ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆ.13 ರವರೆಗೆ ಅಂದರೆ ಮುಂದಿಬ 9 ದಿನಗಳ ಕಾಲ ಮಾಜಿ ಇಡಿ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್ ತನ್ನ ಆದೇಶವನ್ನು ಹೊರಡಿಸಿದೆ. ಆದೇಶ ಪ್ರಕಟಣೆಯ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ತನಗೆ ಒಬ್ಬ ಪರ್ಸನಲ್ ವೈದ್ಯರನ್ನು ಹೊಂದಲು ಮನವಿಯನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಅವರಿಗೆ ಅದಕ್ಕಾಗಿ ಸಮ್ಮತಿಯನ್ನು ಸೂಚಿಸಿದೆ. ಹಾಗಾದರೆ ಡಿಕೆಶಿ ಅವರು ಯಾರನ್ನು ತಮ್ಮ ಪರ್ಸನಲ್ ಡಾಕ್ಟರ್ ಆಗಿ ಸೂಚಿಸದ್ದಾರೆ ಎಂದರೆ ಅದು ಕುಣಿಗಲ್ ನ ಶಾಸಕರಾದ ಡಾ. ರಂಗನಾಥ್ ಅವರ ಹೆಸರಾಗಿದ್ದು, ಇವರು ಡಿಕೆಶಿ ಅವರ ನಾದಿನಿಯ ಪತಿಯಾಗಿದ್ದಾರೆ.

ಶಾಸಕ ರಂಗನಾಥ್ ಅವರಿಗೆ ಡಿಕೆ ಶಿವಕುಮಾರ್ ಅವರೇ ಕಾಂಗ್ರೆಸ್‍ನಿಂದ ಟಿಕೆಟ್ ಕೊಡಿಸಿ, ಚುನಾವಣೆಯಲ್ಲಿ ಅವರು ಗೆಲ್ಲಲು ಬಹಳಷ್ಟು ಶ್ರಮ ವಹಿಸಿದ್ದರು ಎನ್ನಲಾಗಿದೆ. ಇನ್ನು ಈ ರಂಗನಾಥ್ ಅವರು ಚುನಾವಣೆ ನಂತರ ವಿಧಾನಸಭಾ ಸದಸ್ಯರಾಗಿ‌ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಅವರು ಡಿಕೆಶಿ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು. ಕಳೆದ ನಾಲ್ಕು ದಿನಗಳ ಕಾಲ ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ವಿಚಾರಣೆ ನಡೆಸಿದ್ದರು.

ವಿಚಾರಣೆಯ ಹಂತದಲ್ಲಿ ಡಿಕೆಶಿ ಅವರು ಸಹಕರಿಸಲಿಲ್ಲವೆಂಬ ಕಾರಣದಿಂದ ಇಡಿ ಅಧಿಕಾರಿಗಳು ನಿನ್ನೆ ಅಂದರೆ ಮಂಗಳವಾರ ರಾತ್ರಿ ಡಿಕೆಶಿಯನ್ನು ಬಂಧಿಸಿದ್ದರು. ಬಂಧನದ ನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆರ್.ಎಂ.ಎಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅದಾದ ನಂತರ ಇಂದು ಮಧ್ಯಾಹ್ನ ಕೋರ್ಟಿಗೆ ಡಿಕೆಶಿಯನ್ನು ಹಾಜರುಪಡಿಸಿದ ನಂತರ, ಸಂಜೆ 7.12 ರ ಸುಮಾರಿಗೆ ವಿಶೇಷ ನ್ಯಾಯಾಲಯ ಅಧಿಕಾರಿಗಳಿಗೆ ಒಂಬತ್ತು ದಿನಗಳ ಕಾಲಾವಧಿಗೆ ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here