೇನೆ. ನಮ್ಮ ಎಲ್ಲ ಕಾರ್ಯಕರ್ತರು ಭಾಗವಹಿಸಿದ್ದಾರೆ. ಇಲ್ಲಿಯ ಈ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಅಲ್ಲದೆ ನನ್ನ ಗಮನಕ್ಕೆ ತರದೇ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಅಲ್ಲದೇ ಮೊದಲೇ ಹೇಳಿದ್ದರೆ ಅಥವಾ ಇನ್ವಿಟೇಷನ್ ನೀಡುತ್ತಿದ್ದರೆ ನಾನು ಭಾಗವಹಿಸುತ್ತಿದ್ದೆ. ಅದರಲ್ಲಿ ಏನು ಇದೆ. ಒಟ್ಟಿನಲ್ಲಿ ನನಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here