ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿಸ್ವಾಸಮತ ಯಾಚನೆ ನಿರ್ಣಯ ಸಭೆ ಆರಂಭ ಆಗಿದೆ. ಸಭೆ ಆರಂಭವಾಗುತ್ತಿದ್ದಂತೆ ವಿಸ್ವಾಸ ನಿರ್ಣಯ ವಿಚಾರ ಬಿಟ್ಟು ಬೇರೆ ವಿಷಯಗಳ ಚರ್ಚೆ ತಾರಕಕ್ಕೇರಿದೆ. ಸಭೆ ವೇಳೆ ಕಾಂಗ್ರಸ್ ಸಚಿವ ಡಿ ಕೆ ಶಿವಕುಮಾರ್ ಅವರು ಮಾಜಿ ಸ್ಪೀಕರ್ ಬೋಪಯ್ಯ ವಿರುದ್ದ ಸಿಡಿಮಿಡಿಗೊಂಡ ಘಟನೆ ನಡೆಯಿತು. ಮಾಜಿ ಸಿಎಂ ಸಿದ್ದರಾಮ್ಯಯ ಸದನದಲ್ಲಿ ಮಾತನಾಡುತ್ತಿದ್ದ ವೇಳೆ ಸದನದಲ್ಲಿ ಕೋಲಾಹಲ ನಡೆದ ಪ್ರಸಂಗ ನಡೆಯಿತು. ಸಿದ್ದರಾಮಯ್ಯ ಪಕ್ಷಾಂತರಿಗಳ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಬಿಜೆಪಿ ನಾಯಕ ಮಾಧುಸ್ವಾಮಿ ಮಧ್ಯಪ್ರವೇಶ ಮಾಡಿದರು.

ಆಗ ಸ್ಪೀಕರ್ ರಮೇಶ್ ಕುಮಾರ್ ಎಲ್ಲರೂ ಕ್ರಮವಾಗಿ ಮಾತನಾಡಬೇಕು ಅಂತಾ ಸೂಚನೆ ನೀಡಿದರು. ಮತ್ತೆ ಸಿದ್ದರಾಮಯ್ಯ ತಮ್ಮ ಮಾತನ್ನ ಆರಂಭಿಸಿದರು. ಆಗ ಕೆಜಿ ಬೋಪಯ್ಯ ಮಧ್ಯಪ್ರವೇಶ ಮಾಡಿ ಅನಗತ್ಯ ವಿಚಾರಗಳ ಬಗ್ಗೆ ಚರ್ಚೆ ಬೇಡ.. ನೋ ಡಿಬೇಟ್ ಅಂತಾ ಹೇಳಿದರು. ಆಗ ಎದ್ದು ನಿಂತು ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ನಿಮಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ಯಲ್ಲ. ಇನ್ನೇನ್ ಬೇಕು ಅಂತಾ ಹೇಳಿದರು. ನಮಗೆ ನಿಮ್ಮ ಸಲಹೆ ಬೇಡ.

ಅಧ್ಯಕ್ಷರು ನಮಗೆ ತೀರ್ಪು ನೀಡಬೇಕು. ನಿಮ್ಮ ಮುಖಕ್ಕೆ…ನಿಮ್ಮ ಮುಖಕ್ಕೆ. ನೀವು ಬುದ್ಧಿ ಹೇಳೋಕೆ ಬರುತ್ತೀರಾ? ಯಡಿಯೂರಪ್ಪ ಆಡಳಿತದಲ್ಲಿ ಏನಾಯಿತು ಅಂತಾ ಡಿ.ಕೆ.ಶಿವಕುಮಾರ್ ಜೋರು ದನಿಯಲ್ಲಿ ಕೂಗಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here