ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ವಿಚಾರಣೆಯಲ್ಲಿ ಬಂಧಿತರಾಗಿದ್ದಾರೆ ಮಾಜಿ‌ ಸಚಿವ ಡಿಕೆ ಶಿವಕುಮಾರ್ ಅವರು. ಈಗ ಪ್ರಕರಣದಲ್ಲಿ ಅಧಿಕಾರಿಗಳು ಶಿವಕುಮಾರ್ ಅವರ ಆಪ್ತರ ಕಡೆ ಕೂಡಾ ತಮ್ಮ ಗಮನವನ್ನು ಹರಿಸಿದ್ದಾರೆ. ಮುಖ್ಯವಾಗಿ ಆಸ್ತಿ ವಿವರಗಳು ಹೊರ ಬಂದಿದ್ದು, ಡಿಕೆಶಿ ಅವರ ಪುತ್ರಿ ಐಶ್ವರ್ಯ ಕೇವಲ ಹತ್ತು ವರ್ಷಗಳ ಅಂತರದಲ್ಲಿ ರೂಪಾಯಿ 9.50 ಲಕ್ಷಗಳಿಂದ 108 ಕೋಟಿ ರೂಗಳಷ್ಟು ಆಸ್ತಿಯ ಒಡತಿಯಾಗಿದ್ದಾರೆಂದು ತಿಳಿದು ಬಂದಿದೆ. 2004 ರಿಂದ 2018 ರವರೆಗೆ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಡಿಕೆಶಿ ಅವರು ಸ್ಪರ್ಧೆ ಮಾಡಿದ್ದಾರೆ.

ಆ ಸಂದರ್ಭದಲ್ಲಿ ಅವರು ನೀಡಿರುವ ಮಾಹಿತಿಯಲ್ಲಿ ಅವರ ಮಗಳ ಆಸ್ತಿ ವಿವರಗಳನ್ನು ಕೂಡಾ ನೀಡಿದ್ದಾರೆ. ಅಲ್ಲದೆ ಅವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಡಿಕೆಶಿ ಐಶ್ವರ್ಯ ಅವರ ಹೆಸರಿನಲ್ಲೇ ಹೆಚ್ಚು ಆಸ್ತಿಯನ್ನು ಮಾಡಿದ್ದಾರೆ. 2008 ರ ಚುನಾವಣೆಯ ವೇಳೆಯಲ್ಲಿ, ಐಶ್ವರ್ಯ ಅವರಿಗೆ 12 ವರ್ಷ ವಯಸ್ಸು. ಆ ಸಂದರ್ಭದಲ್ಲಿ ಅವರ ಹೆಸರಲ್ಲಿ 9.50 ಲಕ್ಷ ರೂ ಆಸ್ತಿ ಹಾಗೂ 950 ಗ್ರಾಂ ಚಿನ್ನಾಭರಣ ಇರುವುದಾಗಿ ಡಿಕೆಶಿ ಘೋಷಣೆ ಮಾಡಿದ್ದರು. ಇದಾದ ನಂತರ ಅವರು 2013 ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಮಗಳು ತಮ್ಮಿಂದ 65 ಲಕ್ಷ ಸಾಲ ಪಡೆದು ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಆದರೆ ಆ ಅಪಾರ್ಟ್ಮೆಂಟ್ ನ ಮಾರುಕಟ್ಟೆ ಬೆಲೆ ಸುಮಾರು ಒಂದು ಕೋಟಿ ಎಂಬುದು ಗಮನಾರ್ಹ ವಿಷಯ.

ಇನ್ನು ಆಕೆಯ ಬಳಿ ಇದ್ದ ಚಿನ್ನಾಭರಣಗಳ ಮೊತ್ತ ಸೇರಿದರೆ ಆಗ ಆಕೆ 1.09 ಕೋಟಿಯ ಒಡತಿ. ಆದರೆ 2013 ರಲ್ಲಿ ಕೇವಲ ಒಂದು ಕೋಟಿಯ ಒಡತಿಯಾಗಿದ್ದ ಡಿಕೆಶಿ ಅವರ ಮಗಳು ಐಶ್ವರ್ಯ ಅವರ ಆಸ್ತಿಯ ಮೊತ್ತ 2018 ರ ಚುನಾವಣೆ ವೇಳಗೆ 108 ಕೋಟಿ ರೂಗಳಾಗಿದೆ. ಇದನ್ನು ಆಕೆಯ ತಂದೆ ಡಿಕೆ ಶಿವಕುಮಾರ್ ಅವರೇ 2018 ರ ಚುನಾವಣೆಯ ವೇಳೆ ತಮ್ಮ ಹಾಗೂ ಕುಟುಂಬದವರ ಆಸ್ತಿ ವಿವರ ಘೋಷಣೆ ಮಾಡುವ ಸಂದರ್ಭದಲ್ಲಿ ನೀಡಿರುವ ಮಾಹಿತಿಯಾಗಿದೆ. ಆಕೆಯ ಹೆಸರಿನಲ್ಲಿರುವ ಕೃಷಿ ಭೂಮಿಯ ಬೆಲೆ 27.50 ಲಕ್ಷ ಎಂದು, ಅದು ಬಿಟ್ಟು ಕೃಷಿಯೇತರ ಭೂಮಿಯ ಮೌಲ್ಯ 25.30 ಕೋಟಿ ಹಾಗೂ ವಾಸವಿರುವ ಮನೆಯ ಮೌಲ್ಯ 1.20 ಕೋಟಿ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here