ನಿನ್ನೆ ಸಿಎಎ ವಿರುದ್ಧ ಪ್ರತಿಭಟನೆಗಾಗಿ ಆಯೋಜಿಸಿದ್ದ ಸಭೆಯಲ್ಲಿ ಪಾಕ್ ಪರವಾಗಿ ಘೋಷಣೆ ಕೂಗಿ, ದೇಶದ್ರೋಹದ ಆರೋಪದ ಅಡಿಯಲ್ಲಿ ಈಗಾಗಲೇ ಬಂಧಿಸಲ್ಪಟ್ಟಿರುವ ಅಮೂಲ್ಯ ಲಿಯೋನಾ ಬಗ್ಗೆ ಈಗಾಗಲೇ ಸಾಕಷ್ಟು ಆಕ್ರೋಶ ಹಾಗೂ ಆಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಸಿಟ್ಟು, ಅಸಮಾಧಾನದ ಪೋಸ್ಟ್ ಗಳು , ಕಾಮೆಂಟ್ ಗಳು ಕಾಣುತ್ತಿವೆ. ಅನೇಕರು ಆಕೆಯನ್ನು ಬಿಡುಗಡೆ ಮಾಡದೇ, ದೇಶ ವಿರೋಧಿ ಘೋಷಣೆ ಮಾಡಿರುವುದಕ್ಕೆ ಸರಿಯಾದ ರೀತಿಯಲ್ಲಿ ಶಿಕ್ಷೆ ವಿಧಿಸಬೇಕು, ಆಗ ಮಾತ್ರ ಇಂತಹವರನ್ನು ಹತ್ತಿಕ್ಕಲು ಸಾಧ್ಯ ಎಂದು ಕೂಡಾ ಹೇಳುತ್ತಿದ್ದಾರೆ.

ವಿಷಯ ತೀವ್ರವಾದ ಈ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ಅವರು ಮಾತನಾಡುತ್ತಾ ಆಕೆಗೆ ಇನ್ನೂ ಮಾತನಾಡಲು ಅವಕಾಶ ನೀಡಬೇಕಿತ್ತು. ಏನು ಮಾತಾಡುವಳೆಂದು ಸ್ಪಷ್ಟತೆ ಸಿಗುತ್ತಿತ್ತು ಆದರೆ ಅದಕ್ಕೆ ಅವಕಾಶ ಸಿಕ್ಕಿಲ್ಲ ಎಂದಿದ್ದಾರೆ. ಅಲ್ಲದೇ ಈ ಹಿಂದೆ ಕೂಡಾ ಬೇರೆ ಬೇರೆ ಭಾಷಣಗಳನ್ನು ನೋಡಿದ್ದೇನೆ, ಅಂತದ್ದೇನು ಕಂಡಿಲ್ಲ ಎಂದಿದ್ದಾರೆ.

ಆಕೆ ಏನೋ ಕ್ಲಾರಿಫಿಕೇಷನ್ ನೀಡೋಕೆ ಹೋಗ್ತಾ ಇದ್ದರು‌. ಮಾತಾಡೋಕೆ ಅವಕಾಶ ನೀಡಬೇಕಿತ್ತು,ಆದರೆ ಮಧ್ಯೆ ಏನೋ ಆಗಿದೆ ಯಂಗ್ ಸ್ಟರ್ಸ್ ಎಂದ ಅವರು, ನನಗೆ ಇದರ ಬಗ್ಗೆ ಹೆಚ್ಚು ತಿಳಿದಿಲ್ಲ. ಅದಕ್ಕೆ ಇದರ ಬಗ್ಗೆ ಹೆಚ್ಚು ಏನೂ ಹೇಳುವುದಿಲ್ಲ ಎಂದು ಅಮೂಲ್ಯ ಲಿಯೋನಾ ವಿಚಾರವಾಗಿ ಮಾದ್ಯಮಗಳ ಮುಂದೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here