ಕರ್ನಾಟಕ ಕಂಡ ಅತ್ಯಂತ ದಕ್ಷ ಅಧಿಕಾರಿಗಳಲ್ಲಿ ಡಿ.ಕೆ.ರವಿ ಕೂಡ ಪ್ರಮುಖರು. ನಿಗೂಡವಾಗಿ ಸಾವನ್ನಪ್ಪಿದ ಜನಪ್ರಿಯ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿ ನೆನಪು ಇನ್ನೂ ಜನಮಾನಸದಲ್ಲಿ ಹಾಗೆಯೇ ಇದೆ ಮತ್ತು ಯಾವಾಗಲೂ ಇರುತ್ತದೆ ಕೂಡ.!

ಡಿ.ಕೆ.ರವಿ ನಮ್ಮನ್ನೆಲ್ಲ ಹಗಲಿ ಮೂರು ವರ್ಷಗಳು ಕಳೆದಿವೆ. ಈ ಮೂರು ವರ್ಷಗಳಲ್ಲಿ ಡಿ.ಕೆ.ರವಿ ಅಭಿಮಾನಿಗಳು ರವಿ ಅವರನ್ನು ನೆನೆಯದ ದಿನಗಳೇ ಇಲ್ಲ ಅಂತಹ ಜನಮಾನಸದಲ್ಲಿ ಶಾಸ್ವತವಾಗಿ ನೆಲೆ ನಿಂತ ಡಿ.ಕೆ‌.ರವಿ ಸಮಾಧಿ ಮಾತ್ರ ಇನ್ನು ನೆಲೆ ಕಾಣಲೇ ಇಲ್ಲ.

ಹೌದು ನಾವು ಈಗ ಹೇಳ ಹೊರಟಿರುವುದು ಡಿ.ಕೆ.ರವಿ ಅವರ ಸಮಾಧಿಯ ಸ್ಥಳದ ಹೃದಯ ನೋಯುವಂತಹ ವಿಚಾರದ ಬಗ್ಗೆ ಇದು ಕೇವಲ ವಿಚಾರವಲ್ಲ ಅದೆಷ್ಟೋ ಡಿ.ಕೆ.ರವಿ ಅಭಿಮಾನಿಗಳ ಕೂಗು ಮತ್ತು ನೋವು.!

ಡಿ.ಕೆ.ರವಿ ಇಹಲೋಕ ತ್ಯಜಿಸಿ ಮೂರು ವರ್ಷಗಳು ಕಳೆದಿವೆ ಆದರೆ ರವಿ ಹುಟ್ಟೂರಾದ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದ ದೊಡ್ಡಕೊಪ್ಪಲಿನಲ್ಲಿರುವ ಡಿ.ಕೆ.ರವಿ ಸಮಾಧಿ ಮಾತ್ರ ಇನ್ನೂ ಒಂದು ಕಡ್ಡಿಯಷ್ಟು ಅಭಿವೃದ್ಧಿ ಕಂಡಿಲ್ಲ.

ಪ್ರತಿದಿನ ಹೋಗುವ ರವಿ ಅವರ ಅಭಿಮಾನಿಗಳು ಅವರ ಸಮಾಧಿಯ ಸ್ಥಿತಿ ನೋಡಿ ಕಣ್ಣೀರಿಡುತ್ತಾರೆ ಇದರ ಬಗ್ಗೆ ರವಿ ಕುಟುಂಬದ ಸದಸ್ಯರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಡಿ ಕೆ ರವಿ ಅವರ ಸಮಾಧಿ ಸ್ಥಳ ಈಗಲೂ ಉರಿ ಬಿಸಿಲಿನಲ್ಲಿ ಒಣಗುತ್ತಿದೆ.

ಇದರ ಬಗ್ಗೆ ಜಿಲ್ಲಾಡಳಿತ ಅಥವಾ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಎಂದು ಡಿ.ಕೆ.ರವಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.
ರವಿ ಅವರ ಸಾವನ್ನು ಸಿ.ಬಿ.ಐ ಗೆ ವಹಿಸಿ ನ್ಯಾಯ ಕೊಡಿಸುವ ಕೆಲಸ ಮಾಡಿದ್ದ ರಾಜ್ಯ ಸರ್ಕಾರ ಮಾತ್ರ

ಡಿ.ಕೆ.ರವಿ ಅವರ ಸಮಾಧಿ ಅಭಿವೃದ್ಧಿ ಪಡಿಸುವ ಮನಸ್ಸು ಮಾಡಿಲ್ಲ. ಕನಿಷ್ಟ ಪಕ್ಷ ರವಿ ಮಣ್ಣಾದ ಜಾಗದಲ್ಲಿ ದೊಡ್ಡ ಮಟ್ಟದ ಗೋರಿ ನಿರ್ಮಿಸುವುದಿರಲಿ ಸಣ್ಣ ಪ್ರಮಾಣದ ಸಾಮಾನ್ಯವಾದ ಒಂದು ಕಲ್ಲನ್ನಾಗಲಿ ಅಥವಾ ಗಿಡವನ್ನಾಗಲಿ ನೆಡುವಷ್ಟು ಶಕ್ತಿಯನ್ನು

ಸರ್ಕಾರ ಕಳೆದುಕೊಂಡಿದೆಯಾ ಎಂಬ ಪ್ರೆಶ್ನೆ ನಿತ್ಯ ನಿರಂತರವಾಗಿ ಕೇಳಿಬರುತ್ತಿದೆ.
ಇದರ ಬಗ್ಗೆ ಸರ್ಕಾರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಈಗಲಾದರೂ

ಗಮನ ಹರಿಸಲಿ ಎಂಬುದೇ ಸುದ್ದಿಮನೆಯ ಆಶಯ.! ಸಾವಿನಲ್ಲೂ ನೆಮ್ಮದಿ ಕಾಣದ ಸಾವಿರಾರು ಜನಗಳ ಆಶಾಕಿರಣವಾಗಿದ್ದ ಡಿ.ಕೆ.ರವಿ ಆತ್ಮ ಈಗಲಾದರು ಶಾಂತಿಯಿಂದ ಇರಲು ಸಂಬಂಧ ಪಟ್ಟ ಅಧಿಕಾರಿಗಳು ಅವಕಾಶ ಮಾಡಿಕೊಡಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here