ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಎರಡು ದಿನಗಳ ಹಿಂದೆ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಗುರೂಜಿ ಹೇಳಿರುವ ಮಾತು ಕೇಳಿ ಗಾಬರಿಯಾಗಿದ್ದಾರೆ ಎನ್ನಲಾಗಿದೆ. ಅವದೂತ ವಿನಯ್ ಗುರೂಜಿಯನ್ನು ಡಿಕೆಶಿ ಅವರು ಬೆಂಗಳೂರಿನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದ ಸಂದರ್ಭದಲ್ಲಿ, ವಿನಯ್ ಗುರೂಜಿ ಅವರು ಡಿಕೆಶಿ ಅವರ ಪರಿಸ್ಥಿತಿಯ ಬಗ್ಗೆ ಕೆಲವು ಗಮನಾರ್ಹ ವಿಚಾರಗಳನ್ನು ಹೇಳಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಡಿಕೆಶಿ ಅವರ ಸ್ಥಿತಿ ಮುಳ್ಳಿನ ಮೇಲೆ ಬಿದ್ದ ವಸ್ತ್ರದಂತೆ ಆಗಿದೆಯೆಂದು ಹೇಳಿರುವ ಗುರೂಜಿ, ಬಹಳ ಎಚ್ಚರಿಕೆಯಿಂದ ಇರಿ ಎಂಬ ಸೂಚನೆ ನೀಡಿದ್ದಾರೆ.

ಗುರೂಜಿಯ ಸಲಹೆ ಆಲಿಸಿದ ಡಿಕೆಶಿ ಅವರು ಅಮಿತ್ ಶಾ ಭೇಟಿಗೆ ನನ್ನ ಮನಸ್ಸು ಒಪ್ಪಯವುದಿಲ್ಲ ಹಾಗೂ ಪಕ್ಷ ಕೂಡ ಇದನ್ನು ಒಪ್ಪಲಾರದು ಎಂದಿದ್ದು, ತನಗೆ ಸಮಸ್ಯೆ ಇಂದ ಹೊರಬರಲು ಅನ್ಯ ಮಾರ್ಗದ ಬಗ್ಗೆ ಕೇಳಿದ್ದು, ಆಗ ವಿನಯ್ ಗುರೂಜಿ ಗುರು ಪಾರಾಯಣ ಹಾಗೂ ಜಪಮಾಲೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ಎರಡು ಎಳನೀರು ನೀಡಿ ಅದನ್ನು ಸ್ವೀಕರಿಸುವಂತೆ ಸೂಚನೆ ನೀಡಿದ್ದಾರೆ ವಿನಯ್ ಗುರೂಜಿ. ಅಲ್ಲದೆ ಡಿಕೆಶಿ ಅಮಿತ್ ಶಾ ಅವರನ್ನು ಭೇಟಿಯಾಗಲಾರೆ. ಆದರೆ ದೇವರನ್ನು ದೈವ ಶಕ್ತಿಯನ್ನು ನಂಬುತ್ತೇನೆ ಎಂದು ಹೇಳಿದ್ದಾರೆ.

ದೇವರ ಮೇಲಿನ ನಂಬಿಕೆಯಿಂದಲೇ ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದಿರುವ ಡಿಕೆಶಿ ಅವರು ವಿನಯ್ ಗುರೂಜಿ ಅವರ ಸಲಹೆ ಸೂಚನೆ ಪಡೆದು ಹಿಂದಿರುಗಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳಿಂದ ಬಂಧಿತರಾಗಿ 48 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಇದ್ದ ಮಾಜಿ ಸಚಿವರಾದ ಡಿಕೆಶಿ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here