ಮಾಜ ಸಚಿವ, ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ್ ಅವರ. ಸ್ವ ಕ್ಷೇತ್ರದಲ್ಲಿ ಇಂದು ಅವರಿಗೆ ಟ್ರಬಲ್ ಎದುರಾಗುವಂತಹ ಪ್ರತಿಭಟನೆಗೆ ಎಲ್ಲಾ ಸಿದ್ಧತೆಗಳು ನಡೆದಿವೆ. ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ವಿಶ್ವದ ಎತ್ತರದ ಏಸು ಕ್ರಿಸ್ತನ ಪ್ರತಿಮೆಗೆ ಡಿಕೆಶಿ ಅವರು ಶಿಲಾನ್ಯಾಸ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಅದಾದ ನಂತರ ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾದರೆ, ಅನೇಕರು ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ತಮ್ಮ ಅಸಮಾಧಾನವನ್ನು ಕೂಡಾ ಹೊರಹಾಕಿದ್ದರು. ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಇಂದು ಕನಕಪುರ ಚಲೋ ಪ್ರತಿಭಟನೆಗೆ ಕರೆಯನ್ನು ನೀಡಿದೆ.

ಕನಕಪುರದಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದಿಂದ ಆರಂಭ ಮಾಡಿ, ಚನ್ನಬಸಪ್ಪ ವೃತ್ತದ ವರೆಗೆ ಕಾಲ್ನಡಿಗೆಯ ಜಾಥಾವನ್ನು ನಡೆಸಲಾಗುತ್ತಿದೆ.‌ ಜಾಥಾ ನಂತರ ಒಂದು ಬೃಹತ್ ಸಮಾವೇಶವನ್ನು ನಡೆಸಲು ಕೂಡಾ ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಗಿ ಪೋಲಿಸ್ ಬಂದೋಬಸ್ತನ್ನು ಸಜ್ಜು ಗೊಳಸಿಲಾಗಿದೆ ಎನ್ನಲಾಗಿದ್ದು, ಡಿಕೆಶಿ ಅವರು ತಮ್ಮ ಕಾರ್ಯಕರ್ತರಿಗೆ ಯಾವುದೇ ಸಂದರ್ಭದಲ್ಲಿ ಕೂಡಾ ಪ್ರಚೋದನೆಗೆ ಒಳಗಾಗಬೇಡಿ ಎಂದು ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಕನಕಪುರ ಚಲೋ ಪ್ರತಿಭಟನೆಯಲ್ಲಿ, ಹಿಂದೂ ಜಾಗರಣ ವೇದಿಕೆಯ ಜೊತೆಗೆ ಬಿಜೆಪಿಯ ನಾಯಕರು ಕೂಡಾ ಸೇರಲಿದ್ದಾರೆ ಎನ್ನಲಾಗಿದೆ. ಏಸು ಕ್ರಿಸ್ತನ ಪ್ರತಿಮೆಯ ಸ್ಥಾಪನೆಯ ವಿರೋಧದ ಪ್ರತಿಭಟನೆಯನ್ನೇ, ಬಿಜೆಪಿ ಅವಕಾಶವನ್ನಾಗಿ ಬಳಸಿಕೊಂಡು, ಕನಕಪುರದಲ್ಲಿ ತನ್ನ ಲಗ್ಗೆ ಇಡಲು ಮುಂದಾಗಿದೆ ಎಂಬುದು ಕೆಲವರ ಅಭಿಪ್ರಾಯವೂ ಆಗಿದೆ. ಈ ಮೂಲಕ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರದಲ್ಲಿ ಕೇಸರಿ ಪಾಳೆಯ ತನ್ನ ಪ್ರಭಾವ ಬೀರಲು ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here